Lahore Declaration : ಭಾರತದ ಜೊತೆಗಿನ ಲಾಹೋರ್ ಒಪ್ಪಂದ ಮುರಿದಿದ್ದು ನಮ್ಮ ತಪ್ಪು ! – ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ನವಾಜ್ ಶರೀಫ್

ಕಾರ್ಗಿಲ್ ಯುದ್ಧದ ತಪ್ಪನ್ನು ಒಪ್ಪಿಕೊಂಡ ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ನವಾಜ್ ಶರೀಫ್ !

ಭಾರತದ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ನವಾಜ್ ಶರೀಫ್ವಾ

ಲಾಹೋರ್ (ಪಾಕಿಸ್ತಾನ್) – ೨೮ ಮೇ ೧೯೯೮ ರಂದು ಪಾಕಿಸ್ತಾನವು ೫ ಪರಮಾಣು ಪರೀಕ್ಷೆಗಳನ್ನು ನಡೆಸಿತು. ಅದರ ನಂತರ ಭಾರತದ ತತ್ಕಾಲಿನ ಪ್ರಧಾನಮಂತ್ರಿ ವಾಜಪೇಯಿ ಅವರು ಇಲ್ಲಿಗೆ ಬಂದು ನಮ್ಮ ಜೊತೆಗೆ ಲಾಹೋರ್ ಒಪ್ಪಂದ ಮಾಡಿಕೊಂಡರು; ಆದರೆ ನಾವು ಆ ಒಪ್ಪಂದವನ್ನು ಮುರಿದೆವು; ಇದು ನಮ್ಮ ತಪ್ಪಾಗಿದೆ, ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಅಧಿಕಾರದಲ್ಲಿರುವ ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್ ಪಕ್ಷದ ಅಧ್ಯಕ್ಷ ನವಾಜ್ ಶರೀಫ್ ಅವರು ಒಪ್ಪಿಕೊಂಡಿದ್ದಾರೆ. ೧೯೯೯ ರಲ್ಲಿ ಕಾರ್ಗಿಲ್ ಯುದ್ಧ ನಡೆಸಿ ಪಾಕಿಸ್ತಾನವು ಈ ಒಪ್ಪಂದವನ್ನು ಮುರಿದಿತ್ತು. ಆಗ ಪಾಕ್ ಸೈನ್ಯದಳದ ಪ್ರಮುಖ ಹಾಗೂ ಪ್ರಧಾನಿಯಾಗಿದ್ದ ಪರವೇಜ್ ಮುಷರ್ರಫ್ ಅವರು ಕಾರ್ಗಿಲ್ ಮೇಲೆ ಹಿಡಿತ ಪಡೆಯುವ ಪ್ರಯತ್ನ ನಡೆಸಿದ್ದರು ಎಂದು ಶರೀಫ್ ಬಹಿರಂಗಗೊಳಿಸಿದರು.

ಲಾಹೋರ್ ಒಪ್ಪಂದದಲ್ಲಿ ಏನಿತ್ತು ?

ಶರೀಫ್ ಮತ್ತು ವಾಜಪೇಯಿ ಅವರು ಲಾಹೋರದಲ್ಲಿ ಐತಿಹಾಸಿಕ ಶೃಂಗ ಸಭೆಯ ನಂತರ ೨೧ ಫೆಬ್ರುವರಿ ೧೯೯೯ ರಂದು ಲಾಹೋರ್ ಒಪ್ಪಂದದ ಮೇಲೆ ಸಹಿ ಹಾಕಿದರು. ಅದರ ನಂತರ ಎರಡು ದೇಶಗಳು ಶಾಂತಿ ಮತ್ತು ಸ್ಥಿರತೆಯ ಅಂಶಗಳನ್ನು ಮಂಡಿಸುತ್ತಾ ಭವಿಷ್ಯದಲ್ಲಿ ದೃಢವಾದ ಸಂಬಂಧಕ್ಕೆ ಶಕ್ತಿ ನೀಡಿದ್ದರು. ಈ ಒಪ್ಪಂದದ ಶರತ್ತಿನ ಪ್ರಕಾರ ಪರಮಾಣು ಶಸ್ತ್ರಾಸ್ತ್ರದ ವಿಕಾಸಕ್ಕಾಗಿ ಅಥವಾ ಅದರ ಉಪಯೋಗ ತಪ್ಪಿಸುವುದಕ್ಕಾಗಿ ಎರಡು ದೇಶದಲ್ಲಿ ಪರಸ್ಪರ ಹೊಂದಾಣಿಕೆಯಾಗಿತ್ತು. ಈ ಒಪ್ಪಂದದಿಂದ ಎರಡು ದೇಶದಲ್ಲಿನ ಪರಮಾಣು ಸ್ಪರ್ಧೆ ಹಾಗೂ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಸಂಘರ್ಷ ತಪ್ಪಿಸುವುದಕ್ಕಾಗಿ ಎರಡು ದೇಶದ ಸರ್ಕಾರದ ಮೇಲೆ ಹೆಚ್ಚುವರಿ ಜವಾಬ್ದಾರಿ ಇತ್ತು. ಆದರೆ ಈ ಒಪ್ಪಂದದ ಮೇಲೆ ಸಹಿ ಹಾಕಿದ ಕೆಲವೇ ತಿಂಗಳ ನಂತರ ಪಾಕಿಸ್ತಾನವು ಜಮ್ಮು ಕಾಶ್ಮೀರದಲ್ಲಿ ನಡೆಸಿರುವ ನುಸುಳುವಿಕೆಯಿಂದ ಕಾರ್ಗಿಲ್ ಯುದ್ಧ ನಡೆಯಿತು.