ಪಾಟಲಿಪುತ್ರ – ಶೇಖಪುರಾ ಜಿಲ್ಲೆಯ ಒಂದು ಸರಕಾರಿ ಶಾಲೆಯ 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತೀವ್ರ ಬಿಸಿಲಿಗೆ ಹಠಾತ್ ಮೂರ್ಛೆ ಹೋಗಿದ್ದಾರೆ. ಇದರಿಂದ ಗೊಂದಲ ಸೃಷ್ಟಿಯಾಯಿತು. ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದರೂ ಅದು ಸಕಾಲಕ್ಕೆ ಬಾರದೆ ವಿದ್ಯಾರ್ಥಿನಿಯರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯ ಇಲಾಖೆಯ ಬೇಜವಾಬ್ದಾರಿಯಿಂದ ಜನರು ಬೀದಿಗಿಳಿದಿದ್ದರು.
ರಾಜ್ಯದಲ್ಲಿ ವಿಪರೀತ ಬಿಸಿಲಿನ ಉಷ್ಣತೆ ಇರುವಾಗಲೂ ಶಾಲೆಗಳು ನಡೆಯುತ್ತಿವೆ. ಮೇ 29ರಂದು ಬೆಳಗ್ಗೆ ಇದ್ದಕ್ಕಿದ್ದಂತೆ ಅರಿಯಾರಿ ಬ್ಲಾಕ್‌ನ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿಯರು ಮೂರ್ಛೆ ಹೋಗಿದ್ದಾರೆ. ಆಸ್ಪತ್ರೆಯ ವೈದ್ಯ ಸತ್ಯೇಂದ್ರಕುಮಾರ ಮಾತನಾಡಿ, ಜಿಲ್ಲೆಯಲ್ಲಿ ವಿಪರೀತ ಉಷ್ಣತೆಯಿದೆ. ಹಾಗಾಗಿ ಮಕ್ಕಳ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ಈ ಘಟನೆ ನಡೆದಿದೆ. ಮಕ್ಕಳ ಮೇಳೆ ಚಿಕಿತ್ಸೆ ಮುಂದುವರಿದಿದೆ ಎಂದು ಹೇಳಿದ್ದಾರೆ.
5 ನಗರಗಳಲ್ಲಿ ತಾಪಮಾನ 45 ಡಿಗ್ರಿಗಿಂತ ಹೆಚ್ಚು !
ಬಿಹಾರದ 5 ನಗರಗಳಲ್ಲಿ ತಾಪಮಾನ 45 ಡಿಗ್ರಿಗಿಂತ ಹೆಚ್ಚಿದೆ. ಬಿಹಾರದ ಔರಂಗಾಬಾದ್‌ನಲ್ಲಿ ಗರಿಷ್ಠ ತಾಪಮಾನ 47.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಡೆಹರಿಯಲ್ಲಿ 47 ಡಿಗ್ರಿ ಸೆಲ್ಸಿಯಸ್, ಅರವಲ 46.9 ಡಿಗ್ರಿ, ಗಯಾದಲ್ಲಿ 46.8 ಡಿಗ್ರಿ ಮತ್ತು ಬಕ್ಸರನಲ್ಲಿ 46.4 ಡಿಗ್ರಿ ಗರಿಷ್ಠ ತಾಪಮಾನ ದಾಖಲಾಗಿದೆ. ರಾಜಧಾನಿ ಪಾಟಲಿಪುತ್ರದಲ್ಲಿ ತಾಪಮಾನ 42.8 ಡಿಗ್ರಿಗಳಷ್ಟಿದೆ.