AC for Ramlalla : ಹೆಚ್ಚುತ್ತಿರುವ ಉಷ್ಣತೆಯಿಂದ ಶ್ರಿರಾಮಲಲ್ಲಾಗೆ ಎ.ಸಿ. ವ್ಯವಸ್ಥೆ !

ಅಯೋಧ್ಯೆ(ಉತ್ತರಪ್ರದೇಶ) – ದೇಶದ ಅನೇಕ ಸ್ಥಳಗಳಲ್ಲಿ ತಾಪಮಾನ ೪೦ ಡಿಗ್ರಿ ತಲುಪಿದೆ. ಹವಾಮನ ಇಲಾಖೆ ಈ ಹಿಂದೆಯೇ ದೇಶದಲ್ಲಿ ಬಿಸಿಗಾಳಿಯ ಬಗ್ಗೆ ಎಚ್ಚರಿಕೆ ನೀಡಿತ್ತು. ಅಯೋಧ್ಯೆಯಲ್ಲಿ ತಾಪಮಾನ ೪೧ ಡಿಗ್ರಿ ತಲುಪಿದೆ. ಆದಕಾರಣ ಇಲ್ಲಿನ ಶ್ರಿರಾಮಮಂದಿರದಲ್ಲಿ ಶ್ರಿರಾಮಲಲ್ಲಾಗೆ ಈಗ ಎ.ಸಿ. ವ್ಯವಸ್ಥೆ ಅಳವಡಿಸಲಾಗುವುದು, ಹಾಗೆಯೇ ಶ್ರಿರಾಮಲಲ್ಲಾರ ವೇಷಭೂಷಣಗಳಲ್ಲಿಯೂ ಬದಲಾವಣೆ ಮಾಡಲಾಗಿದೆ. ಶ್ರಿರಾಮಲಲ್ಲಾಗೆ ಹಗುರವಾಗಿ ಕಸೂತಿ ಮಾಡಿದ ಹತ್ತಿ ಬಟ್ಟೆಗಳನ್ನು ಹಾಕುವುದರ ಜೊತೆಗೆ ಹಗುರವಾದ ಆಭರಣಗಳಿಂದ ಅಲಂಕರಿಸಲಾಗುವುದು. ಪ್ರತಿದಿನ ಮೊಸರು ಅಥವಾ ಲಸ್ಸಿಯೊಂದಿಗೆ ಕಾಲೋಚಿತ ಸಿಗುವ ರಸಭರಿತ ಹಣ್ಣುಗಳನ್ನು ಅರ್ಪಿಸಿಲಾಗುತ್ತಿದೆ. ಇದರಲ್ಲಿ ಮಾವು, ಲಿಚಿ, ಕಲ್ಲಂಗಡಿ ಇತ್ಯಾದಿ ಸೇರಿವೆ.

ಸ್ವಾಮಿ ರಾಜಕುಮಾರ ದಾಸ್ ಮಾತನಾಡಿ, ವಿಗ್ರಹದ ಪ್ರಾಣಪ್ರತಿಷ್ಟಾಪನೆಯ ನಂತರ ವಿಗ್ರಹದಲ್ಲಿ ಜೀವ ಬರುತ್ತದೆ. ಬಳಿಕ ದೇವರಿಗೂ ಹಸಿವು ಮತ್ತು ಬಾಯಾರಿಕೆ ಉಂಟಾಗುತ್ತದೆ. ದೇವರು ಭಕ್ತರಿಗೆ ಕಾಲಕಾಲಕ್ಕೆ ಕನಸಿನಲ್ಲಿ ಅಥವಾ ಇತರ ವಿಧಾನಗಳಿಂದ ಇದರ ಅರಿವು ಮಾಡಿಕೊಡುತ್ತಾರೆ; ಆದ್ದರಿಂದ ನಾವು ಶ್ರಿರಾಮಲಲ್ಲಾನನ್ನು ಮಗುವಿನಂತೆ ಪ್ರತಿಯೊಂದು ಸೌಲಬ್ಯಗಳ ಬಗ್ಗೆ ಕಾಳಜಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.