ನವದೆಹಲಿ – ಸನಾತನ ಹಿಂದೂ ಧರ್ಮ, ಸಂಸ್ಕೃತಿ ಮತ್ತು ಭಾರತದ ಸಂಪ್ರದಾಯಗಳನ್ನು ನಾಶ ಮಾಡುವುದೇ ಕಾಂಗ್ರೆಸ್‌ನ ಗುರಿಯಾಗಿದೆ. ಇದು ಆ ಕಾಂಗ್ರೆಸ್ ಅಲ್ಲ, ಆ ಕಾಂಗ್ರೆಸ್ ನ ಸ್ಥಾಪನೆ ದೇಶದ ಹಿತಕ್ಕಾಗಿ ಮಾಡಲಾಗಿತ್ತು. ಈಗಿನ ಕಾಂಗ್ರೆಸ್ ಭಾರತೀಯ ಸಂಸ್ಕೃತಿಯಿಂದ ದೂರ ಹೋಗಿದೆ. ಸನಾತನ ಧರ್ಮವನ್ನು ನಾಶಗೊಳಿಸುವುದೇ ಅವರ ಕನಸಾಗಿದೆ. ಹಿಂದೂ ಎಂಬ ಹೆಸರಿನ ಒಂದು ಶಕ್ತಿ ಇದೆ, ಅದನ್ನು ನಾವು ನಾಶ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ, ಎಂದು ಕಾಂಗ್ರೆಸ್ಸಿನ ಮಾಜಿ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಹೇಳಿದ್ದಾರೆ. ಸುದ್ದಿ ವಾಹಿನಿಯೊಂದರ ಜೊತೆ ಅವರು ಮಾತನಾಡುತ್ತಿದ್ದರು.
The Congress party’s only dream is to destroy Sanatan Dharma! – Acharya Pramod Krishnam, former #Congress leader
This is the statement about Congress by an Acharya who had devoted his whole and soul to the party for many decades.
From this, the Hindu-hating nature of the… pic.twitter.com/AkYuwWrqtR
— Sanatan Prabhat (@SanatanPrabhat) May 27, 2024
ಆಚಾರ್ಯ ಕೃಷ್ಣಂ ಇತ್ತೀಚೆಗೆ ಕಾಂಗ್ರೆಸ್ ತೊರೆದಿದ್ದಾರೆ. ಅವರು ಮುಂದೆ ಮಾತನಾಡುತ್ತಾ, ‘ಕಾಂಗ್ರೆಸ್ಸಿನ ನಾಯಕ ರಾಹುಲ್ ಗಾಂಧಿ ಅವರು ಯಾವತ್ತೂ ‘ಭಾರತ್ ಮಾತಾ ಕಿ ಜೈ’, ‘ವಂದೇ ಮಾತರಂ’ ಘೋಷಣೆಗಳನ್ನು ಹೇಳುವುದನ್ನು ನೋಡಿಲ್ಲ. ಅವರು ಯಾವತ್ತೂ ‘ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ’, ‘ಮಹಾರಾಣಾ ಪ್ರತಾಪ್ ಕೀ ಜೈ’, ‘ಗುರು ಗೋವಿಂದ್ ಸಿಂಗ್ ಮಹಾರಾಜ್ ಕೀ ಜೈ’ ಎಂದೂ ಹೇಳಿಲ್ಲ. ಹಾಗೆಯೇ ‘ಭಗವಾನ್ ಶ್ರೀಕೃಷ್ಣ ಕೀ ಜೈ’, ‘ಪ್ರಭು ಶ್ರೀರಾಮಚಂದ್ರ ಕೀ ಜೈ’ ಎಂಬ ಘೋಷಣೆಗಳು ಕೂಡ ಅವರ ಬಾಯಿಂದ ಯಾವತ್ತೂ ಕೇಳಲಿಲ್ಲ. ‘ಗೌಮಾತಾ ಕಿ ಜೈ’, ‘ಗಂಗಾ ಮಾತಾ ಕಿ ಜೈ’ ಎಂಬ ಘೋಷಣೆಗಳು ಅವರ ಬಾಯಿಂದ ಬರಲೇ ಇಲ್ಲ ಎಂದು ಕೃಷ್ಣಂ ಟೀಕಿಸಿದರು.
ಸಂಪಾದಕೀಯ ನಿಲುವುಕಾಂಗ್ರೆಸ್ ಪಕ್ಷಕ್ಕಾಗಿ ಅನೇಕ ದಶಕಗಳಿಂದ ಸರ್ವಸ್ವವನ್ನೂ ಮುಡಿಪಾಗಿಟ್ಟ ಆಚಾರ್ಯರ ಈ ಹೇಳಿಕೆಯಿಂದ ಕಾಂಗ್ರೆಸ್ಸಿನ ಹಿಂದೂದ್ವೇಷದ ಸ್ವರೂಪವು ಇನ್ನಷ್ಟು ಬಲವಾಗಿ ಹೊರಬರುತ್ತದೆ ! |