ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದಲ್ಲಿನ ಪಂಜಾಬ್ ಪ್ರಾಂತ್ಯದಲ್ಲಿನ ಸರಗೋಧಾ ಇಲ್ಲಿಯ ಮುಜಾಹಿದ ಅಪಾರ್ಟ್ಮೆಂಟ್ ನಲ್ಲಿ ಮತಾಂಧ ಮುಸಲ್ಮಾನರ ಗುಂಪು ಕ್ರೈಸ್ತರ ಮನೆಯ ಮೇಲೆ ದಾಳಿ ಮಾಡಿದೆ. ಕುರಾನ್‌ಗೆ ಅವಮಾನ ಮಾಡಿದ ಆರೋಪದ ಮೇರೆಗೆ ದಾಳಿ ಮಾಡಲಾಗಿತ್ತು. ಪೊಲೀಸರು ಆಕ್ರೋಶಗೊಂಡಿರುವ ಮತಾಂಧ ಮುಸಲ್ಮಾನರ ಗುಂಪಿನಿಂದ ೨ ಕ್ರೈಸ್ತರ ಕುಟುಂಬವನ್ನು ಬಿಡುಗಡೆಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ೧೫ ಜನರನ್ನು ಬಂಧಿಸಲಾಗಿದೆ. ಈಗ ಇಲ್ಲಿ ಹೆಚ್ಚುವರಿ ಪೋಲಿಸ್ ಬಂದೋಬಸ್ತ ಮಾಡಲಾಗಿದೆ. ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗದಿಂದ ಈ ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಲಾಗಿದೆ.
(ಸೌಜನ್ಯ : FPJ)
ನಾಸಿರ ಎಂಬ ಯುವಕನು ಓರ್ವ ಕ್ರೈಸ್ತನೊಂದಿಗೆ ಸೇರಿ ಕುರಾನ್ ಸುಟ್ಟಿದ್ದಾರೆ ಎಂದು ಆರೋಪಿಸುತ್ತ ಇಲ್ಲಿಯ ಮುಸಲ್ಮಾನ ಸಮುದಾಯದವರು ಪರಿಸರದಲ್ಲಿನ ಕ್ರೈಸ್ತರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಈ ಸಮಯದಲ್ಲಿ ಅವರ ಮನೆಯ ಬಾಗಿಲು ಮತ್ತು ಕಿಡಕಿಗಳನ್ನು ಧ್ವಂಸ ಗೊಳಿಸಿದರು ಹಾಗೂ ಮನೆಯ ವಸ್ತುಗಳಿಗೆ ಬೆಂಕಿ ಹಚ್ಚಲಾಯಿತು. ನಾಸಿರ್ ಇವನ ಬೂಟು ತಯಾರಿಕೆಯ ಕಾರಖಾನೆ ಇರುವುದು ಅವನನ್ನು ಕೂಡ ಬೆಂಕಿಯಲ್ಲಿ ನೂಕಲಾಯಿತು. ನಾಸಿರಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಆದರಿಂದ ಅವನ ಸ್ಥಿತಿ ಗಂಭೀರವಾಗಿದ್ದು ಅವನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಆಸ್ಟಿನ್ ಮತ್ತು ಮಹೇಶ ವಾಸು ಇವರು ‘ಸನಾತನ ಪ್ರಭಾತ’ದ ಪ್ರತಿನಿಧಿಗಳಿಗೆ ಈ ವಿಷಯದ ಬಗ್ಗೆ ಮಾಹಿತಿ ನೀಡಿದರು. ಈ ಘಟನೆಯ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿವೆ.
ಸಂಪಾದಕೀಯ ನಿಲುವುಪಾಕಿಸ್ತಾನದಲ್ಲಿ ಬರುವ ಕೆಲವು ವರ್ಷದಲ್ಲಿ ಕ್ರೈಸ್ತರ ಮತ್ತು ಹಿಂದುಗಳ ಅಸ್ತಿತ್ವ ಉಳಿಯುವುದೇ ಅಥವಾ ಇಲ್ಲವೋ ? ಇಂತಹ ಪರಿಸ್ಥಿತಿ ಇದೆ. ಇದರ ಬಗ್ಗೆ ಜಗತ್ತಿನಲ್ಲಿನ ಒಂದೇ ಒಂದು ದೇಶ ಕೂಡ ಮಾತನಾಡುವುದಿಲ್ಲ ! |