Bengaluru Traffic Fine Scam : ಮೃತ ಟ್ರಾಫಿಕ್ ಹೆಡ್ ಕಾನ್ಸ್‌ಟೇಬಲ್ ಹೆಸರಲ್ಲಿ ‘ಟ್ರಾಫಿಕ್ ಫೈನ್’ ವಸೂಲಿ ಮಾಡ್ತಿದ್ದ ಆರೋಪಿಗಳ ಬಂಧನ

ಬಂಧಿತ ೩ ಜನರು ಬಂಗಾಲ ರಾಜ್ಯದ ನಿವಾಸಿಗಳು !

ಬೆಂಗಳೂರು – ಬೆಂಗಳೂರು ಪೊಲೀಸರ ಹೆಸರಿನಲ್ಲಿ ‘ಟ್ರಾಫಿಕ್ ಫೈನ್’ (ಸಾರಿಗೆ ನಿಯಮ ಉಲ್ಲಂಘನೆ ದಂಡ) ವಿಧಿಸುವ ೩ ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಜನರು ಓರ್ವ ಮೃತ ಪೊಲೀಸ ಹವಾಲ್ದಾರನ ಗುರುತಿನ ಚೀಟಿ ವಾಟ್ಸಪ್ ಮೂಲಕ ಸಾಮಾನ್ಯ ಜನರಿಗೆ ಕಳುಹಿಸುತ್ತಿದ್ದರು. ಅದರೊಂದಿಗೆ ‘ಯುಪಿಐ ಐಡಿ’ ಕಳುಹಿಸಿ ಸಾರಿಗೆ ನಿಯಮ ಉಲ್ಲಂಘಿಸಿದ್ದೀರಿ ಎಂದು ಹೇಳುತ್ತಾ ಮೊಬೈಲ್ ಮೂಲಕವೇ ದಂಡ ವಸೂಲಿ ಮಾಡುತ್ತಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಅಪರಾಧ ಶಾಖೆಯ ಪೊಲೀಸರು ೩ ಜನರನ್ನು ಬಂಧಿಸಿದ್ದಾರೆ. ಮೂವರು ಬಂಗಾಲದ ನಿವಾಸಿಗಳಾಗಿದ್ದು ರಂಜನಕುಮಾರ ಫೋರ್ಬಿ, ಇಸ್ಮಾಯಿಲ್ ಅಲಿ ಮತ್ತು ಸುಭೀರ್ ಮಲಿಕ್ ಎಂದು ಗುರುತಿಸಲಾಗಿದೆ.

ಸ್ವಂತ ತಂದೆಯ ಹೆಸರಿನಲ್ಲಿ ಈ ರೀತಿ ನಡೆಯುತ್ತಿರುವುದು ಗಮನಕ್ಕೆ ಬಂದ ನಂತರ ಮೃತ ಹವಾಲ್ದಾರನ ಮಗಳು ಪೊಲೀಸ ಠಾಣೆಗೆ ಬಂದು ದೂರು ನೀಡಿದ ನಂತರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಸಂಪಾದಕೀಯ ನಿಲುವು

ಅಪರಾಧ ಯಾವ ಮಟ್ಟಕ್ಕೆ ಹೋಗಿದೆ ? ಇದು ಇದರಿಂದ ಗಮನಕ್ಕೆ ಬರುತ್ತದೆ. ಜನರು ವಂಚನೆಗೊಳಗಾಗಬಾರದು ಇದಕ್ಕಾಗಿ ಪೊಲೀಸ ಇಲಾಖೆಯಿಂದ ಇದಕ್ಕಾಗಿ ಉಪಾಯ ಯೋಜನೆ ಮಾಡಬೇಕು !