ಹಿಂದುಗಳ ಮೆರವಣಿಗೆಯ ಮೇಲೆ ದಾಳಿ ನಡೆಸಿದ್ದ ೧೮ ಮುಸಲ್ಮಾನರಿಗೆ ಜಾಮೀನು !

ಜೈಪುರ (ರಾಜಸ್ಥಾನ) – ‘ಸಮೂಹಕ್ಕೆ ಯಾವುದೇ ಧರ್ಮ ಇರುವುದಿಲ್ಲ’, ಎಂದು ಟಿಪ್ಪಣಿ ಮಾಡುತ್ತಾ ರಾಜಸ್ಥಾನದ ಉಚ್ಚ ನ್ಯಾಯಾಲಯವು ಒಂದು ಪ್ರಕರಣದಲ್ಲಿ ೧೮ ಮುಸಲ್ಮಾನ ಜನರಿಗೆ ಜಾಮೀನು ನೀಡಿದೆ. ಈ ಪ್ರಕರಣ ಬಾಬು ಮಹಮ್ಮದ್ ವಿರುದ್ಧ ರಾಜಸ್ಥಾನ ಸರಕಾರ ಹೀಗೆ ಇತ್ತು. ಮಾರ್ಚ್ ೧೯, ೨೦೨೪ ರಂದು ರಾಜ್ಯದಲ್ಲಿ ಚಿತ್ತೋಡಗಡದಲ್ಲಿ ಹಿಂದುಗಳ ಮೆರವಣಿಗೆಯ ಮೇಲೆ ದಾಳಿ ನಡೆಸಿದ ಸಮೂಹದ ೧೮ ಜನ ಮುಸಲ್ಮಾನರು ಸಹಭಾಗಿದ್ದರು. ಸೆಶನ್ಸ್ ನ್ಯಾಯಾಲಯವು ಬಂದಿಸಲಾಗಿರುವ ಎಲ್ಲಾ ೧೮ ಜನರ ಜಾಮೀನು ಅರ್ಜಿಯನ್ನು ತಳ್ಳಿ ಹಾಕಲಾಗಿತ್ತು. ಇದಕ್ಕೆ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು.

ಈ ಪ್ರಕರಣದ ವಿಚಾರಣೆ ನಡೆಸುವಾಗ ರಾಜಸ್ಥಾನ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಫರ್ಜದ ಅಲಿ ಇವರು,

೧. ಎರಡು ಭಿನ್ನ ಜನಾಂಗದಲ್ಲಿ ಹಿಂಸಾಚಾರ ನಡೆದರೆ ಮತ್ತು ಧಾರ್ಮಿಕ ಭಾವನೆಗಳಿಗೂ ಧಕ್ಕೆ ಉಂಟಾಗಿರ ಬಹುದು, ಹೀಗೆ ಇದ್ದರೂ, ಆದರೂ ವಿವಾದ ನಿರ್ಮಾಣ ಮಾಡುವುದಕ್ಕಾಗಿ ಮತ್ತು ಜನರಿಗೆ ಆಘಾತ ಮಾಡುವುದಕ್ಕಾಗಿ ಯಾರು ಜವಾಬ್ದಾರರು ? ಇದನ್ನು ನಿಶ್ಚಯಿಸುವುದು ಕಠಿಣವಾಗಿದೆ.

೨. ಸಮೂಹಕ್ಕೆ ಯಾವುದೇ ಧರ್ಮ ಇರುವುದಿಲ್ಲ. ಯಾವಾಗ ಜನರ ದೊಡ್ಡ ಗುಂಪಿನಿಂದ ಯಾವುದಾದರೂ ಘಟನೆ ನಡೆಯುತ್ತದೆ, ಆಗ ಅಪರಾಧಿ ಯಾರು? ಮತ್ತು ಯಾರು ನಿರಪರಾಧಿ? ಇದನ್ನು ಹುಡುಕುವುದು ಬಹಳ ಕಠಿಣವಾಗಿರುತ್ತದೆ.೩. ಅರ್ಜಿದಾರರು ದೋಷಿ ಇರುವರು ಅಥವಾ ಇಲ್ಲ? ಇದರ ಬಗ್ಗೆ ಯಾವುದಾದರೂ ಹೇಳಿಕೆ ನೀಡುವುದು ಈಗ ಯೋಗ್ಯವಾಗಲಾರದು.

೪. ಹಿಂಸಾಚಾರದಿಂದ ಮೃತ್ಯು ಆಗಿಲ್ಲ, ಹೃದಯಾಘಾತದಿಂದ ಆಗಿದೆ; ಕಾರಣ ಮೃತನ ಮೊಳಕಾಲಿನ ಮೇಲೆ ಕೇವಲ ಒಂದು ಪುಟ್ಟ ಗಾಯವಿತ್ತು, ಅದು ಸಾವಿಗೆ ಕಾರಣವಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಏನು ಈ ಪ್ರಕರಣ ?

ರಾಜ್ಯದಲ್ಲಿನ ಚಿತ್ತೊಡಗಡ ಇಲ್ಲಿ ಮಾರ್ಚ್ ೨೦೨೪ ರಲ್ಲಿ ಭಗವಾನ ಚಾರಭೂಜನಾಥ ಇವರ ಮೆರವಣಿಗೆಯ ಸಮಯದಲ್ಲಿ ಕೆಲವು ಮತಾಂಧ ಮುಸಲ್ಮಾನರಿಂದ ದಾಳಿ ಮಾಡಲಾಗಿತ್ತು. ಆ ಸಮಯದಲ್ಲಿ ಅವರು ಕಲ್ಲುತೂರಾಟ ಕೂಡ ನಡೆಸಿದ್ದರು ಹಾಗೂ ವಾಹನಗಳು ಮತ್ತು ಅಂಗಡಿಗಳು ಕೂಡ ಸುಡಲಾಗಿದ್ದವು. ಈ ಹಿಂಸಾಚಾರದಲ್ಲಿ ಓರ್ವ ಹಿಂದೂ ಸಾವನ್ನಪ್ಪಿದ್ದನು.