ಚೀನಾ ಪರವಾಗಿರುವ ಮಾಲ್ಡೀವ್ಸ್ ಭಾರತದ ‘ರುಪೇ ಕಾರ್ಡ್’ ಸೇವೆಯನ್ನು ಪ್ರಾರಂಭಿಸಲಿದೆ !

ಮಾಲೆ(ಮಾಲ್ಡೀವ್ಸ್) – ಭಾರತವು ಚೀನಾದ ಪರವಾಗಿರುವ ಮಾಲ್ಡೀವಿಯನ್ನರ ಸೊಕ್ಕನ್ನು ಚೆನ್ನಾಗಿಯೇ ಮುರಿದಿದೆ. ಕಳೆದ 4-5 ತಿಂಗಳಲ್ಲಿ ಮಾಲ್ಡೀವ್ಸ್ ಪ್ರವಾಸೋದ್ಯಮಕ್ಕೆ ತೆರಳುವ ಭಾರತೀಯರ ಸಂಖ್ಯೆ ಶೇ.42ರಷ್ಟು ಕಡಿಮೆಯಾಗಿದೆ. ಆದ್ದರಿಂದ, ಪ್ರವಾಸೋದ್ಯಮ ಆಧಾರಿತ ಅರ್ಥವ್ಯವಸ್ಥೆಯನ್ನು ಹೊಂದಿರುವ ಮಾಲ್ಡೀವ್ಸನ ಅಹಂಕಾರ ಇಂಗು ತಿಂದ ಮಂಗನಂತೆ ಆಗಿದೆ. ಇದರಿಂದ ಭಾರತೀಯ ಪ್ರವಾಸಿಗರನ್ನು ಸೆಳೆಯಲು ಮಾಲ್ಡೀವ್ಸ್ ಭಾರತೀಯ ‘ರುಪೇ ಕಾರ್ಡ್’ ಸೇವೆ ಆರಂಭಿಸಲು ನಿರ್ಧರಿಸಿದೆ ಎನ್ನಲಾಗಿದೆ. ಮಾಲ್ಡೀವ್ಸ್‌ನ ಆರ್ಥಿಕ ಅಭಿವೃದ್ಧಿ ಮತ್ತು ವ್ಯಾಪಾರ ಸಚಿವ ಮೊಹಮ್ಮದ್ ಸಯೀದ್ ಮಾತನಾಡಿ, ಇದರಿಂದ ಮಾಲ್ಡೀವ್ಸ್‌ನ ಚಾಲನೆಯಲ್ಲಿರುವ `ರುಫಿಯಾ’ ಸಶಕ್ತವಾಗಲಿದೆ ಎಂದು ಹೇಳಿದ್ದಾರೆ. ಈ ಕಾರ್ಡ್ ಯಾವಾಗ ಜಾರಿಯಾಗಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವ ಇಬ್ರಾಹಿಂ ಫೈಸಲ್ ಅವರು ಉಭಯ ದೇಶಗಳ ನಡುವಿನ ಸಂಬಂಧದ ಮೇಲೆ ಒತ್ತು ನೀಡಿ, ಭಾರತದೊಂದಿಗೆ ಒಟ್ಟಾಗಿ ಕೆಲಸ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ನಮ್ಮ ಆರ್ಥಿಕತೆಯು ಪ್ರವಾಸೋದ್ಯಮವನ್ನು ಅವಲಂಬಿಸಿದೆ ಎಂದು ಅವರು ಈ ಹಿಂದೆ ಸ್ಪಷ್ಟವಾಗಿ ಹೇಳಿದ್ದರು. ಪ್ರವಾಸೋದ್ಯಮ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಈ ವರ್ಷದ ಜನವರಿಯಿಂದ ಏಪ್ರಿಲ್ ವರೆಗಿನ ಅವಧಿಯಲ್ಲಿ 42 ಸಾವಿರದ 638 ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಾರೆ; ಆದರೆ ಕಳೆದ ವರ್ಷ 73 ಸಾವಿರ 785 ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದರು.

‘ರುಪೇ ಕಾರ್ಡ್’ ಎಂದರೇನು?

`ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ’ದ `ರುಪೇ ಕಾರ್ಡ್’ ಇದು ‘ಗ್ಲೋಬಲ್ ಕಾರ್ಡ್ ಪೇಮೆಂಟ್ ನೆಟ್‌ವರ್ಕ್‌’ನಲ್ಲಿ ಸೇರ್ಪಡೆಗೊಂಡ ಭಾರತದಲ್ಲಿನ ಮೊದಲ ಕಾರ್ಡ್ ಆಗಿದೆ `ಎಟಿಎಂ’ಗಳ ಮೂಲಕ ಪಾವತಿಸಲು, ವಸ್ತುಗಳ (ನೇರ) ಖರೀದಿ ಮತ್ತು ಮಾರಾಟ ಹಾಗೂ ಇ-ಕಾಮರ್ಸ್ (ಆನ್‌ಲೈನ್ ಖರೀದಿ ಮತ್ತು ಮಾರಾಟ) ವೆಬ್‌ಸೈಟ್‌ಗಳಲ್ಲಿ ಭಾರತದಲ್ಲಿ ಎಲ್ಲೆಡೆ ಅದನ್ನು ಸ್ವೀಕರಿಸಲಾಗುತ್ತದೆ.

ಸಂಪಾದಕೀಯ ನಿಲುವು

  • ಭಾರತೀಯ ಪ್ರವಾಸಿಗರನ್ನು ಸೆಳೆಯಲು ಮಾಲ್ಡೀವ್‌ನ ಕುತಂತ್ರ !
  • ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಶೇ. 42 ರಷ್ಟು ಕುಸಿದಿದ್ದರಿಂದ ಮಾಲ್ಡೀವ್ಸ್ ಗೆ ದೊಡ್ಡ ಹೊಡೆತ !
  • ಚೀನಾದ ತಾಳಕ್ಕೆ ತಕ್ಕಂತೆ ಕುಣಿದು ಭಾರತದೊಂದಿಗೆ ವೈರತ್ವವನ್ನು ಸಾಧಿಸಿರುವ ಮಾಲ್ಡೀವ್ಸ್‌ಗೆ ಈಗ ಭಾರತವೂ ‘ರುಪೇ ಕಾರ್ಡ್’ ಸೇವೆ ಆರಂಭಿಸುವುದನ್ನು ವಿರೋಧಿಸಿ ಅದಕ್ಕೆ ಅದರ ಸ್ಥಾನವನ್ನು ತೋರಿಸಿಕೊಡಬೇಕು !