ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಗಾಯ
ಮುರಾದಾಬಾದ (ಉತ್ತರಪ್ರದೇಶ) – ಲೂಟಿ ಮಾಡಿ ತಂದಿರುವ ವಸ್ತುಗಳನ್ನು ಹಿಂಪಡೆಯುವದಕ್ಕಾಗಿ ಪಾಕಬಾಡ ಪ್ರದೇಶಕ್ಕೆ ಹೋಗಿದ್ದ ತಮಿಳುನಾಡು ಪೊಲೀಸರ ಮೇಲೆ ಅಪರಾಧಿ ಪ್ರವೃತ್ತಿಯ ಮುಸಲ್ಮಾನರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಈ ದಾಳಿಯ ಪ್ರಕರಣದಲ್ಲಿ ಪೊಲೀಸರು ೧೫ ಜನರ ವಿರುದ್ಧ ದೂರು ದಾಖಲಿಸಿಕೊಂಡು ಕೆಲವರನ್ನು ಬಂಧಿಸಿದ್ದಾರೆ .
೧ . ಏಪ್ರಿಲ್ ೬ ರಂದು ತಮಿಳುನಾಡಿನಲ್ಲಿನ ಬಿಲ್ಲುಪುರಂನ ನಿವಾಸಿಯಾದ ಗೀತಾದೇವಿ ಅವರ ಮನೆಗೆ ದುಷ್ಕರ್ಮಿಗಳು ದರೋಡೆ ನಡೆಸಿದ್ದರು. ತಮಿಳುನಾಡು ಪೋಲಿಸರು ನಡೆಸಿರುವ ತನಿಖೆಯಿಂದ ಕೆಲವು ಜನರನ್ನು ಬಂಧಿಸಲಾಗಿತ್ತು. ಈ ಕಳ್ಳರು, ಲೂಟಿ ಮಾಡಿರುವ ವಸ್ತುಗಳನ್ನು ಪಾಕಬಾಡ ಮುರಾದಾಬಾದದ ಓರ್ವ ಚಿನ್ನ ಬೆಳ್ಳಿ ವ್ಯಾಪಾರಿಗೆ ಮಾರಿದ್ದರು.
೨. ನಂತರ ತಮಿಳುನಾಡು ಪೊಲೀಸರು ಪಾಕಬಾಡ ಪೊಲೀಸರನ್ನು ಸಂಪರ್ಕಿಸಿದರು . ತಮಿಳುನಾಡು ಪೊಲೀಸರ ತಂಡ ಪಾಕಬಾಡದ ಚಿನ್ನ ಬೆಳ್ಳಿ ಮಾರುಕಟ್ಟೆಯಲ್ಲಿನ ನಿವಾಸಿ ಅಕಬರ ಮತ್ತು ಯೂಸಫ್ ಅವರ ಅಂಗಡಿಗೆ ತಲುಪಿ ತಪಾಸಣೆ ಆರಂಭಿಸಿದಾಗ ಇತರ ವ್ಯಾಪಾರಿಗಳು ಅದನ್ನು ವಿರೋಧಿಸಿದರು. ಕೆಲವರು ಪೊಲೀಸರಿಗೆ ಬೈಗುಳ ಬೈದರು. ಈ ಗಲಾಟೆಯನ್ನು ಕೇಳಿ ಅನೇಕ ಜನ ಸೇರಿದರು. ಆ ಬಳಿಕ ನೆರೆದ ಗುಂಪಿನಿಂದ ಪೊಲೀಸರ ಮೇಲೆ ದಾಳಿ ನಡೆಯಿತು.
Mu$|!m$ attack Tamil Nadu Police during a raid to recover stolen goods in Moradabad (Uttar Pradesh).
— 2 police sub-inspectors injured.
👉 Tight Slap those who believe ‘Mu$|!m$ are unsafe in India’.
👉 It is unfortunate to have such incidents in a BJP ruled State.
👉 The… pic.twitter.com/5rtu8McEOV
— Sanatan Prabhat (@SanatanPrabhat) May 24, 2024
೩. ಈ ದಾಳಿಯ ಮಾಹಿತಿ ಪಾಕಬಾಡ ಪೊಲೀಸ್ ಠಾಣೆಗೆ ನೀಡಿದ ನಂತರ ಹೆಚ್ಚುವರಿ ಪೊಲೀಸ್ ಪಡೆಯ ಸಹಿತ ಹಿರಿಯ ಅಧಿಕಾರಿಗಳು ಅಲ್ಲಿಗೆ ತಲುಪಿದರು. ಅಲ್ಲಿಯವರೆಗೆ ಈ ದಾಳಿಯಲ್ಲಿ ಪೊಲೀಸ್ ಅಧಿಕಾರಿ ಕುಲದೀಪ ತೋಮಾರ್ ಮತ್ತು ಆಕಾಶ ತ್ಯಾಗಿ ಗಾಯಗೊಂಡಿದ್ದರು. ಪೊಲೀಸ್ ಪಡೆ ಬಂಡಿದ್ದನ್ನು ನೋಡಿ ದಾಳಿಕೋರರು ಪರಾರಿಯಾದರು. ಈ ಘಟನೆಯಲ್ಲಿ ನಾಲ್ವರನ್ನು ಬಂಧಿಸಲಾಯಿತು .
೪ . ಪೊಲೀಸರು ಅಕ್ಬರ್, ಯೂಸುಫ್, ಫರಜಾನ್, ಯೂನುಸ್, ಅಬ್ದುಲ್ ಗನಿ, ವಾಸಿಂ, ಹನೀಫ್ ಮೆಡ್ಡ, ಸಾಯರಾ ಬಾನು, ಹಿನಾ ಪರವಿನ್ ಮತ್ತು ೬ ಅಜ್ಞಾತ ಪುರುಷರು ಮತ್ತು ಮಹಿಳೆಯರ ವಿರುದ್ಧ ಗಲಭೆ ಮತ್ತು ಸರಕಾರಿ ಕಾರ್ಯದಲ್ಲಿ ಅಡಚಣೆ ಮಾಡುವುದು, ಹೊಡೆಯುವುದು, ಪೊಲೀಸರ ಮೇಲೆ ದಾಳಿ ಮಾಡುವುದು ಮುಂತಾದ ಕಲಂ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.