ಪ್ರಧಾನಮಂತ್ರಿ ಮೋದಿ ಇವರಿಂದ ವಾಗ್ದಾಳಿ !
ಶಿಮ್ಲಾ (ಹಿಮಾಚಲ ಪ್ರದೇಶ) – ಪ್ರಧಾನಮಂತ್ರಿ ನರೇಂದ್ರ ಮೋದಿ ಮೇ ೨೪ ರಂದು ಹಿಮಾಚಲ ಪ್ರದೇಶದ ಪ್ರವಾಸದಲ್ಲಿದ್ದರು. ಅವರು ನಾಹಾನ್, ಸಿರಮೌರ್ ಮತ್ತು ಮಂಡಿಯಲ್ಲಿ ನಡೆದ ಬಹಿರಂಗ ಸಭೆಗೆ ಉದ್ದೇಶಿಸಿ ಮಾತನಾಡಿದರು. ಆಗ ಅವರು, ಕಾಂಗ್ರೆಸ್ ಗೆ ಎಲ್ಲರ ಮೀಸಲಾತಿ ಕಸಿದು ‘ವೋಟ್ ಜಿಹಾದ’ ಬಗ್ಗೆ ಮಾತನಾಡುವ ಮುಸಲ್ಮಾನರಿಗೆ ನೀಡುವುದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದನಂತರ ಓಬಿಸಿಯ (ಹಿಂದುಳಿದ ವರ್ಗದವರ) ಅಧಿಕಾರವನ್ನು ಕಸಿದು ಅದನ್ನು ಮುಸಲ್ಮಾನರಿಗೆ ನೀಡಲಾಗಿದೆ. ಕಾಂಗ್ರೆಸ್ ಮತ್ತು ‘ಇಂಡಿ’ ಮೈತ್ರಿಕೂಟದ (ಕಾಂಗ್ರೆಸ್ ಮತ್ತು ಮಿತ್ರ ಪಕ್ಷದ ಮೈತ್ರಿಕೂಟ) ಷಡ್ಯಂತ್ರವಾಗಿದೆ, ಇದನ್ನು ತಿಳಿದುಕೊಳ್ಳಿ, ಎಂದು ಪ್ರಧಾನಮಂತ್ರಿಗಳು ಈ ಸಮಯದಲ್ಲಿ ಹೇಳಿದರು.
ಪ್ರಧಾನಮಂತ್ರಿಗಳು ಮಾತು ಮುಂದುವರೆಸುತ್ತಾ,
೧. ಜನರು ಕಾಂಗ್ರೆಸ್ ಯುಗ ನೋಡಿದ್ದಾರೆ. ಆ ಸಮಯದಲ್ಲಿ ಪಾಕಿಸ್ತಾನ ನಮ್ಮ ಹೆಗಲೇರಿ ಕುಣಿಯುತ್ತಿತ್ತು ಮತ್ತು ಕಾಂಗ್ರೆಸ್ ಸರಕಾರ ಮಾತ್ರ ಜಗತ್ತಿನಾದ್ಯಂತ ಸಹಾಯಕ್ಕಾಗಿ ತಿರುಗುತ್ತಿತ್ತು.
೨. ಭಾರತ ಇನ್ನೂ ಮುಂದೆ ಜಗತ್ತಿನಲ್ಲಿ ಹಣ ಕೇಳುವುದಿಲ್ಲ. ಭಾರತ ಸ್ವಂತ ಬಲದಲ್ಲಿ ಹೋರಾಡುತ್ತಿದೆ. ಭಾರತ ಮನೆಗೆ ನುಗ್ಗಿ ಹೊಡೆಯುತ್ತಿದೆ. ಇಂದು ಪಾಕಿಸ್ತಾನದ ಅವಸ್ಥೆ ಏನಾಗಿದೆ ?, ಇದನ್ನು ನೀವು ನೋಡಬಹುದು.
೩. ಕಾಂಗ್ರೆಸ್ ತನ್ನನ್ನು ಕಾಪಾಡಿಕೊಳ್ಳಲು ಭಾರತದ ಗಡಿ ಭಾಗವನ್ನು ಬಿಟ್ಟಿತು. ಯಾವಾಗ ಗಡಿಯಲ್ಲಿ ರಸ್ತೆ ನಿರ್ಮಾಣದ ಪ್ರಸಂಗ ಬಂದಿತೋ, ಆಗ ಅದು ಹೆದರಿತು. ಅದಕ್ಕೆ, ರಸ್ತೆ ತಯಾರಿಸಿದರೆ ಶತ್ರು ಒಳಗೆ ಬರಬಹುದು ಎಂದು ಭಯ ಇತ್ತು. ನಾವು ಗಡಿಯಲ್ಲಿ ಮೂಲಭೂತ ಸೌಲಭ್ಯಗಳು ಒದಗಿಸಿದೆವು. ಇದರಿಂದ ಗಡಿಯಲ್ಲಿ ವಾಸಿಸುವವರಿಗೆ ಮತ್ತು ಸೈನಿಕರಿಗೆ ಅವರ ಜೀವನ ಸುಲಭವಾಯಿತು.