Hamas Tortures Israeli Lady Soldiers : ಹಮಾಸ್ ಭಯೋತ್ಪಾದಕರಿಂದ 5 ಇಸ್ರೇಲಿ ಮಹಿಳಾ ಸೈನಿಕರಿಗೆ ಕಿರುಕುಳ !

ಟೆಲ್ ಅವೀವ್ – ಗಾಜಾ ಗಡಿಯ ಬಳಿಯ ನಹಾಲ್ ಓಜ್ ನೆಲೆಯಲ್ಲಿದ್ದ ಐವರು ಇಸ್ರೇಲಿ ಮಹಿಳಾ ಸೈನಿಕರನ್ನು ಹಮಾಸ್ ಭಯೋತ್ಪಾದಕರು ಅಪಹರಿಸಿದ್ದಾರೆ. ಇಸ್ರೇಲ್‌ನ ಒತ್ತೆಯಾಳು ಮತ್ತು ಮಿಸ್ಸಿಂಗ್ ಫ್ಯಾಮಿಲಿ ಫೋರಮ್ ಹೊಸ ವೀಡಿಯೊ ಅನ್ನು ಬಿಡುಗಡೆ ಮಾಡಿದೆ. ಹಮಾಸ್ ಭಯೋತ್ಪಾದಕರು ಈ 5 ಮಹಿಳಾ ಇಸ್ರೇಲಿ ಸೈನಿಕರನ್ನು ಒತ್ತೆಯಾಳಾಗಿ ತೆಗೆದುಕೊಂಡಿರುವಂತೆ ತೋರುತ್ತಿದೆ. 3 ನಿಮಿಷಗಳ ವೀಡಿಯೊದಲ್ಲಿ, ಹಮಾಸ್ ಭಯೋತ್ಪಾದಕರು ಈ ಮಹಿಳಾ ಸೈನಿಕರ ಕೈಕಾಲುಗಳನ್ನು ಕಟ್ಟಿಹಾಕುತ್ತಿರುವುದನ್ನು ಕಾಣಬಹುದು. ಅಪಹರಣಕ್ಕೊಳಗಾದ ಮಹಿಳಾ ಸೈನಿಕರನ್ನು ಹಮಾಸ್ ಭಯೋತ್ಪಾದಕರು ಹೊಡೆದು ಗಾಯಗೊಳಿಸಿದ್ದು ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.

ಹಮಾಸ್ ಅನ್ನು ಕೊನೆಗೊಳಿಸುವ ನನ್ನ ಸಂಕಲ್ಪ ಇನ್ನಷ್ಟು ಬಲವಾಗಿದೆ! – ಇಸ್ರೇಲಿ ಪ್ರಧಾನಿ ನೆತನ್ಯಾಹು

ಇಸ್ರೇಲಿ ಪ್ರಧಾನಿ ನೆತನ್ಯಾಹು

ಈ ವೀಡಿಯೊ ಬೆಳಕಿಗೆ ಬಂದ ನಂತರ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಾತನಾಡಿ, “ನಮ್ಮ ಸೈನಿಕರಿಗೆ ಹಮಾಸ್ ನೀಡಿದ ಹಿಂಸೆಗಳನ್ನು ನೋಡಿದಾಗ ಅವರನ್ನು ಮುಗಿಸುವ ನನ್ನ ದೃಢ ಸಂಕಲ್ಪ ಮತ್ತಷ್ಟು ಬಲವಾಗಿದೆ. ಅಕ್ಟೋಬರ್ 7 ರಂದು ಇಸ್ರೇಲ್‌ನಲ್ಲಿ ಹಮಾಸ್ ದಾಳಿ ನಡೆಸಿದಂತಹ ದಾಳಿ ಮತ್ತೆ ಎಂದಿಗೂ ನಡೆಯುವುದಿಲ್ಲ ಎಂದು ಕಠೋರವಾಗಿ ನುಡಿದರು.

ನೆತನ್ಯಾಹು ರಾಜೀನಾಮೆಗೆ ಆಗ್ರಹ !

ಈ ಯುದ್ಧ ಆರಂಭವಾದಾಗಿನಿಂದ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಮಾಸ್ ನಿರ್ಮೂಲನೆ ಮತ್ತು ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆಯ ಬಗ್ಗೆ ಮಾತನಾಡುತ್ತಿದ್ದಾರೆ; ಆದರೆ ಇನ್ನೂ ಅನೇಕ ಒತ್ತೆಯಾಳುಗಳು ಹಮಾಸ್ ವಶದಲ್ಲಿದ್ದಾರೆ. ಪರಿಣಾಮವಾಗಿ, ಇಸ್ರೇಲಿ ನಾಗರಿಕರು ಪ್ರಧಾನಿ ನೆತನ್ಯಾಹು ಮತ್ತು ಅವರ ಸರ್ಕಾರದ ವಿರುದ್ಧ ಹೆಚ್ಚು ಅಸಮಾಧಾನ ಹೊಂದಿದ್ದಾರೆ. ರಾಜಧಾನಿ ಟೆಲ್ ಅವೀವ್ ಸೇರಿದಂತೆ 50 ವಿವಿಧ ಸ್ಥಳಗಳಲ್ಲಿ ಸರ್ಕಾರದ ವಿರುದ್ಧ ಸಾವಿರಾರು ಜನರು ಬೀದಿಗಿಳಿದಿದ್ದಾರೆ. ನೆತನ್ಯಾಹು ರಾಜೀನಾಮೆ ನೀಡಿ ದೇಶದಲ್ಲಿ ಅವಧಿಪೂರ್ವ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

ಹಮಾಸ್ ಬೆಂಬಲಿಗರು ಈ ಬಗ್ಗೆ ಏಕೆ ಮೌನವಾಗಿದ್ದಾರೆ ?