ಮಮತಾ ಬ್ಯಾನರ್ಜಿ ಸರಕಾರವು ಭಾರತ ಸೇವಾಶ್ರಮ ಸಂಘದ ಆಶ್ರಮ ನೆಲಸಮ ಮಾಡಲಿದ್ದು ಆಶ್ರಮಕ್ಕೆ ರಕ್ಷಣೆ ನೀಡಿ; ಮಹಂತರಿಂದ ಉಚ್ಚ ನ್ಯಾಯಾಲಯದಲ್ಲಿ ಮನವಿ

  • ಬಂಗಾಳದಲ್ಲಿ ಧಾರ್ಮಿಕ ಆಶ್ರಮಗಳಿಗೂ ಕಾಡುತ್ತಿರುವ ಅಪಾಯ !

  • ಮೇ ೨೪ ರಂದು ಸಾಧು-ಸಂತರು ರಸ್ತೆಗಿಳಿದು ಪ್ರತಿಭಟನೆ ನಡೆಸಲು ನಿರ್ಧಾರ !

ಕೊಲಕಾತಾ – ಬಂಗಾಲದಲ್ಲಿನ ಭಾರತ ಸೇವಾಶ್ರಮ ಸಂಘದ ಮುಖ್ಯಸ್ಥ ಕಾರ್ತಿಕ ಮಹಾರಾಜ ಅಲಿಯಾಸ್ ಸ್ವಾಮಿ ಪ್ರದೀಪಾನಂದ ಅವರು ತಮ್ಮ ಆಶ್ರಮದ ಮೇಲೆ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಭೀತಿ ವ್ಯಕ್ತಪಡಿಸಿದ್ದಾರೆ. ನಮ್ಮ ಆಶ್ರಮ ನೆಲೆಸಮ ಮಾಡಲಿದ್ದು ಆಶ್ರಮಕ್ಕೆ ರಕ್ಷಣೆ ನೀಡಿ ಎಂದು ಅವರು ಉಚ್ಚ ನ್ಯಾಯಾಲಯಕ್ಕೆ ಆಗ್ರಹಿಸಿದ್ದಾರೆ. ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಒಂದು ಹೇಳಿಕೆಯ ಬಳಿಕ ಬೆಲಡಾಂಗ ನ ಭಾರತ ಸೇವಾಶ್ರಮ ಸಂಘದ ಆಶ್ರಮ ನೆಲಸಮ ಮಾಡುವ ಮಾಹಿತಿ ದೊರೆತಿದೆ ಎಂದು ತಿಳಿಸಿದರು.

ಇದರ ವಿರುದ್ಧ ರಾಮಕೃಷ್ಣ ಮಿಷನ್ ಮತ್ತು ಭಾರತ ಸೇವಾಶ್ರಮ ಸಂಘ ಈ ಎರಡೂ ಸಂಘಟನೆಯ ಸಾಧು ಸನ್ಯಾಸಿಗಳು ಮೇ ೨೪ ರಂದು ಬೀದಿಗೆ ಇಳಿದು ಪ್ರತಿಭಟನೆ ನಡೆಸಲಿದ್ದಾರೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಮಕೃಷ್ಣ ಮಿಷನ್ ಮತ್ತು ಭಾರತ ಸೇವಾಶ್ರಮ ಸಂಘದವರನ್ನು ಆರೋಪಿಸಿ, ಈ ಎರಡು ಸಂಘಟನೆಯ ಕೆಲವು ಸಾಧುಗಳು ಬಿಜೆಪಿಯ ಆದೇಶದ ಮೇರೆಗೆ ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಟೀಕೆಯನ್ನು ವಿರೋಧಿಸಿ ಕಾರ್ತಿಕ ಮಹಾರಾಜ್ ಅವರು ಮುಖ್ಯಮಂತ್ರಿಗಳಿಗೆ ಕಾನೂನು ನೋಟಿಸ್ ಕೂಡ ಕಳುಹಿಸಿದ್ದರು. ಮುಖ್ಯಮಂತ್ರಿಗಳು ಸಾಧುಗಳನ್ನು ಅವಮಾನಗೊಳಿಸಲು ಪ್ರಯತ್ನಿಸಿದ್ದಾರೆಂದು ಆರೋಪಿಸಿ ಅವರು ಕ್ಷಮೆ ಯಾಚಿಸಬೇಕೆಂದು ನೋಟೀಸ್ ನಲ್ಲಿ ಆಗ್ರಹಿಸಿದ್ದಾರೆ.

ರಾಮಕೃಷ್ಣ ಮಿಷನ್ ಆಶ್ರಮದ ಮೇಲೆ ದಾಳಿ !

ಇನ್ನೊಂದೆಡೆ ಬಂಗಾಲದ ಭಾಜಪ ನಾಯಕ ಅಮಿತ್ ಮಾಳವಿಯ ಅವರು, ತೃಣಮೂಲ ಕಾಂಗ್ರೆಸ್ಸಿನ ಮುಖ್ಯಸ್ಥರ ಹೇಳಿಕೆಯ ನಂತರ ಜಲಪಾಯಿಗುಡಿಯಲ್ಲಿರುವ ರಾಮಕೃಷ್ಣ ಮಿಷನ್ ಆಶ್ರಮದ ಮೇಲೆ ದಾಳಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೂಡ ಈ ದಾಳಿಯನ್ನು ಖಂಡಿಸಿದ್ದಾರೆ.

ಆಚಾರ್ಯ ಪ್ರಣವಾನಂದ ಮಹಾರಾಜ್ ಅವರು ೧೯೧೭ ರಲ್ಲಿ ಭಾರತ ಸೇವಾಶ್ರಮ ಸಂಘದ ಸ್ಥಾಪನೆ ಮಾಡಿದ್ದರು. ಈ ಸಂಸ್ಥೆಯು ಕಳೆದ ೧೦೭ ವರ್ಷಗಳಿಂದ ಜನರ ಸೇವೆಯಲ್ಲಿ ಕಾರ್ಯನಿರತವಾಗಿದೆ. ಆಚಾರ್ಯ ಪ್ರಣವಾನಂದ ಮಹಾರಾಜ ಅವರು ಬಾಬಾ ಗಂಭೀರ ನಾಥ್ ಅವರ ಶಿಷ್ಯರಾಗಿದ್ದರು. ಆಚಾರ್ಯ ಪ್ರಣವಾನಂದ ಮಹಾರಾಜ ಅವರು ಸ್ವಾತಂತ್ರ್ಯ ಚಳುವಳಿಯಲ್ಲಿ ಕೂಡ ಸಕ್ರಿಯರಾಗಿದ್ದರು. ಭಾರತ ಸೇವಾಶ್ರಮ ಸಂಘದ ಪ್ರಧಾನ ಕಚೇರಿಯು ರಾಶಬಿಹಾರಿ ಅವೆನ್ಯು, ಕೊಲಕಾತಾದಲ್ಲಿದೆ ಮತ್ತು ಜಗತ್ತಿನಾದ್ಯಂತ ಈ ಸಂಸ್ಥೆಯ ೪೬ ಕೇಂದ್ರಗಳಿವೆ.

ಸಂಪಾದಕೀಯ ನಿಲುವು

ಸಾಧು-ಸಂತರನ್ನು ರಸ್ತೆಗಿಳಿಯಲು ಅನಿವಾರ್ಯಗೊಳಿಸಿರುವ ಮಮತಾ ಬ್ಯಾನರ್ಜಿ ಸರಕಾರವನ್ನು ಒಂದು ದಿನ ಹಿಂದೂಗಳು ಬೀದಿಗೆ ತರದೇ ಬಿಡುವುದಿಲ್ಲ !