ಇರಾನ್ ರಾಷ್ಟ್ರಪತಿಯ ಸಾವು; ಕೋಡಿಮಠದ ಸ್ವಾಮೀಜಿಯವರ ಭವಿಷ್ಯ ನಿಜವಾಗಿರುವ ಬಗ್ಗೆ ಚರ್ಚೆ !

೨೦೨೪ ರಲ್ಲಿ ೧ – ೨ ರಾಷ್ಟ್ರ ಪ್ರಮುಖರ ನಿಧನವಾಗುವುದೆಂದು ಭವಿಷ್ಯ ನುಡಿದಿದ್ದರು .

ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ

ಬೆಂಗಳೂರು (ಕರ್ನಾಟಕ) – ಇರಾನ್ ರಾಷ್ಟ್ರಪತಿ ಇಬ್ರಾಹಿಂ ರೈಸಿ ಅವರು ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದ ಬಳಿಕ ಕರ್ನಾಟಕದಲ್ಲಿನ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಈ ಹಿಂದೆ ನುಡಿದಿರುವ ಭವಿಷ್ಯ ನಿಜವಾಗಿದೆ ಎಂದು ಚರ್ಚೆ ನಡೆಯುತ್ತಿದೆ. ಈ ವರ್ಷದ ಪ್ರಾರಂಭದಲ್ಲಿ ಗದಗಿನಲ್ಲಿ ಭವಿಷ್ಯ ಹೇಳುವಾಗ ಸ್ವಾಮೀಜಿ, ಕಳೆದ ವರ್ಷಕ್ಕಿಂತಲೂ ಈ ವರ್ಷ ಹೆಚ್ಚು ಕಷ್ಟಗಳು ಬರುವುದು, ಅಕಾಲ ಮಳೆಯಾಗುವುದು, ಲಕ್ಷಾಂತರ ಜನರಿಗೆ ಸಮಸ್ಯೆಗಳು ನಿರ್ಮಾಣವಾಗುವುದು. ಪ್ರಕೃತಿ ವಿಕೋಪವಾಗುವುದು, ಭೂಕಂಪ ಮತ್ತು ಜಲ ಸಂಕಷ್ಟ ಎದುರಿಸಬೇಕಾಗುವುದು. ಅದರ ಜೊತೆಗೆ ಈ ವರ್ಷ ಜಗತ್ತಿನಲ್ಲಿ ಓರ್ವ ದೊಡ್ಡ ಸಂತರ ಹತ್ಯೆಯಾಗುವುದು, ಹಾಗೂ ೧ – ೨ ರಾಷ್ಟ್ರ ಪ್ರಮುಖರ ನಿಧನ ಕೂಡ ವಾಗುವುದು, ಎಂದು ಹೇಳಿದ್ದರು. ದೇಶದಲ್ಲಿ ಅಸ್ಥಿರತೆ, ಯುದ್ಧಭೀತಿ ಪರಮಾಣು ಬಾಂಬ್ ಸ್ಫೋಟ ಆಗುವ ಸಾಧ್ಯತೆ ಇರುವುದು. ಈ ವರ್ಷದಲ್ಲಿ ಅನೇಕ ದುರ್ಘಟನೆಗಳು ಘಟಿಸುವುದು ಎಂದು ಸ್ವಾಮೀಜಿ ಭವಿಷ್ಯ ಹೇಳಿದ್ದರು.

ಸ್ವಾಮೀಜಿಯವರ ಈ ಭವಿಷ್ಯದ ಒಂದೇ ತಿಂಗಳೊಳಗೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ನಡೆದು ಅನೇಕ ಜನರು ಗಂಭೀರವಾಗಿ ಗಾಯಗೊಂಡಿದ್ದರು. ಕೆಲವೇ ದಿನಗಳ ಹಿಂದೆ ಸ್ಲೋವ್ಹಾಕಿಯಾದ ಪ್ರಧಾನಮಂತ್ರಿ ರಾಬರ್ಟ್ ಪಿಕೋ ಅವರ ಮೇಲೆ ಗುಂಡು ಹಾರಿಸಲಾಗಿತ್ತು. ಅವರಿಗೆ ೫ ಗುಂಡು ತಗಳಿದ್ದರೂ ಅವರು ಬದುಕುಳಿದಿದ್ದಾರೆ.