Myanmar Civil War : ಮ್ಯಾನ್ಮಾರ್: ಗೃಹಯುದ್ಧದಲ್ಲಿ ಇಲ್ಲಿಯವರೆಗೆ ಹಿಂದೂ ಮತ್ತು ಬೌದ್ಧರ ೫ ಸಾವಿರ ಮನೆಗಳು ಭಸ್ಮ

ಯಾಂಗುನ್ (ಮ್ಯಾನ್ಮಾರ್) – ಮ್ಯಾನ್ಮಾರ್ ದಲ್ಲಿ ಕಳೆದ ಅನೇಕ ತಿಂಗಳಿಂದ ನಡೆಯುತ್ತಿರುವ ಗೃಹ ಕಲಹವು ಭಯಾನಕ ತಿರುವು ಪಡೆದಿದ್ದು ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ರಾಖೈನ್ ರಾಜ್ಯದಲ್ಲಿನ ಪರಿಸ್ಥಿತಿ ಎಲ್ಲಕ್ಕಿಂತ ಹೆಚ್ಚು ಗಂಭೀರವಾಗಿದೆ.

ಅಲ್ಲಿ ಮ್ಯಾನ್ಮಾರ್ ಸೈನ್ಯ ಮತ್ತು ವಾಂಶಿಕ ಬಂಡುಕೋರರ ಗುಂಪಿನ ನಡುವೆ ಭಯಾನಕ ಯುದ್ಧ ನಡೆಯುತ್ತಿದೆ. ಸೈನಿಕ ಸಂಘರ್ಷವು ಇದೀಗ ಧಾರ್ಮಿಕ ಒತ್ತಡಕ್ಕೆ ಕಾರಣವಾಗಿದ್ದು ಅದರ ಪರಿಣಾಮ ಈ ಭಾಗದಲ್ಲಿ ವಾಸಿಸುವ ಹಿಂದೂ ಮತ್ತು ಬೌದ್ಧ ಧರ್ಮೀಯರ ಮೇಲೆ ಆಗುತ್ತಿದೆ. ಅಲ್ಲಿನ ಬೂಥಿಡಾಂಗದಲ್ಲಿ ಇಲ್ಲಿಯವರೆಗೆ ಹಿಂದೂ ಮತ್ತು ಬೌದ್ಧರ ಸುಮಾರು ೫ ಸಾವಿರ ಮನೆಗಳನ್ನು ಸುಟ್ಟು ಭಸ್ಮ ಮಾಡಲಾಗಿದೆ. ಇಲ್ಲಿಯ ಬಹುತೇಕ ಜನರು ಮೊದಲೇ ಈ ಕ್ಷೇತ್ರ ಬಿಟ್ಟು ಸುರಕ್ಷಿತ ಸ್ಥಳಕ್ಕೆ ಪಲಾಯನ ಮಾಡಿದ್ದರು, ಹಾಗಾಗಿ ಅನೇಕ ಮನೆಗಳು ಖಾಲಿ ಆಗಿವೆ ; ಆದರೆ ಕೆಲವರು ಇಂದಿಗೂ ಇದೇ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಈ ಮನೆಗಳನ್ನು ಲೂಟಿ ಮಾಡಿದ ನಂತರ ಅವುಗಳನ್ನು ಸುಟ್ಟು ಹಾಕಲಾಗಿದೆ. ಏಪ್ರಿಲ್ ೧೧ ರಿಂದ ಏಪ್ರಿಲ್ ೨೧ ರ ಕಾಲಾವಧಿಯಲ್ಲಿ ಈ ಮನೆಗಳನ್ನು ಸುಡಲಾಗಿದೆ. ಬುಥಿದಾಂಗ ಈಗ ಬಂಡುಕೋರ ಜನಾಂಗದ ಗುಂಪು ಸಂಪೂರ್ಣವಾಗಿ ಅರಕಾನ್ ಆರ್ಮಿಯ ಹಿಡಿತದಲ್ಲಿದೆ. ಈ ಆರ್ಮಿಯಲ್ಲಿ ರೋಹಿಂಗ್ಯಾ ಮುಸಲ್ಮಾನರು ಕೂಡ ಇದ್ದಾರೆ.