ಕೊಲಂಬೋ (ಶ್ರೀಲಂಕಾ) – ನಮಗೆ ಎಲ್ಲಾ ದೇಶಗಳೊಂದಿಗೆ ಕೆಲಸ ಮಾಡಬೇಕಿದೆ; ಆದರೆ ಅದಕ್ಕಾಗಿ ನಾವು ಇತರ ಯಾವುದೇ ದೇಶದ ಸುರಕ್ಷತೆಯನ್ನು ಪಣಕ್ಕೆ ಇಡಲಾರೆವು. ಒಂದು ವೇಳೆ ಭಾರತದ ಸುರಕ್ಷತೆಗೆ ತೊಂದರೆಯಾದರೆ ನಾವು ಅದರ ಕಡೆಗೆ ಖಂಡಿತವಾಗಿಯೂ ಗಮನ ಹರಿಸುವೆವು. ನಮ್ಮ ದೇಶ ಭಾರತದ ಸುರಕ್ಷತೆಗಾಗಿ ವಚನ ಬದ್ಧವಾಗಿದೆ. ಒಂದು ಜವಾಬ್ದಾರ ನೆರೆಯ ದೇಶವಾಗಿ ನಾವು ಭಾರತಕ್ಕೆ ಹಾನಿ ಉಂಟು ಮಾಡಲು ಯಾರಿಗೂ ಬಿಡುವುದಿಲ್ಲ ಎಂದು ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಾಬರಿ ಇವರು ಚೀನಾದಿಂದ ಭಾರತದ ಸುರಕ್ಷತೆಗೆ ಅಪಾಯ ಇರುವ ಹಿನ್ನೆಲೆಯಲ್ಲಿ ಶ್ರೀಲಂಕಾದ ನಿಲುವು ಸ್ಪಷ್ಟಪಡಿಸಿದರು. ಎ.ಎನ್.ಐ. ಈ ವಾರ್ತಾ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡುತ್ತಿದ್ದರು. ಅವರಿಗೆ ಶ್ರೀಲಂಕಾದ ಬಂದರುಗಳ ಮೇಲೆ ಚೀನಾದ ಬೇಹುಗಾರಿಕೆ ನಡೆಸುವ ನೌಕೆಯನ್ನು ನಿಲ್ಲಿಸಲು ನೀಡಲಾಗಿರುವ ಅನುಮತಿಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಈ ಸಂಬಂಧ ಭಾರತವು ಶ್ರೀಲಂಕಾಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಬಳಿಕ ಶ್ರೀಲಂಕಾವು ಸೆಪ್ಟೆಂಬರ್ ೨೦೨೩ ರಲ್ಲಿ ಚೀನಾದ ನೌಕೆಯನ್ನು ತನ್ನ ದೇಶದ ಬಂದರಿದಲ್ಲಿ ನಿಲ್ಲಿಸಲು ಅನುಮತಿ ನಿರಾಕರಿಸಿತ್ತು.
ಸಾಬರಿ ಮಾತು ಮುಂದುವರೆಸಿ, ಇತ್ತೀಚಿಗೆ ಚೀನಾ ಭಾರತದ ಎಲ್ಲಕ್ಕಿಂತ ದೊಡ್ಡ ವ್ಯಾಪಾರ ಪಾಲುದಾರನಾಗಿ ಉದಯಿಸುತ್ತಿದೆ. ಅದರಂತೆ ಶ್ರೀಲಂಕಾ ಕೂಡ ಭಾರತದ ಜೊತೆಗೆ ಒಟ್ಟಾಗಿ ಕೆಲಸ ಮಾಡಬೇಕಿದೆ; ಆದರೆ ನಾವು ಮೂರನೆಯ ಪಕ್ಷವನ್ನು ಎಂದಿಗೂ ಅಪಾಯದಲ್ಲಿ ಸಿಲುಕಿಸುವುದಿಲ್ಲ ಎಂದು ಹೇಳಿದರು.
‘ಬ್ರಿಕ್ಸ್’ ಸಂಘಟನೆಯಲ್ಲಿ ಸಹಭಾಗಿ ಆಗಲು ಇಚ್ಛೆ !
ವಿದೇಶಾಂಗ ಸಚಿವ ಸಾಬರಿ ಇವರು ಭಾರತ ‘ಬ್ರಿಕ್ಸ್’ ಸಂಘಟನೆಯಲ್ಲಿ ಸಹಭಾಗಿ ಆದ ನಂತರ ಇದು ಒಂದು ಬಹಳ ಒಳ್ಳೆಯ ಸಂಘಟನೆ ಆಗಿದೆ ನಾವು ಕೂಡ ಈ ಸಂಘಟನೆಯಲ್ಲಿ ಸಹಭಾಗಿಯಾಗಲು ಪ್ರಯತ್ನ ಮಾಡುವೆವು. ಬ್ರಿಕ್ಸ್ ದೇಶದ ವಿದೇಶಾಂಗ ಸಚಿವರು ನಮ್ಮನ್ನು ಕೂಡ ಸಭೆಗೆ ಆಮಂತ್ರಿಸಿದ್ದಾರೆ ಎಂದು ಹೇಳಿದರು.