Delhi High Court : ದೆಹಲಿ ಉಚ್ಚನ್ಯಾಯಾಲಯವು 5 ಭಯೋತ್ಪಾದಕರ ಜೀವಾವಧಿ ಶಿಕ್ಷೆಯನ್ನು 10 ವರ್ಷಕ್ಕೆ ಇಳಿಸಿತು !

ನವ ದೆಹಲಿ – ದೆಹಲಿ ಉಚ್ಚನ್ಯಾಯಾಲಯವು ಜೈಶ್-ಎ-ಮೊಹಮ್ಮದ್ ಈ ಜಿಹಾದಿ ಭಯೋತ್ಪಾದಕ ಸಂಘಟನೆಯ ಐವರು ‘ಓವರ್ ಗ್ರೌಂಡ್ ವರ್ಕರ್ಸ್’ (ಸ್ಥಳೀಯ ಸಹಾಯಕರು) ಆಗಿರುವವರ ಜೀವಾವಧಿ ಶಿಕ್ಷೆಯನ್ನು 10 ವರ್ಷಗಳಿಗೆ ಇಳಿಸಿದೆ. ನ್ಯಾಯಾಲಯವು, ‘ಹಲವು ಪ್ರಕರಣಗಳಲ್ಲಿ ಸಿಲುಕಿದ್ದರೂ ಅವರು ಸ್ವತಃ ಯಾವುದೇ ಅಪರಾಧವನ್ನು ಎಸಗಿಲ್ಲ’ ಎಂದು ಹೇಳಿದೆ. ಬಿಲಾಲ ಅಹಮದ ಮೀರ, ಸಜ್ಜಾದ ಅಹಮದ ಖಾನ, ಮುಜಫ್ಫರ ಭಟ, ಮೆಹರಾಜ-ಉದ- ದೀನ ಚೋಪನ ಮತ್ತು ಇಶ್ಫಾಕ ಅಹಮದ ಭಟ ಎಂದು ಭಯೋತ್ಪಾದಕರ ಹೆಸರುಗಳಾಗಿವೆ. ಸೆಶನ್ಸ್ ನ್ಯಾಯಾಲಯವು ಅವರಿಗೆ 2022 ರಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು. ನವೆಂಬರ್ 28, 2022 ರಂದು, ಕಡಿಮೆಗೊಳಿಸಿ ಜೀವಾವಧಿ ಶಿಕ್ಷೆಗೆ ಬದಲಾಯಿಸಲಾಗಿತ್ತು. ಈ ಎಲ್ಲ ಭಯೋತ್ಪಾದಕರು ಜಮ್ಮೂ–ಕಾಶ್ಮೀರದವರಾಗಿದ್ದಾರೆ.

ದೆಹಲಿ ಉಚ್ಚ ನ್ಯಾಯಾಲಯವು, ಯಾವ ವ್ಯಕ್ತಿಗೆ ವಿವೇಕವಿದೆಯೋ, ಅವನು ತನ್ನ ಪಾಪವನ್ನು ಸ್ವೀಕರಿಸುತ್ತಾನೆ ಮತ್ತು ಭೋಗಿಸುತ್ತಾನೆ. ನಾವು ‘ಅಪರಾಧ ಮತ್ತು ಶಿಕ್ಷೆ ‘ ಈ ಪುಸ್ತಕದ ಲೇಖಕ ಫ್ಯೋಡರ್ ದೋಸ್ಟೋವ್ಸ್ಕಿಯವರ ಒಂದು ವಾಕ್ಯದ ಸಂದರ್ಭವನ್ನು ಉಲ್ಲೇಖಿಸುತ್ತೇವೆ. ಈ ಪುಸ್ತಕದಲ್ಲಿ ದೋಸ್ಟೋವ್ಸ್ಕಿ ಅವರು, ‘ಒಂದು ವೇಳೆ ಅವನಿಗೆ ವಿವೇಕವಿದ್ದರೆ, ಅವನು ತನ್ನ ತಪ್ಪುಗಳ ಬಗ್ಗೆ ದುಃಖವನ್ನು ಭೋಗಿಸಬೇಕಾಗುತ್ತದೆ; ಇದೇ ಶಿಕ್ಷೆಯಾಗಿರುತ್ತದೆ.,ಹಾಗೆಯೇ ಜೈಲುಶಿಕ್ಷೆಯೂ ಇರಲಿದೆ’ ಎಂದು ಬರೆದಿದ್ದಾರೆ. ಅವರ ಶಿಕ್ಷೆಯನ್ನು ಕಡಿಮೆಗೊಳಿಸಿದ್ದರಿಂದ ಅಪರಾಧ ಕಡಿಮೆಯಾಗುವುದಿಲ್ಲ. ಅವರು ಅನೇಕ ಪ್ರಕರಣಗಳಲ್ಲಿ ಸಿಲುಕಿದ್ದರೂ, ಅವರು ನೇರವಾಗಿ ಯಾವುದೇ ಕೃತ್ಯವನ್ನು ಮಾಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರನ್ನು ಸುಧಾರಿಸಲು ಒಂದು ಕಿಡಕಿಯನ್ನು ತೆರೆದಿಡಬೇಕಾಗುತ್ತದೆ ಎಂದು ತಿಳಿಸಿದೆ.