ಆಂದೋಲ: ಕರುಣೇಶ್ವರ ಮಠದ ಪೀಠಾಧಿಪತಿ ಸಿದ್ಧಲಿಂಗ ಶ್ರೀ ಅವರ ವಿರುದ್ಧ ದೂರು ದಾಖಲು !

ಕರುಣೇಶ್ವರ ಮಠದ ಪೀಠಾಧಿಪತಿ ಸಿದ್ಧಲಿಂಗ ಶ್ರೀ

ಕಲಬುರ್ಗಿ (ಕರ್ನಾಟಕ) – ಜೇವರಗಿ ತಾಲೂಕಿನಲ್ಲಿನ ಆಂದೋಲ ಕರುಣೇಶ್ವರ ಮಠದ ಪೀಠಾಧಿಪತಿ ಹಾಗೂ ಶ್ರೀರಾಮ ಸೇನೆಯ ಅಧ್ಯಕ್ಷ ಸಿದ್ಧಲಿಂಗ ಶ್ರೀ ಅವರ ವಿರುದ್ಧ ಕಲಬುರ್ಗಿಯಲ್ಲಿ ಜಾತಿ ಆಧಾರದ ನಿಂದನೆಯ ಪ್ರಕರಣದ ಮೇಲೆ ದೂರು ದಾಖಲಿಸಲಾಗಿದೆ.

ಎಪ್ರಿಲ್ ತಿಂಗಳಲ್ಲಿ ಹುಬ್ಬಳ್ಳಿಯಲ್ಲಿನ ನೇಹ ಹಿರೇಮಠ ಹತ್ಯೆಯ ಮತ್ತು ಕಮಲಾಪುರದ ಮುಗುಳನಾಗವದಲ್ಲಿನ ಯುವಕನ ಆತ್ಮಹತ್ಯೆಯ ಪ್ರಕರಣವನ್ನು ನಿಷೇಧಿಸಿ ಕಲ್ಬುರ್ಗಿ ಪಟೇಲ ಪ್ರದೇಶದಲ್ಲಿ ನಡೆದ ನಾಗರಿಕ ಸಮಿತಿ ಪ್ರತಿಭಟನೆಯಲ್ಲಿ ಸಹಭಾಗಿ ಆಗಿದ್ದ ಸಿದ್ಧಲಿಂಗ ಶ್ರೀ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸನ್ನು ಟೀಕಿಸಿದ್ದರು. ಈ ಟೀಕೆಯಿಂದ ನಮ್ಮ ಜನಾಂಗಕ್ಕೆ ನೋವುಂಟಾಗಿದೆ ಎಂದು ಸಿದ್ದಲಿಂಗ ಶ್ರೀಗಳು, ಬಸವನಗೌಡ ಯತ್ನಾಳ್ ಮತ್ತು ಶಾಸಕ ಉಮೇಶ ಜಾಧವ್ ಅವರ ವಿರುದ್ಧ ಪ್ರಾದೇಶಿಕ ಕುರುಬ ಸಂಘದ ಜಿಲ್ಲಾ ಉಪಾಧ್ಯಕ್ಷ ನಾಗೇಂದ್ರಪ್ಪ ಪೂಜಾರಿ ಅವರು ಪೊಲೀಸರಿಗೆ ದೂರು ನೀಡಿದ್ದರು.

ಸಿದ್ದಲಿಂಗ ಶ್ರೀಗಳು ಈ ಬಗ್ಗೆ ಮಾತನಾಡಿ, ಜಾತಿಯ ನಿಂದನೆ ಮಾಡದಿದ್ದರೂ ಕೂಡ ರಾಜಕೀಯ ಒತ್ತಡದಿಂದ ನಮ್ಮ ಮೇಲೆ ಸುಳ್ಳು ಆರೋಪ ಹೊರಿಸಿ ದೂರು ನೀಡಲಾಗಿದೆ. ಇದರ ವಿರುದ್ಧ ನಾವು ನ್ಯಾಯಾಲಯದಲ್ಲಿ ಕಾನೂನು ರೀತಿಯಲ್ಲಿ ಹೋರಾಡುವೆವು. ಕಲಬುರಗಿ ಪೊಲೀಸ್, ಜಿಲ್ಲಾ ಆಡಳಿತ ಮತ್ತು ಪ್ರಮುಖ ರಾಜಕಾರಣಿಗಳಿಗೆ ಒಂದು ನಿಯಮ, ಹಾಗೂ ಸಾಮಾನ್ಯ ಜನರಿಗೆ ಇನ್ನೊಂದು ನಿಯಮ ಈ ರೀತಿ ಮಾಡಲಾಗುತ್ತಿದೆ. ನಾವು ಸರಕಾರದ ಈ ದ್ವಿಮುಖ ಧೋರಣೆಯನ್ನು ಬಹಿರಂಗಪಡಿಸುವೆವು ಮತ್ತು ಎಲ್ಲವನ್ನು ನ್ಯಾಯಾಲಯದ ಗಮನಕ್ಕೆ ತಂದು ಕೊಡುವೆವು ಎಂದು ಖಾರವಾಗಿ ನುಡಿದರು.