Anti-Indian European Media : ಯುರೋಪಿಯನ್ ಪ್ರಸಾರ ಮಾಧ್ಯಮಗಳು ಭಾರತದ ಕುರಿತು ಸುಳ್ಳು ವರದಿ ಮಾಡುತ್ತವೆ ! – ಬ್ರಿಟಿಷ್ ಪತ್ರಕರ್ತ ಸ್ಯಾಮ್ ಸ್ಟೀವನ್ಸನ್

ನವದೆಹಲಿ – ಲಂಡನ್ ಮತ್ತು ಸಂಪೂರ್ಣ ಯೂರೋಪದಲ್ಲಿನ ಪ್ರಸಾರ ಮಾಧ್ಯಮಗಳು ಭಾರತದ ಕುರಿತು ನಕಾರಾತ್ಮಕ ವಾರ್ತೆಗಳನ್ನು ಪ್ರಸಾರಗೊಳಿಸುತ್ತವೆ ಎಂದು ಬ್ರಿಟಿಷ್ ಪತ್ರಕರ್ತ ಸೇಮ್ ಸ್ಟೀವನ್ಸನ್ ಅವರು ಮಾಹಿತಿ ನೀಡಿದ್ದಾರೆ. ಸ್ಯಾಮ್ ಸ್ಟೀವನ್ಸನ್ ಪ್ರಸ್ತುತ ಲೋಕಸಭಾ ಚುನಾವಣೆಗೆ ಸಂಬಂಧಿಸಿ ವಾರ್ತೆಗಳ ಪ್ರಸಾರ ಮಾಡುವುದಕ್ಕಾಗಿ ಭಾರತಕ್ಕೆ ಬಂದಿದ್ದರು.

ಪತ್ರಕರ್ತ ಸ್ಟೀವನ್ಸನ್ ಮಾತು ಮುಂದುವರೆಸಿ,

೧. ಯುರೋಪಿಯನ್ ಪ್ರಸಾರ ಮಾಧ್ಯಮಗಳು ಭಾರತದಲ್ಲಿ ಧಾರ್ಮಿಕ ವಿಭಜನೆ ಮಾಡಲಾಗುತ್ತಿದೆ ಎಂದು ಉತ್ಪ್ರೇಕ್ಷೆಯಿಂದ ಹೇಳುತ್ತವೆ; ಆದರೆ ಪ್ರತ್ಯಕ್ಷದಲ್ಲಿ ಹಾಗೆ ಎಲ್ಲೂ ಏನು ಕಂಡುಬರುವುದಿಲ್ಲ. ತದ್ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಭೆಗಳಲ್ಲಿ ಮುಸಲ್ಮಾನ ಮಹಿಳೆಯರು ಬುರ್ಖಾಧರಿಸಿ ಬಂದಿರುವುದು ಕಾಣುತ್ತದೆ.

೨. ಬ್ರಿಟಿಷ್ ಪ್ರಸಾರ ಮಾಧ್ಯಮಗಳು, ಮೋದಿ ಇಸ್ಲಾಮ್ ವಿರೋಧಿ ಎನ್ನುತ್ತಾರೆ; ಆದರೆ ಬ್ರಿಟಿಷ್ ಮಾಧ್ಯಮಗಳು ಭರತಭೂಮಿಗೆ ಬಂದು ಮುಸಲ್ಮಾನ, ಹಿಂದೂ, ಸಿಖ್ ಮುಂತಾದವರ ಜೊತೆಗೆ ಮಾತನಾಡಿದಾಗ ಭಾರತ ಎಲ್ಲಾ ಸಂಸ್ಕೃತಿ ಮತ್ತು ಧರ್ಮಗಳನ್ನು ಸ್ವೀಕರಿಸುತ್ತದೆ ಎಂಬುದು ಅವರಿಗೆ ಕಾಣುವುದು.

೩. ಭಾರತದಂತಹ ಮಹಾನ್ ಮತ್ತು ಅದ್ಭುತ ದೇಶದಲ್ಲಿ ಐಕ್ಯತೆ ಕಂಡು ಬರುತ್ತದೆ. ಈ ರಾಷ್ಟ್ರದ ಬಗೆಗಿನ ವಾಸ್ತವವನ್ನು ಬ್ರಿಟಿಷರ ಪ್ರಸಾರ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದಕ್ಕಾಗಿ ನಾನು ಇಲ್ಲಿ ಬಂದಿದ್ದೇನೆ. ನಾನು ಸತ್ಯದವರೆಗೆ ತಲುಪುವುದಕ್ಕಾಗಿ, ಹಾಗೂ ಕೆಲವು ತತ್ವಗಳನ್ನು ಹುಡುಕುವದಕ್ಕಾಗಿ ಮತ್ತು ಅಂತಹ ವಿಷಯಗಳು ಲಂಡನ್ ನಲ್ಲಿ ಪ್ರಸಾರಗೊಳಿಸುವುದಕ್ಕಾಗಿ ಇಲ್ಲಿ ಬಂದಿದ್ದೇನೆ. ಭಾರತದ ಬಗ್ಗೆ ಅನೇಕ ಸಕಾರಾತ್ಮಕ ಸಮಾಚಾರಗಳಿವೆ. ಅವುಗಳನ್ನು ಜಗತ್ತಿಗೆ ತಿಳಿಸುವುದು ಆವಶ್ಯಕವಾಗಿದೆ.

೪ . ಸಂಪೂರ್ಣ ಯುರೋಪ್ ಮತ್ತು ಪಶ್ಚಿಮಾತ್ಯ ದೇಶಗಳಲ್ಲಿ ಭಾರತದ ಬಗ್ಗೆ ತಪ್ಪಾದ ಕಲ್ಪನೆ ಇದೆ. ಅಲ್ಲಿ ಭಾರತೀಯರ ಬಗ್ಗೆ ನಕಾರಾತ್ಮಕ ವಿಷಯಗಳೇ ಹೇಳಲಾಗುತ್ತದೆ. ಇದು ಬಹಳ ನಾಚಿಗೇಡಿನ ವಿಷಯವಾಗಿದೆ. ಅಲ್ಲಿನ ಜನರು ಭಾರತಕ್ಕೆ ಬರಬೇಕು ಮತ್ತು ಎಲ್ಲಾ ವಿಷಯ ಸ್ವತಃ ತಮ್ಮ ಕಣ್ಣಿನಿಂದ ನೋಡಬೇಕು. ಇಲ್ಲಿನ ಗ್ರಾಮಗಳ ಜನರ ಜೊತೆಗೆ ಮಾತನಾಡಬೇಕು. ಆಗ ಅವರಿಗೆ ಅವರ ತಪ್ಪಾದ ಕಲ್ಪನೆಯು ಗಮನಕ್ಕೆ ಬರುವುದು. ಭಾರತ ಮತ್ತು ಬ್ರಿಟನ್ ಈ ಎರಡು ದೇಶ ಎಲ್ಲರ ಒಳ್ಳೆಯದಕ್ಕಾಗಿ ಅಂತರಾಷ್ಟ್ರೀಯ ಶಕ್ತಿ ಆಗಬಹುದು. ಎರಡೂ ದೇಶಗಳು ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸವನ್ನು ಹೊಂದಿವೆ.