|
ಅಮೃತಸರ (ಪಂಜಾಬ) – ‘ಸಿಖ್ ಫಾರ್ ಜಸ್ಟಿಸ್’ ಅಥವಾ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನು ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಇದಕ್ಕಾಗಿ ಅವನು ಪಂಜಾಬ್ ಜನತೆಯನ್ನು ಪ್ರಚೋದಿಸಿ, ಮೋದಿಯನ್ನು ಹತ್ಯೆ ಮಾಡುವವರಿಗೆ 1 ಲಕ್ಷ ಡಾಲರ್ (83 ಲಕ್ಷ ರೂಪಾಯಿ) ನೀಡುವುದಾಗಿ ಘೋಷಿಸಿದ್ದಾನೆ.
ಪನ್ನು ಒಂದು ವಿಡಿಯೋ ಪ್ರಸಾರ ಮಾಡಿ, ಅದರಲ್ಲಿ ಪಂಜಾಬಿನ ಯುವಕರ ಮತ್ತು ರೈತರ ಹಂತಕನಾಗಿರುವ ನರೇಂದ್ರ ಮೋದಿ ಪಂಜಾಬಿಗೆ ಬರುತ್ತಿದ್ದಾರೆ. ಗಮನದಲ್ಲಿಡಿರಿ ಮೇ 21, 1991 ರಂದು ರಾಜೀವ್ ಗಾಂಧಿ ಅವರು ಬಾಂಬ್ ಸ್ಫೋಟದಿಂದ ಕೊಲ್ಲಲ್ಪಟ್ಟರು. ಪ್ರಧಾನಮಂತ್ರಿ ಮೋದಿಯವರಿಗೆ ಪಂಜಾಬ್‌ನಲ್ಲಿಯೇ ಉತ್ತರ ನೀಡಬೇಕಾಗುವುದು. ಎಲ್ಲಾ ರಸ್ತೆಗಳು ಮತ್ತು ವಿಮಾನ ನಿಲ್ದಾಣದ ಮಾರ್ಗಗಳು ಬುಲ್ಡೋಜರ್‌ಗಳು ಮತ್ತು ಟ್ರಾಕ್ಟರ್‌ಗಳಿಂದ ಅಡ್ಡಗಟ್ಟಬೇಕು. ಮೋದಿಯವರನ್ನು ಇಲ್ಲಿ ಮಾತನಾಡಲು ಬಿಡಬಾರದು. ಇದು ಪಂಜಾಬ್ ಆಗಿದೆ. ಯಾರಿಗೆ ಭಾರತದಿಂದ ಸ್ವಾತಂತ್ರ್ಯ ಬೇಕಾಗಿದೆಯೋ, ಅವರು ನರೇಂದ್ರ ಮೋದಿಯವರಿಗೆ ಹೇಳಬೇಕಾಗಿದೆ. ಶತ್ರು ಮನೆಗೆ ಬರುತ್ತಿದ್ದಾನೆ. ಮನೆಯಲ್ಲಿ ಉತ್ತರ ಸಿಗಲಿದೆ.
ನರೇಂದ್ರ ಮೋದಿಯವರು 23 ಮತ್ತು 24 ರಂದು ಪಂಜಾಬ್ ನಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೇ 23 ಮತ್ತು 24 ರಂದು ಈ 2 ದಿನಗಳಲ್ಲಿ ಪಂಜಾಬ್‌ನಲ್ಲಿ 3 ಪ್ರಚಾರ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪಂಜಾಬ್‌ನಲ್ಲಿ ಪಟಿಯಾಲ, ಜಲಂಧರ ಮತ್ತು ಗುರುದಾಸಪುರ ಮತಕ್ಷೇತ್ರಗಳಲ್ಲಿ ಈ ಸಭೆಗಳು ನಡೆಯಲಿವೆ. |
ಸಂಪಾದಕೀಯ ನಿಲುವುಅಮೇರಿಕಾ ಮತ್ತು ಕೆನಡಾ ದೇಶದ ಪೌರತ್ವವನ್ನು ಸ್ವೀಕರಿಸಿರುವ ಪನ್ನು ಅಲ್ಲಿ ಕುಳಿತು ಭಾರತದ ಪ್ರಧಾನಮಂತ್ರಿಯನ್ನು ಕೊಲ್ಲುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕುತ್ತಾನೆ ಮತ್ತು ಎರಡೂ ದೇಶಗಳು ಅವನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ; ಆದರೆ ಅದೇ ಪನ್ನುವನ್ನು ಹತ್ಯೆ ಮಾಡುವ ತಥಾಕಥಿತ ಸಂಚನ್ನು ರೂಪಿಸಿರುವ ಬಗ್ಗೆ ಭಾರತೀಯ ನಾಗರಿಕರನ್ನು ಅಮೇರಿಕಾ ಬಂಧಿಸುತ್ತದೆ, ಇದು ಅಮೇರಿಕಾದ ದ್ವಂದ್ವ ನಿಲುವಾಗಿದೆ. ಅಮೇರಿಕಾ ಎಂದಿಗೂ ಭಾರತದ ಸ್ನೇಹಿತನಾಗಲು ಸಾಧ್ಯವಿಲ್ಲ! |