ಪಾಕಿಸ್ತಾನದ ಸಮರ್ಥನೆ ಮಾಡುವವರು ಪಾಕಿಸ್ತಾನಕ್ಕೆ ಹೋಗಲಿ !

ಧುಳೆ: ಪ್ರಚಾರ ಸಭೆಯಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಂದ ವಿರೋಧಿಗಳಿಗೆ ಎಚ್ಚರಿಕೆ

ಧುಳೆ- ಇಂದು ಜಗತ್ತಿನಾದ್ಯಂತ ಭಾರತದ ಗೌರವ ಹೆಚ್ಚುತ್ತಿದೆ. ದೇಶದಲ್ಲಿ ಕಾಂಗ್ರೆಸ್ ಸರಕಾರದ ಕಾಲಾವಧಿಯಲ್ಲಿ ಮೇಲಿಂದ ಮೇಲೆ ಬಾಂಬ್ ಸ್ಫೋಟಗಳು ನಡೆಯುತ್ತಿದ್ದವು ; ಆದರೆ ಈಗ ಮೋದಿ ಸರಕಾರವು ಇಂತಹ ಘಟನೆಗಳನ್ನು ತಡೆದಿದೆ. ಆದರೆ ಕಾಂಗ್ರೆಸ್ ಮಾತ್ರ ಪಾಕಿಸ್ತಾನದ ಸಮರ್ಥನೆ ಮಾಡುತ್ತದೆ. ಪಾಕಿಸ್ತಾನದ ಸಮರ್ಥನೆ ಮಾಡುವವರು ಪಾಕಿಸ್ತಾನಕ್ಕೆ ಹೋಗಲಿ. ಭಾರತದ ಅನ್ನ ತಿಂದು ಪಾಕಿಸ್ತಾನದ ಗುಣಗಾನ ಮಾಡುವವರಿಗೆ ಭಾರತದಲ್ಲಿ ಸ್ಥಾನವಿಲ್ಲ, ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಚ್ಚರಿಕೆ ನೀಡಿದರು. ಅವರು ಮೇ ೧೮ ರಂದು ಧುಳೆ ಲೋಕಸಭಾ ಮತದಾರ ಕ್ಷೇತ್ರದ ಭಾಜಪದ ಅಭ್ಯರ್ಥಿ ಡಾ. ಸುಭಾಷ್ ಭಾಮರೆ ಅವರ ಪರವಾಗಿ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದರು.

ಯೋಗಿ ಆದಿತ್ಯನಾಥ ಮಾತು ಮುಂದುವರೆಸಿ, ಈ ಬಾರಿ ೪೦೦ ದಾಟುವ ( ಅಬಕಿ ಬಾರ್ ೪೦೦ ಪಾರ್ ) ಘೋಷಣೆ ನೀಡಿದರೆ ವಿರೋಧಕರ ಕಾಲಡಿಯ ಭೂಮಿ ಕಂಪಿಸುತ್ತದೆ; ನೀವು ಯಾವುದೇ ಬಗೆಯ ಅನುಮಾನವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ. ದೇಶದಲ್ಲಿ ಮತ್ತೊಮ್ಮೆ ಮೋದಿ ಸರಕಾರ ಅಧಿಕಾರಕ್ಕೆ ಬರುವುದು. ಮಾಲೆಗಾವ್ ಮತ್ತು ಧುಳೆ ಪ್ರದೇಶದ ಬಾಂಧವರು ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ದರ್ಶನಕ್ಕಾಗಿ ಬರಬೇಕು, ಎಂದು ಯೋಗಿ ಅವರು ಆಮಂತ್ರಣ ಕೂಡ ನೀಡಿದರು. ಶ್ರೀರಾಮ ಮಂದಿರ ಕಟ್ಟಲು ಮಹಾರಾಷ್ಟ್ರದಲ್ಲಿನ ಸಾವಿರಾರು ಕಾರಸೇವಕರ ಕೊಡುಗೆ ಇದೆ. ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಸಂದರ್ಭದಲ್ಲಿ ನ್ಯಾಯಾಲಯದ ತೀರ್ಪು ಬಂದ ನಂತರ ದೇಶದಲ್ಲಿ ಗಲಭೆಗಳಾಗುವುದು, ಎಂದು ಕಾಂಗ್ರೆಸ್ ಸರಕಾರ ಹೇಳುತ್ತಿತ್ತು; ಆದರೆ ಇದು ಹೊಸ ಭಾರತವಾಗಿದೆ. ಶ್ರೀರಾಮ ಮಂದಿರದ ತೀರ್ಪು ಕೂಡ ಬಂತು ಮತ್ತು ಶ್ರೀ ರಾಮಮಂದಿರ ಕೂಡ ನಿರ್ಮಾಣವಾಯಿತು ಎಂದು ಯೋಗಿ ಆದಿತ್ಯನಾಥ ಅವರು ಕಾಂಗ್ರೆಸ್ಸನ್ನು ಟೀಕಿಸಿದರು.

ಕಾಂಗ್ರೆಸ್ ಪ್ರದೇಶಾಧ್ಯಕ್ಷ ನಾನಾ ಪಟೋಲೇ ಅವರು ಕಾಂಗ್ರೆಸ್ ಸರಕಾರ ಬಂದರೆ ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರವನ್ನು ತೊಳೆದು ಸ್ವಚ್ಛಗೊಳಿಸುವೆವು, ಎಂದು ಹೇಳಿಕೆ ನೀಡಿದ್ದರು. ಇದರ ಬಗ್ಗೆ ಮಾತನಾಡುತ್ತಾ, ಯೋಗಿ ಅವರು, ನಾನಾ ಪಟೋಲೇ ಅಯೋಧ್ಯೆವರೆಗೂ ತಲುಪುವಷ್ಟು ಅವರಲ್ಲಿ ಶಕ್ತಿಯೇ ಉಳಿಯುವುದಿಲ್ಲ. ಅಯೋಧ್ಯೆಯಲ್ಲಿನ ಶ್ರೀ ರಾಮ ಮಂದಿರವು ೧೪೦ ಕೋಟಿ ನಾಗರಿಕರ ಶ್ರದ್ಧೆಯ ಪ್ರತೀಕವಾಗಿದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.