ಒಮ್ಮೆ ಉಪಯೋಗಿಸಿದ ಎಣ್ಣೆ ಮತ್ತೆ ಮತ್ತೆ ಉಪಯೋಗಿಸಿದರೆ ಹೃದಯವಿಕಾರ ಮತ್ತು ಕ್ಯಾನ್ಸರ್ ಆಗುವ ಅಪಾಯ ಹೆಚ್ಚು !

ನವದೆಹಲಿ – ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ ಅಂದರೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐ.ಸಿ.ಎಂ.ಆರ್.) ಇತ್ತೀಚೆಗೆ ಆರೋಗ್ಯದ ಕುರಿತು ಕೆಲವು ಸೂಚನೆ ಪ್ರಸಾರಗೊಳಿಸಿದೆ. ಈ ಸೂಚನೆ ಪ್ರಕಾರ, ವನಸ್ಪತಿ ಎಣ್ಣೆ ಅಥವಾ ಯಾವುದೇ ರೀತಿಯ ಎಣ್ಣೆ ಪದೇ-ಪದೇ ಬಿಸಿ ಮಾಡುವುದನ್ನು ತಪ್ಪಿಸಬೇಕು. ಎಣ್ಣೆ ಪದೇ-ಪದೇ ಬಿಸಿ ಮಾಡಿದರೆ ಅದರಲ್ಲಿ ವಿಷಕಾರಿ ತತ್ವ ನಿರ್ಮಾಣವಾಗುತ್ತದೆ, ಅದು ಹೃದಯ ರೋಗ ಮತ್ತು ಕ್ಯಾನ್ಸರ್ ತರುವ ಅಪಾಯ ಹೆಚ್ಚಿಸುತ್ತದೆ ಎಂದು ಹೇಳಿದೆ.

೧. ಐ.ಸಿ.ಎಂ.ಆರ್ ಪ್ರಕಾರ, ಎಣ್ಣೆಯಲ್ಲಿ ಪದಾರ್ಥವನ್ನು ಕರೆದ ನಂತರ ಮತ್ತೆ ಬೇರೆ ವಸ್ತುವನ್ನು ಕರೆಯುವುದಕ್ಕಾಗಿ ಆ ಎಣ್ಣೆಯನ್ನು ಬಳಸಬಾರದು. ಒಮ್ಮೆ ಪದಾರ್ಥ ಕರಿದ ನಂತರ ಉಳಿದಿರುವ ಎಣ್ಣೆಯನ್ನು ಒಂದೆರಡು ದಿನದಲ್ಲಿ ಬಳಿಸಿ ಮುಗಿಸಬೇಕು.

೨. ಈ ಹಿಂದೆ ನಡೆದ ಕೆಲವು ಸಂಶೋಧನೆಗಳಿಂದ ಬೆಳಕಿಗೆ ಬಂದಿರುವ ವಿಷಯವೆಂದರೆ, ಅಡಿಗೆ ತಯಾರಿಸುವುದಕ್ಕಾಗಿ ಉಪಯೋಗಿಸುವ ಎಣ್ಣೆ ಮತ್ತೆ ಬಿಸಿ ಮಾಡಿದರೆ ಅದರಿಂದ ವಿಷಕಾರಿ ಪದಾರ್ಥ ಹೊರ ಬರುತ್ತದೆ, ಅದರಿಂದ ಊತ ಮತ್ತು ಬೇರೆ ಬೇರೆ ಗಂಭೀರ ರೋಗಗಳ ಅಪಾಯ ನಿರ್ಮಾಣವಾಗುತ್ತದೆ.