ಪಾಟಲಿಪುತ್ರ (ಬಿಹಾರ) ಗಾಯಗೊಂಡ ೪ ವರ್ಷದ ಹುಡುಗನನ್ನು ಚರಂಡಿಗೆ ಎಸೆದ ಮುಖ್ಯೋಪಾಧ್ಯಾಯನಿ; ಹುಡುಗನ ಸಾವು !

ಪಾಟಲಿಪುತ್ರ (ಬಿಹಾರ್) – ಟೀನಿ ಟಾಟ್ ಅಕಾಡೆಮಿ ಶಾಲೆಯ ನರ್ಸರಿಯಲ್ಲಿ ಓದುತ್ತಿರುವ ೪ ವರ್ಷದ ಆಯುಷ್ ಎಂಬ ಬಾಲಕನ ಹತ್ಯೆಯ ಪ್ರಕರಣದಲ್ಲಿ ಪೊಲೀಸರು ಶಾಲೆಯ ಮುಖ್ಯೋಪಾಧ್ಯಾಯನಿ ಮತ್ತು ಶಾಲೆಯ ಸಂಚಾಲಕರಾಗಿರುವ ಅವರ ಮಗನನ್ನು ಬಂಧಿಸಿದ್ದಾರೆ.

ಪೊಲೀಸ್ ವಿಚಾರಣೆಯಲ್ಲಿ ಮುಖ್ಯೋಪಾಧ್ಯಾಯನಿ ವೀಣಾ ಝಾ ಅಲಿಯಾಸ್ ಪುತುಲ್ ಝಾ ಪ್ರಕಾರ, ಆಯುಷ್ ಶಾಲೆಯಲ್ಲಿ ಆಟ ಆಡುತ್ತಿರುವಾಗ ಕೆಳಗೆ ಬಿದ್ದು ಪ್ರಜ್ಞೆ ತಪ್ಪಿದನು. ಅವನ ತಲೆಗೆ ಏಟು ಬಿದ್ದಿತ್ತು. ನಾವು ಹೆದರಿದೆವು, ನನ್ನ ಮಗ ಧನರಾಜ್ ಝಾ(ವಯಸ್ಸು ೨೧ ವರ್ಷ) ಅವನಿಗೆ ವಿಷಯ ತಿಳಿಸಿದೆನು. ಮೊದಲು ನಾವು ಇಬ್ಬರು ಸೇರಿ ರಕ್ತದ ಕಲೆಗಳನ್ನು ವರೆಸಿದೆವು ಮತ್ತು ನಂತರ ಆಯುಷ್ ನನ್ನು ಚರಂಡಿಗೆ ಎಸೆದೆವು. ಯಾರಿಗೂ ತಿಳಿಯುವುದಿಲ್ಲ ಎಂದು ನಮಗೆ ಅನಿಸಿತ್ತು. ಮರುದಿನ ಆಯುಷ್ ನ ಮೃತದೇಹ ಶಾಲೆಯಲ್ಲಿನ ಚರಂಡಿಯಲ್ಲಿ ತೇಲುತ್ತಿರುವುದು ಕಂಡುಬಂದಿತು ಎಂದರು.

ಆರೋಪಿಗಳು ಅಪರಾಧ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ! – ಪೊಲೀಸ್

ನಗರದ ಪೊಲೀಸ್ ಅಧಿಕಾರಿ ಚಂದ್ರಪ್ರಕಾಶ ಅವರು ವಿವರಿಸುತ್ತಾ, ಆಯುಷ್ ಆಟ ಆಡುವಾಗ ಗಾಯಗೊಂಡಿದ್ದನು. ಹೆಚ್ಚು ರಕ್ತಸ್ರಾವವಾಗಿರುವುದರಿಂದ ಮುಖ್ಯೋಪಾಧ್ಯಾಯನಿ ಮತ್ತು ಅವನ ಮಗ ಇಬ್ಬರೂ ಹೆದರಿದರು. ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯದೆ ಅವರು ಚರಂಡಿಗೆ ಎಸೆದರು. ಇದೇ ಅವನ ಸಾವಿಗೆ ಕಾರಣವಾಗಿದೆ. ಇಬ್ಬರೂ ಕೂಡ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಗುಂಪಿನಿಂದ ಶಾಲೆಗೆ ಬೆಂಕಿ !

ಮೃತ ದೇಹ ದೊರೆತ ನಂತರ ಆಕ್ರೋಶಗೊಂಡ ಜನರು ಶಾಲೆಯ ಪರಿಸರದಲ್ಲಿ ವಿಧ್ವಂಸ ಮಾಡಿದರು ಮತ್ತು ಕಟ್ಟಡಕ್ಕೆ ಬೆಂಕಿ ಹಚ್ಚಿದರು. ಆಕ್ರೋಶಗೊಂಡ ಕುಟುಂಬದವರು ಹುಡುಗನ ಮೃತದೇಹವನ್ನು ರಸ್ತೆಯಲ್ಲಿಟ್ಟು ದಾನಾಪುರ-ಗಾಂಧಿ ಮೈದಾನದ ಮುಖ್ಯ ರಸ್ತೆ ತಡೆದರು. ರಸ್ತೆಯಲ್ಲಿ ಬೆಂಕಿ ಅವಘಡ ಕೂಡ ನಡೆದಿತ್ತು.