ಕಾಂಗ್ರೆಸ್‌ನ ಈ ಪಾಪವನ್ನು ಜನರು ಮರೆಯುವುದಿಲ್ಲ

ಡಾ.  ಎಸ್.  ಜಯಶಂಕರ

೧. ಕಾಂಗ್ರೆಸ್‌ನ ಈ ಪಾಪವನ್ನು ಜನರು ಮರೆಯುವುದಿಲ್ಲ

ಪಾಕ್‌ ಆಕ್ರಮಿತ ಕಾಶ್ಮೀರ ಇದು ಭಾರತದ ಅವಿಭಾಜ್ಯ ಅಂಗವಿದೆ. ಅದು ಎಂದಿಗೂ ಭಾರತದ ಹೊರಗೆ ಇರಲಿಲ್ಲ; ಆದರೆ ಜನರು ಇದನ್ನು ಮರೆಯುವಂತೆ ಮಾಡಲಾಗಿದೆ ಎಂದು ಭಾರತದ ವಿದೇಶಾಂಗ ಸಚಿವ ಡಾ.  ಎಸ್.  ಜಯಶಂಕರ ಇವರು ಕಾಂಗ್ರೆಸ್‌ ಹೆಸರನ್ನು ಉಚ್ಚರಿಸದೇ ಉಲೇಖಿಸಿದ್ದಾರೆ.

೨. ವ್ಯವಸ್ಥೆಯ ಬಗ್ಗೆ ಸಂದೇಹ ಇರುವವರು ಸರಕಾರ ರಚಿಸುತ್ತಾರಂತೆ !

ಪರೀಕ್ಷೆಯಲ್ಲಿ ಮೇಲ್ಜಾತಿಯವರು ಪ್ರಶ್ನೆ ಪತ್ರಿಕೆಯನ್ನು ತಯಾರಿಸುತ್ತಾರೆ. ಇದರಿಂದಾಗಿ ದಲಿತ ಜಾತಿಯ ಜನರು ಉತ್ತೀರ್ಣರಾಗುತ್ತಿಲ್ಲ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ವ್ಯವಸ್ಥೆಯ ಮೇಲಿನ ಅಪನಂಬಿಕೆಯನ್ನು ತೋರಿಸಿದ್ದಾರೆ. ಅವರ ಈ ಹೇಳಿಕೆಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

೩. ಮಿಷನರಿ ಶಾಲೆಗಳಲ್ಲಿನ ಶಿಕ್ಷಕರ ಹಿಂದೂದ್ವೇಷವನ್ನು ತಿಳಿಯಿರಿ !

ಬಲಿಯಾ (ಉತ್ತರ ಪ್ರದೇಶ) ದಲ್ಲಿರುವ ‘ಸೇಂಟ್‌ ಮೇರಿ’ ಮಿಶನರಿ ಶಾಲೆಯಲ್ಲಿ ೪ ನೇ ತರಗತಿಯಲ್ಲಿ ಓದುತ್ತಿದ್ದ ಪ್ರಭಾಕರ್‌ ಎಂಬ ಹಿಂದೂ ವಿದ್ಯಾರ್ಥಿಯ ಜುಟ್ಟನ್ನು ಅವನದ್ದೇ ತರಗತಿಶಿಕ್ಷಕರು ಕತ್ತರಿಸಿದ್ದರು. ಈ ವಿಷಯವನ್ನು ಪ್ರಶ್ನಿಸಿದ ಮಗುವಿನ ತಾಯಿಯೊಂದಿಗೂ ಶಾಲೆಯವರು ಅನುಚಿತವಾಗಿ ವರ್ತಿಸಿದ್ದಾರೆ.

೪. ಅಮೇರಿಕದ ಸ್ವಾರ್ಥಾಂಧರೂಪವನ್ನು ತಿಳಿಯಿರಿ !

ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ಅಡ್ಡಿಪಡಿಸುವುದು ಅಮೇರಿಕದ ಉದ್ದೇಶವಾಗಿದೆ. ಅಲ್ಲದೆ ಅದು ಭಾರತದ ವಿರುದ್ಧ ನಿರಂತರವಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಅದಕ್ಕೆ ಭಾರತದ ರಾಷ್ಟ್ರೀಯ ಮಾನಸಿಕತೆ ಮತ್ತು ಇತಿಹಾಸ ತಿಳಿಯುವುದಿಲ್ಲ ಎಂದು ರಷ್ಯಾವು ಅಮೇರಿಕವನ್ನು ಟೀಕಿಸಿದೆ.