ನಾನ್-ಸ್ಟಿಕ್ ಪಾತ್ರೆಯಲ್ಲಿ ಆಹಾರ ಬೇಯಿಸುವುದು ಆರೋಗ್ಯಕ್ಕೆ ಅಪಾಯಕಾರಿ ! – ಸಂಶೋಧನೆ

‘ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್’ ಮತ್ತು ‘ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷಿಯನ್’ ಈ ಸಂಸ್ಥೆಯ ಸಲಹೆ

ನವ ದೆಹಲಿ – ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐ.ಸಿ.ಎಂ.ಆರ್.) ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (ಎನ್.ಐ.ಎನ್.) ಈ ಸಂಸ್ಥೆಗಳಿಂದ ಭಾರತೀಯರಿಗಾಗಿ ಸುಧಾರಿತ ಆಹಾರ ಮಾರ್ಗಸೂಚಿಯ ತತ್ವಗಳು ಪ್ರಸಾರಗೊಳಿಸಿವೆ. ಇದರ ಮೂಲಕ ಅಡುಗೆಗಾಗಿ ‘ನಾನ್-ಸ್ಟಿಕ್ ಪ್ಯಾನ್’ ಅನ್ನು ಉಪಯೋಗಿಸದಂತೆ ಸಲಹೆ ನೀಡಿದ್ದಾರೆ. ಜೊತೆಗೆ ಪರಿಸರಕ್ಕೆ ಪೂರಕವಾದ ಪಾತ್ರೆ ಉಪಯೋಗಿಸಲು ಕರೆ ನೀಡಿದೆ.

ನಾನ್-ಸ್ಟಿಕ್ ಪಾತ್ರೆ ಬಿಸಿಯಾದ ನಂತರ ವಿಷಕಾರಿ ಹೋಗೆ ಬಿಡುತ್ತದೆ !

ನಾನ್-ಸ್ಟಿಕ್ ಪಾತ್ರೆಗಾಗಿ ‘ಪೆರುಫ್ಲೂರು ಕ್ಟೇನೊಯಿಕ ಆಸಿಡ್’ ಮತ್ತು ‘ಪೆರುಕ್ಟೇನಸಫ್ಲೋನಿಕ್ ಆಸಿಡ್’ ಈ ರಾಸಾಯನಿಕ ಉಪಯೋಗ ಮಾಡಲಾಗುತ್ತದೆ. ಯಾವಾಗ ನಾನ್-ಸ್ಟಿಕ್ ಪಾತ್ರೆಗಳು ಹೆಚ್ಚು ತಾಪಮಾನದಲ್ಲಿ ಬಿಸಿ ಮಾಡಲಾಗುತ್ತದೆ, ಆಗ ಈ ಪಾತ್ರೆಯಿಂದ ವಿಷಕಾರಿ ಹೋಗೆ ಹೊರಸೂಸುತ್ತದೆ. ಈ ಹೊಗೆಯ ಸಂಪರ್ಕದಲ್ಲಿ ಬರುವವರಿಗೆ ಆರೋಗ್ಯದ ಅಪಾಯ ನಿರ್ಮಾಣವಾಗಬಹುದು. ಈ ಹೊಗೆಯಿಂದ ಶ್ವಾಸಕ್ಕೆ ಸಂಬಂಧಿತ ಸಮಸ್ಯೆ ನಿರ್ಮಾಣವಾಗಬಹುದು. ಇದರಲ್ಲಿ ಶ್ವಸನಕ್ಕೆ ಸಂಬಂಧಿಸಿದ ಸಮಸ್ಯೆಗಳು, ಥೈರಾಯ್ಡ್ ಮತ್ತು ಕೆಲವು ರೀತಿಯ ಕ್ಯಾನ್ಸರ್ ಗಳ ಸಮಾವೇಶ ಕೂಡ ಇದೆ. ನಿರಂತರ ಬಳಕೆಯಿಂದ ನಾನ್ ಸ್ಟಿಕ್ ಪಾತ್ರೆಗಳ ಮೇಲಿನ ಕೋಟಿಂಗ್ ಹಾಳಾಗಬಹುದು. ವಿಶೇಷವಾಗಿ ಹೆಚ್ಚು ತಾಪಮಾನದಲ್ಲಿ ಅಡಗೆ ಮಾಡುವುದರಿಂದ ಈ ಸಮಸ್ಯೆ ನಿರ್ಮಾಣವಾಗುತ್ತದೆ. ಕ್ರಮೇಣ ಕೋಟಿಂಗ್ ಹಾಳಾಗುತ್ತಿದ್ದಂತೆ ನಾನ್ ಸ್ಟಿಕ್ ಪಾತ್ರೆಯಲ್ಲಿನ ರಸಾಯನಿಕವು ಅಡಿಗೆಯಲ್ಲಿ ಸೇರುವ ಅಪಾಯ ಇರುತ್ತದೆ. ಆಮ್ಲಯುಕ್ತ ಆಹಾರ ಪದಾರ್ಥ ಬೇಯಿಸುವಾಗ ಅಥವಾ ಧಾತುವಿನ ಪಾತ್ರೆಗಳು ಉಪಯೋಗಿಸುವಾಗ ನಿರ್ಮಾಣವಾಗುವ ಈ ಸಮಸ್ಯೆ ಬಹಳ ಆತಂಕದ ವಿಷಯವಾಗಿದೆ.