ಸರ್ವೋಚ್ಚ ನ್ಯಾಯಾಲಯದ ಮಹತ್ವ ಪೂರ್ಣ ನಿರ್ಣಯ!
ನವದೆಹಲಿ – ವಕೀಲರನ್ನು ಗ್ರಾಹಕ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಗೆ ತರುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದೆ. 2007 ರಲ್ಲಿ ರಾಷ್ಟ್ರೀಯ ಗ್ರಾಹಕ ಆಯೋಗದ ಹೇಳಿಕೆ ಪ್ರಕಾರ, ವಕೀಲರು ತಮ್ಮ ಗ್ರಾಹಕರಿಗೆ ಹಣಕ್ಕೆ ಬದಲಾಗಿ ಸೇವೆ ಸಲ್ಲಿಸುತ್ತಾರೆ ಹಾಗಾಗಿ ಇದು ಒಂದು ಒಪ್ಪಂದವಾಗಿದೆ. ಈ ಸೇವೆಯಲ್ಲಿ ಕೊರತೆ ಕಂಡು ಬಂದರೆ ಗ್ರಾಹಕನು ತನ್ನ ವಕೀಲರ ವಿರುದ್ಧ ‘ಗ್ರಾಹಕ ಸಂರಕ್ಷಣಾ ಕಾಯ್ದೆ’ ಅಡಿಯಲ್ಲಿ ದೂರನ್ನು ಸಲ್ಲಿಸಬಹುದಾಗಿತ್ತು.
ಏಪ್ರಿಲ್ 13, 2009 ರಂದು ಸರ್ವೋಚ್ಚ ನ್ಯಾಯಾಲಯವು ಈ ನಿರ್ಣಯವನ್ನು ತಡೆಹಿಡಿದಿತ್ತು. ಈಗ ನ್ಯಾಯಾಲಯವು ತೀರ್ಪು ನೀಡುತ್ತಾ, ವಕೀಲಿಕೆ ಒಂದು ವೃತ್ತಿ ಎಂದು ಹೇಳಿದೆ. ಇದನ್ನು ವ್ಯವಹಾರ ಎಂದು ಹೇಳಲಾಗುವುದಿಲ್ಲ. ಯಾವುದೇ ವೃತ್ತಿಯಲ್ಲಿ ವ್ಯಕ್ತಿಯು ಉನ್ನತ ಗುಣಮಟ್ಟದ ತರಬೇತಿ ಪಡೆದು ಬರುತ್ತಾನೆ. ಆದ್ದರಿಂದ ಕೆಲಸವನ್ನು ವ್ಯಾಪಾರ ಎಂದು ಕರೆಯಲಾಗುವುದಿಲ್ಲ. ಒಬ್ಬ ವಕೀಲ ತನ್ನ ಕಕ್ಷಿದಾರನ ಹೇಳಿಕೆಯ ಅನುಸಾರ ಕೆಲಸ ಮಾಡುತ್ತಾನೆ. ಅವನು ನ್ಯಾಯಾಲಯದಲ್ಲಿ ಕಕ್ಷಿದಾರನ ಪರವಾಗಿ ಯಾವುದೇ ಹೇಳಿಕೆ ನೀಡುವುದಿಲ್ಲ ಅಥವಾ ಪ್ರಕರಣದ ಫಲಿತಾಂಶದ ಬಗ್ಗೆ ಯಾವುದೇ ಪ್ರಸ್ತಾಪವನ್ನು ಮಾಡುವುದಿಲ್ಲ. ಗ್ರಾಹಕ ಸಂರಕ್ಷಣಾ ಕಾಯಿದೆ, 1986 ರ ಕಲಂ 2(1) ರಲ್ಲಿ ನೀಡಲಾದ ಸೇವೆಯ ವ್ಯಾಖ್ಯಾನದಲ್ಲಿ ವಕೀಲರು ಮಾಡುತ್ತಿರುವ ಸೇವೆಯಲ್ಲಿ ಈ ವಿಚಾರ ಬರುವುದಿಲ್ಲ ಎಂದಿದೆ.
📛🔥BREAKING | Advocates Not Liable Under Consumer Protection Act
📢 BREAKING| Advocates Not Liable Under Consumer Protection Act For Deficiency Of Services : Supreme Court
➡️ Supreme Court Ruling: The Supreme Court ruled that lawyers are not liable under the Consumer…
— CA Bimal Jain (@BimalGST) May 14, 2024