Ramacharitmanas in Memory of the World Registry: ಯುನೆಸ್ಕೋದ ‘ಮೆಮೊರಿ ಆಫ್ ದಿ ವರ್ಲ್ಡ್’ ನಲ್ಲಿ ಶ್ರೀ ರಾಮಚರಿತಮಾನಸ ಮತ್ತು ಪಂಚತಂತ್ರಗಳ ಸೇರ್ಪಡೆ! 

ಪ್ಯಾರಿಸ್ – ಶ್ರೀ ರಾಮಚರಿತಮಾನಸ ಮತ್ತು ಪಂಚತಂತ್ರಗಳನ್ನು ಯುನೆಸ್ಕೋದ ‘ಮೆಮೊರಿ ಆಫ್ ದಿ ವರ್ಲ್ಡ್ ಏಷ್ಯಾ ಪೆಸಿಫಿಕ್ ರೀಜನಲ್ ರಿಜಿಸ್ಟರ್’ ನಲ್ಲಿ ಸೇರಿಸಲಾಗಿದೆ. ಈ ಕಾರಣದಿಂದಾಗಿ ಈಗ ಶ್ರೀ ರಾಮಚರಿತಮಾನಸ ಮತ್ತು ಪಂಚತಂತ್ರವು ಜಾಗತಿಕ ಮಟ್ಟದಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕೊಡುಗೆಯೆಂದು ಗುರುತಿಸಲ್ಪಡುತ್ತದೆ. ಇದು 2024 ರ ಆವೃತ್ತಿಯಲ್ಲಿ ಏಷ್ಯಾ ಪೆಸಿಫಿಕ್‌ನ 20 ಪಾರಂಪರಿಕ ತಾಣಗಳನ್ನು ಒಳಗೊಂಡಿದೆ, ಇದರಲ್ಲಿ ಶ್ರೀ ರಾಮಚರಿತಮಾನಸ ಮತ್ತು ಪಂಚತಂತ್ರದ ಹಸ್ತಪ್ರತಿಗಳು ಸೇರಿವೆ. ಅನೇಕ ಭಾರತೀಯ ನಾಗರಿಕರು ಗೋಸ್ವಾಮಿ ತುಳಸಿದಾಸರು ರಚಿಸಿದ ಶ್ರೀ ರಾಮಚರಿತಮಾನಸವನ್ನು ಪಠಿಸುತ್ತಾರೆ ಹಾಗೆಯೇ ಬಾಲ್ಯದಿಂದಲೂ ಪಂಚತಂತ್ರ ಕಥೆಗಳನ್ನು ಕೇಳುತ್ತಾರೆ. ಯುನೆಸ್ಕೋದ ‘ಮೆಮೊರಿ ಆಫ್ ದಿ ವರ್ಲ್ಡ್’ ಉದ್ದೇಶವು ಪ್ರಪಂಚದ ಎಲ್ಲಾ ಪ್ರಮುಖ ಸಾಂಸ್ಕೃತಿಕ ಪರಂಪರೆಗಳನ್ನು ಸಂರಕ್ಷಿಸುವುದಾಗಿದೆ.

ಸಂಪಾದಕೀಯ ನಿಲುವು

ಶ್ರೀ ರಾಮಚರಿತಮಾನಸವನ್ನು ಟೀಕಿಸುವ ನತದೃಷ್ಟ ಭಾರತೀಯ ರಾಜಕಾರಣಿಗಳಿಗೆ `ಯುನೆಸ್ಕೊ’ದಿಂದ ತಪರಾಕಿ ಎಂದೇ ಹೇಳಬೇಕಾಗುವುದು.