ಗರ್ಭನಿರೋಧಕ ಉದ್ಯಮದ ಬಗ್ಗೆ ಟೀಕೆ!
ರೋಮ್ (ಇಟಲಿ) – ಕ್ರಿಶ್ಚಿಯನ್ ಧರ್ಮದ ಸರ್ವೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಇವರು ಇಟಲಿ ಮತ್ತು ಯುರೋಪಿನ ಜನಸಂಖ್ಯೆಯ ಬಿಕ್ಕಟ್ಟಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅವರು ಮಾತನಾಡಿ, ಇಟಲಿ ಜನರು ಹೆಚ್ಚು ಹೆಚ್ಚು ಮಕ್ಕಳನ್ನು ಹೊಂದಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಅವರು ಗರ್ಭನಿರೋಧಕ ಉದ್ಯಮದ ಬಗ್ಗೆಯೂ ಟೀಕಿಸಿದರು. ಇಟಲಿಯು ಜಗತ್ತಿನ ಅತ್ಯಂತ ಕಡಿಮೆ ಜನನ ಪ್ರಮಾಣ ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ಕಳೆದ ವರ್ಷ ಇಲ್ಲಿ ಕೇವಲ 3 ಲಕ್ಷ 79 ಸಾವಿರ ಮಕ್ಕಳು ಜನಿಸಿದ್ದಾರೆ.
ಪೋಪ್ ತಮ್ಮ ಮಾತನ್ನು ಮುಂದುವರಿಸಿ,
1. ಜನನ ಸಂಖ್ಯೆಯೇ ಭರವಸೆಯ ಮೊದಲ ಕಿರಣವಾಗಿರುತ್ತದೆ. ಮಕ್ಕಳು ಮತ್ತು ಯುವಕರು ಇಲ್ಲದೇ, ಯಾವುದೇ ದೇಶವು ಉಜ್ವಲ ಭವಿಷ್ಯದ ಬಯಕೆಯನ್ನು ಕಳೆದುಕೊಳ್ಳುತ್ತದೆ.
2. ದಂಪತಿಗಳಿಗೆ ಮಕ್ಕಳನ್ನು ಹೊಂದಲು ಪ್ರೋತ್ಸಾಹಿಸಲು ದೀರ್ಘಾವಧಿಯ ಸರಕಾರದ ನೀತಿಯನ್ನು ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ.
3. ಮಹಿಳೆಯರಿಗೆ ಮಾತೃತ್ವ ಮತ್ತು ವೃತ್ತಿ ಜೀವನ (ಭವಿಷ್ಯ) ಇವೆರಡನ್ನೂ ಮಾಡಲು ಸಾಧ್ಯವಾಗಲು ನಿಯಮಗಳನ್ನು ರೂಪಿಸಬೇಕು. ಕೆಲಸದ ಪದ್ಧತಿಯನ್ನು ಸುಲಭಗೊಳಿಸುವುದು. ಜೊತೆಗೆ ಮನೆ ಖರೀದಿಗೆ ಇರುವ ಅಡೆತಡೆಗಳನ್ನು ದೂರಗೊಳಿಸುವಂತೆ ಕರೆ ನೀಡಿದರು.
4. ಯುರೋಪಿನ ಮನೆಗಳು ಸಾಮಾನುಗಳಿಂದ ತುಂಬಿದೆ ಆದರೆ ಮಕ್ಕಳಿಲ್ಲದೇ ಖಾಲಿ ಇವೆ.
ಸಂಪಾದಕೀಯ ನಿಲುವುಈ ರೀತಿ ಕರೆ ನೀಡುವ ಹಿಂದೂಗಳ ಮೇಲೆ ಮುಗಿಬೀಳುವ ಜಾತ್ಯಾತೀತವಾದಿಗಳ ಗುಂಪು ಈಗ ಪೋಪರವರ ಈ ಹೇಳಿಕೆಯ ಬಗ್ಗೆ ಏಕೆ ಸುಮ್ಮನಿದ್ದಾರೆ? |