Col. Vaibhav Kale killed Gaza : ಗಾಜಾ: ಗುಂಡಿನ ದಾಳಿಯಲ್ಲಿ ಕರ್ನಲ್ ವೈಭವ್ ಕಾಳೆ ಸಾವು

ಟೆಲ್ ಅವೀವ್ (ಇಸ್ರೇಲ್) – ದಕ್ಷಿಣ ಗಾಜಾದ ರಫಾಹ್ ನಗರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಸೇವೆಯ ಸಂಯೋಜಕರಾದ ಕರ್ನಲ್ ವೈಭವ್ ಅನಿಲ್ ಕಾಳೆ ಸಾವನ್ನಪ್ಪಿದ್ದು ಇನ್ನೊಬ್ಬ ಯೋಧ ಗಾಯಗೊಂಡಿದ್ದಾರೆ. ಕರ್ನಲ್ ವೈಭವ್ ಕಾಳೆ ಭಾರತೀಯ ಸೇನೆಯ ನಿವೃತ್ತ ಕರ್ನಲ್ ಆಗಿದ್ದು, ಅವರು 2022 ರಲ್ಲಿ ಭಾರತೀಯ ಸೇನೆಯಿಂದ ಅಕಾಲಿಕ ನಿವೃತ್ತಿ ಪಡೆದಿದ್ದರು ಎಂದು ತಿಳಿದು ಬಂದಿದೆ.

ವಿಶ್ವಸಂಸ್ಥೆಯ ಉಪ ವಕ್ತಾರ ಫರಹಾನ ಹಕ್ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯ ಪ್ರಕಾರ, 46 ವರ್ಷದ ವೈಭವ್ ಅನಿಲ್ ಕಾಳೆ ಅವರು ಒಂದು ತಿಂಗಳ ಹಿಂದೆ ಗಾಜಾದಲ್ಲಿ ‘ಯುನೈಟೆಡ್ ನೇಷನ್ಸ್ ಡಿಪಾರ್ಟ್ಮೆಂಟ್ ಆಫ್ ಸೇಪ್ಟಿ ಅಂಡ್ ಸೆಕ್ಯುರಿಟಿ'(ವಿಶ್ವಸಂಸ್ಥೆಯ ಸುರಕ್ಷತೆ ಮತ್ತು ಭದ್ರತೆ ಇಲಾಖೆಗೆ) ಭದ್ರತಾ ಸೇವೆಗಳ ಸಂಯೋಜಕರಾಗಿ ಸೇರಿದ್ದರು. ಕರ್ನಲ್ ಕಾಳೆ ಅವರು ತಮ್ಮ ಸಹೋದ್ಯೋಗಿಯೊಂದಿಗೆ ವಾಹನದಲ್ಲಿ ರಫಾಹ ದಲ್ಲಿರುವ ಯುರೋಪಿಯನ್ ಆಸ್ಪತ್ರೆಗೆ ಹೋಗುತ್ತಿರುವಾಗ ಅವರ ಮೇಲೆ ದಾಳಿ ನಡೆದಿದೆ. ಸಂಯುಕ್ತ ರಾಷ್ಟ್ರದ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರು ಸಂಯುಕ್ತ ರಾಷ್ಟ್ರದ ಸಿಬ್ಬಂದಿ ಮೇಲಿನ ನಡೆದ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಕರ್ನಲ್ ಅನಿಲ್ ಕಾಳೆ ಅವರು ಗಾಜಾದಲ್ಲಿನ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ ಮೊದಲ ಸಂಯುಕ್ತ ರಾಷ್ಟ್ರದ ಸಿಬ್ಬಂದಿಯಾಗಿದ್ದಾರೆ.