ಆಂಧ್ರ ಪ್ರದೇಶದಲ್ಲಿನ ಶಾಸಕ ಮತ್ತು ಮತದಾರ ನಡುವೆ ಗಲಾಟೆ !

ನಾಲ್ಕನೆಯ ಹಂತದ ಮತದಾನ

ನವ ದೆಹಲಿ – ಲೋಕಸಭಾ ಚುನಾವಣೆಯಲ್ಲಿನ ನಾಲ್ಕನೆಯ ಹಂತದ ಮತದಾನ ಮೇ ೧೩ ರಂದು ಜಮ್ಮು ಕಾಶ್ಮೀರದಲ್ಲಿನ ೯ ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿನ ೯೬ ಸ್ಥಾನಗಳಿಗಾಗಿ ಮತದಾನ ನಡೆಯಿತು. ಆ ಸಮಯದಲ್ಲಿ ಆಂಧ್ರಪ್ರದೇಶದ ೧೭೫ ವಿಧಾನಸಭಾ ಸ್ಥಾನಗಳಿಗೂ ಮತದಾನ ನಡೆಯಿತು. ಈ ಮತದಾನದ ಸಮಯದಲ್ಲಿ ಆಂಧ್ರಪ್ರದೇಶದಲ್ಲಿನ ಗುಂಟೂರು ಇಲ್ಲಿ ವೈ.ಎಸ್.ಆರ್. ಕಾಂಗ್ರೆಸ್ಸಿನ ಶಾಸಕ ಅಣ್ಣಬಥುನಿ ಶಿವಕುಮಾರ ಇವರು ಓರ್ವ ಮತದಾರನಿಗೆ ಕಪಾಳಕ್ಕೆ ಹೊಡೆದರು. ಅದರ ಪ್ರತ್ಯುತ್ತರ ಎಂದು ಮತದಾರನು ಕೂಡ ಶಿವಕುಮಾರ ಇವರಿಗೆ ಕಪಾಳಕ್ಕೆ ಹೊಡೆದರು. ಬಳಿಕ ಶಾಸಕರ ಬೆಂಬಲಿಗರು ಆ ವ್ಯಕ್ತಿಗೆ ಥಳಿಸಿದರು. ಸಾಲಿನಲ್ಲಿ ಬರದೇ ಇದ್ದದ್ದಕ್ಕೆ ಆ ವ್ಯಕ್ತಿಯು ಶಾಸಕರನ್ನು ತಡೆದಿದ್ದನು, ಇದರಿಂದ ವಿವಾದ ಸೃಷ್ಟಿಯಾಯಿತು, ಇನ್ನೊಂದು ಕಡೆ ಬಿಹಾರದ ಮುಂಗೇರಾದಲ್ಲಿ ಮತದಾನದ ಸಮಯದಲ್ಲಿ ಸ್ಲಿಪ್ ಕೊಡದೆ ಇರುವುದರಿಂದ ಕೆಲವು ಜನರು ಭದ್ರತಾ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಪೊಲೀಸರು ಲಾಠಿ ಚಾರ್ಜ್ ನಡೆಸಿ ೨ ಯುವಕರನ್ನು ವಶಕ್ಕೆ ಪಡೆದರು.

೧. ಆಂಧ್ರ ಪ್ರದೇಶದಲ್ಲಿನ ಜಹೀರಬಾದದ ಕಾಂಗ್ರೆಸ್ ಅಭ್ಯರ್ಥಿ ಸುರೇಶ ಶೇಟಕರ ಇವರ ಸಹೋದರ ನಾಗೇಶ ಶೇಟಕರ ಇವರು ಓರ್ವ ಮತದಾರನಿಗೆ ಕಾಲಲ್ಲಿ ಒದ್ದರು. ಇಬ್ಬರಲ್ಲಿ ಕೆಲವು ಕಾರಣದಿಂದ ವಿವಾದ ನಡೆಯಿತು. ಬಳಿಕ ಮತದಾರನ ದ್ವಿಚಕ್ರ ವಾಹನ ಕೆಳಗೆ ಬಿದ್ದಿತು ಮತ್ತು ಅದನ್ನು ಎತ್ತುವುದಕ್ಕಾಗಿ ಹೋದಾಗ ಶೇಟಕರ ಇವರು ಅವನಿಗೆ ಒದ್ದರು.

೨. ಬಂಗಾಲದ ಬೋಲಾಪುರ ಇಲ್ಲಿ ಮತದಾನದ ಹಿಂದಿನ ತಡರಾತ್ರಿ ತೃಣಮೂಲ ಕಾಂಗ್ರೆಸ್ಸಿನ ಕಾರ್ಯಕರ್ತನ ಹತ್ಯೆ ಮಾಡಲಾಗಿದೆ. ತೃಣಮೂಲ ಕಾಂಗ್ರೆಸದಿಂದ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ಬೆಂಬಲಿಗರ ಮೇಲೆ ಬಾಂಬ್ ಸ್ಫೋಟ ಮಾಡಿರುವ ಆರೋಪ ಮಾಡಿದೆ. ಹಾಗೂ ರಾಜ್ಯದಲ್ಲಿನ ದುರ್ಗಾಪುರದಲ್ಲಿ ಭಾಜಪ ಮತ್ತು ತೃಣಮೂಲ ಕಾಂಗ್ರೆಸ್ ಬೆಂಬಲಿಗರಲ್ಲಿ ಹೊಡೆದಾಟ ನಡೆದಿದೆ. ಬೀರಭೂಮದಲ್ಲಿ ತೃಣಮೂಲ ಬೆಂಬಲಿಗರ ಮೇಲೆ ಸ್ಟಾಲ್ ನ ಧ್ವಂಸಗೊಳಿಸಿರುವುದೆಂದು ಭಾಜಪ ಆರೋಪಿಸಿದ್ದಾರೆ.