Cased Filed on Madhavi Lata: ಮುಸ್ಲಿಂ ಮಹಿಳಾ ಮತದಾರರ ಬುರ್ಖಾ ತೆಗೆದು ಗುರುತಿನ ಚೀಟಿ ಪರಿಶೀಲಿಸಿದ ಭಾಗ್ಯನಗರದ ಭಾಜಪ ಅಭ್ಯರ್ಥಿ ಮಾಧವಿ ಲತಾ !

ಮಾಧವಿ ಲತಾ ವಿರುದ್ಧ ಅಪರಾಧ ದಾಖಲು

ಭಾಗ್ಯನಗರ (ತೆಲಂಗಾಣ) – ಇಲ್ಲಿಯ ಭಾಜಪ ಅಭ್ಯರ್ಥಿ ಮಾಧವಿ ಲತಾ ಅವರು ಇಲ್ಲಿನ ಒಂದು ಮತದಾನ ಕೇಂದ್ರದಲ್ಲಿ ಕೆಲವು ಬುರ್ಖಾಧಾರಿ ಮುಸಲ್ಮಾನ ಮಹಿಳಾ ಮತದಾರರ  ಗುರುತಿನ ಚೀಟಿಯನ್ನು ಕೇಳಿದರು. ಅವರ ಮುಖದ ಮೇಲಿನ ಬುರ್ಖಾ ತೆಗೆದು ಮತದಾನ ಗುರುತಿನ ಚೀಟಿ ಮೇಲಿನ ಛಾಯಾಚಿತ್ರದೊಂದಿಗೆ ಮುಖವನ್ನು ಪರಿಶೀಲಿಸಿದರು. ಈ ಪ್ರಕರಣದ ವೀಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾದ ಬಳಿಕ ವಿವಾದ ನಿರ್ಮಾಣವಾಯಿತು. ಈ ಪ್ರಕರಣದಲ್ಲಿ ಮಾಧವಿ ಲತಾ ಇವರ ವಿರುದ್ಧ ಮಲಕಪೇಟ ಪೊಲೀಸ್ ಠಾಣೆಯಲ್ಲಿ ಅಪರಾಧ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧವಿ ಲತಾ ವಿರುದ್ಧ ಕಲಂ 171 ಎ, 186, 505 (1) (ಎ) ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 132 ರ ಅಡಿಯಲ್ಲಿ ಅಪರಾಧ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ನನಗೆ ಗುರುತಿನ ಚೀಟಿ ಪರಿಶೀಲಿಸುವ ಹಕ್ಕಿದೆ ! – ಮಾಧವಿ ಲತಾ

ಈ ಪ್ರಕರಣದ ಕುರಿತು ಮಾಧವಿ ಲತಾ ಮಾತನಾಡಿ, ನಾನು ಅಭ್ಯರ್ಥಿಯಾಗಿದ್ದೇನೆ. ಕಾನೂನಿನ ಪ್ರಕಾರ, ಅಭ್ಯರ್ಥಿಗೆ  ಗುರುತಿನ ಚೀಟಿಯನ್ನು ಪರಿಶೀಲಿಸುವ ಅಧಿಕಾರವಿದೆ.  ನಾನು ಪುರುಷನಲ್ಲ, ನಾನು  ಮಹಿಳೆ ಮತ್ತು ಅತ್ಯಂತ ನಮ್ರತೆಯಿಂದ ನಾನು ಮುಸ್ಲಿಂ ಮಹಿಳೆಯರನ್ನು  ಕೇವಲ ವಿನಂತಿಸಿದೆನು. ಒಂದು ವೇಳೆ ಅವರಿಗೆ ಈ ಪ್ರಕರಣವನ್ನು ದೊಡ್ಡ ವಿಷಯವನ್ನಾಗಿ ಮಾಡುವುದಿದ್ದರೆ, ಇದರರ್ಥ ವಿರೋಧಿಗಳು ಹೆದರಿದ್ದಾರೆ ಎಂದಾಗಿದೆ ಎಂದು ಹೇಳಿದರು.

 ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸಿ ನಕಲಿ (ಬೋಗಸ್) ಮತದಾನ ಮಾಡುತ್ತಾರೆ! – ಶಾಸಕ ಟಿ.ರಾಜಾ ಸಿಂಗ್

ಬುರ್ಖಾ ಧರಿಸಿ ಓರ್ವ ಮುಸ್ಲಿಂ ಮಹಿಳೆ 20 ಕ್ಕಿಂತ ಹೆಚ್ಚು ಮತಗಳನ್ನು ಚಲಾಯಿಸುತ್ತಾಳೆ, ಇದು ಪ್ರತಿ ಚುನಾವಣೆಯಲ್ಲೂ ನಡೆಯುತ್ತಿರುತ್ತದೆ ಎಂದು ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಹೇಳಿದ್ದಾರೆ.

ಸಂಪಾದಕೀಯ ನಿಲುವು

ಮುಸಲ್ಮಾನ ಮಹಿಳೆಯರು ಮತದಾನ ಮಾಡುವಾಗ ಗುರುತಿನ ಚೀಟಿಯಲ್ಲಿನ ಭಾವಚಿತ್ರ ಮತ್ತು ಪ್ರತ್ಯಕ್ಷ  ಮುಖವನ್ನು ಪರಿಶೀಲಿಸುವುದನ್ನು ಯಾವಾಗಲೂ ವಿರೋಧಿಸುತ್ತಾರೆ. ಬುರ್ಖಾ ಹಿಂದೆ ಯಾರಿದ್ದಾರೆ?  ಎನ್ನುವುದನ್ನು ತಪಾಸಣೆ ನಡೆಸಲು ಸಾಧ್ಯವಾಗದ ಕಾರಣ ನಕಲಿ (ಬೋಗಸ್) ಮತದಾನ ನಡೆಯುತ್ತಿದೆ ಎಂಬ ಮಾತು ಹಲವು ವರ್ಷಗಳಿಂದ ಹೇಳಲಾಗುತ್ತಿದೆ. ಈಗ ಪ್ರತ್ಯಕ್ಷ ಅಭ್ಯರ್ಥಿಯೇ ಬಂದು ತನಿಖೆ ನಡೆಸಿದರೆ, ಆಕೆಯನ್ನು ಹೇಗೆ ತಪ್ಪಿತಸ್ಥಳನ್ನಾಗಿ ನಿರ್ಧರಿಸುವಿರಿ? ಚುನಾವಣಾ ಆಯೋಗಕ್ಕೆ ಇದು ಗಮನಕ್ಕೆ ಬರುವುದಿಲ್ಲವೇ?