ಕಾಂಗ್ರೆಸ್ ನ ಮಣಿಶಂಕರ್ ಅಯ್ಯರ್ ಇವರ ಪಾಕಿಸ್ತಾನದ ಬಳಿ ‘ಪರಮಾಣು ಬಾಂಬ್’ ಇರುವ ಹೇಳಿಕೆಗೆ ಯೋಗಿ ಆದಿತ್ಯನಾಥರ ಉತ್ತರ !
ನವದೆಹಲಿ – ಕಾಂಗ್ರೆಸ್ ನಾಯಕ ಮಣಿಶಂಕರ ಅಯ್ಯರ್ ಇವರು ‘ಪಾಕಿಸ್ತಾನವನ್ನು ಗೌರವಿಸಬೇಕು, ಅವರ ಬಳಿ ಪರಮಾಣು ಬಾಂಬ್ ಇದೆ’ ಎಂದು ಹೇಳಿಕೆ ನೀಡಿದ್ದರು. ಈ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ನಮ್ಮಲ್ಲಿಯ ಪರಮಾಣು ಬಾಂಬ್‌ಗಳನ್ನು ಫ್ರಿಡ್ಜ್‌ನಲ್ಲಿಡಲು ಇದೆಯೇ ? ಎಂದು ಪ್ರತ್ಯುತತ್ರ ನೀಇಡದ್ದಾರೆ. ಮಣಿಶಂಕರ್ ಅಯ್ಯರ್ ಕಾಂಗ್ರೆಸ್ ನ ‘ಮಣಿ’ ಆಗಿರಬಹುದು; ಆದರೆ ಭಾರತದವರಾಗಲು ಸಾಧ್ಯವಿಲ್ಲ. ಇದು ನವ ಭಾರತವಾಗಿದೆ. ನವ ಭಾರತ ಯಾರನ್ನೂ ತೆಗಳುವುದಿಲ್ಲ; ಆದರೆ ನಮ್ಮನ್ನು ಚುಡಾಯಿಸುವವನನ್ನು ನಾವು ಬಿಡುವುದಿಲ್ಲ. ನಾವು ಸಂಬಂಧಪಟ್ಟವರ ಮನೆಗೆ ನುಗ್ಗಿ ಉತ್ತರಿಸುತ್ತೇವೆ. ಎಂದು ಹೇಳಿದ್ದಾರೆ. ಪಟಾಕಿ ಜೋರಾಗಿ ಸಿಡಿದರೂ ಪಾಕಿಸ್ಥಾನ ‘ನಮ್ಮ ಕೈವಾಡವಿಲ್ಲ’ ಎಂದು ಹೇಳುವಷ್ಟು ಭಯ ಪಡುವ ಪರಿಸ್ಥಿತಿ ಬರುವುದು, ಇದು ನವಭಾರತದ ಯಶಸ್ಸು ಆಗಿದೆ.
ಯೋಗಿ ಆದಿತ್ಯನಾಥ ತಮ್ಮ ಮಾತನ್ನು ಮುಂದುವರೆಸುತ್ತಾ, ಕಾಂಗ್ರೆಸ್ ಯಾವಾಗಲೂ ವಿಭಜನೆಯ ರಾಜಕಾರಣ ಮಾಡುತ್ತಿದೆ. ಅವರು ಮೊದಲು ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸಿದರು. ನಂತರ ಭಾಷೆ ಮತ್ತು ಪ್ರದೇಶದ ಆಧಾರದ ಮೇಲೆ ದೇಶವನ್ನು ವಿಭಜಿಸುವ ಪ್ರಯತ್ನ ಮಾಡಿತು. ಅವರು 1947 ರಲ್ಲಿ ದೇಶವನ್ನು ವಿಭಜಿಸಿದರು. ಕಾಂಗ್ರೆಸ್ ಈಗಲೂ ಪಾಕಿಸ್ತಾನವನ್ನು ಹಾಡಿ ಹೊಗಳುತ್ತಿದೆ ಎಂದು ಹೇಳಿದರು.
हमारे एटम बम फ्रिज में रखने के लिए हैं क्या! pic.twitter.com/boH7bjLHGe
— Yogi Adityanath (मोदी का परिवार) (@myogiadityanath) May 11, 2024