ಭಾರತದಲ್ಲಿನ ಅಮೆರಿಕ ರಾಯಭಾರಿಯ ದುರಹಂಕಾರಿ ಹೇಳಿಕೆ !
ವಾಷಿಂಗ್ಟನ್ (ಅಮೇರಿಕಾ) – ಪಾಶ್ಚಿಮಾತ್ಯರ ವಿರೋಧವನ್ನು ಧಿಕ್ಕರಿಸಿ ಭಾರತ 2 ವರ್ಷಗಳ ಹಿಂದೆ ರಷ್ಯಾದಿಂದ ತೈಲ ಖರೀದಿಯನ್ನು ಗಣನೀಯವಾಗಿ ಹೆಚ್ಚಿಸಿದೆ. ಈ ಕುರಿತು ಭಾರತದಲ್ಲಿನ ಅಮೆರಿಕಾದ ರಾಯಭಾರಿ ಎರಿಕ್ ಗಾರ್ಸೆಟಿ ಹೇಳಿಕೆ ನೀಡಿದ್ದಾರೆ. ಅವರು, ‘ಭಾರತ ರಷ್ಯಾದಿಂದ ತೈಲ ಖರೀದಿಸಿತು; ಏಕೆಂದರೆ ತೈಲ ಬೆಲೆ ಏರಿಕೆಯಾಗಬಾರದು ಎಂದು ಅಮೆರಿಕಾಗೆ ಇಚ್ಛೆ ಇತ್ತು. ಯಾರಾದರೂ ರಷ್ಯಾದ ತೈಲವನ್ನು ಖರೀದಿಸಬೇಕೆಂದು ನಮಗೆ ಅನಿಸುತ್ತಿತ್ತು. ಇದು ನಮ್ಮ ನೀತಿಯ ರಚನೆಯಾಗಿತ್ತು.” ‘ಅಂತರರಾಷ್ಟ್ರೀಯ ಬೆಳವಣಿಗೆಗಳಲ್ಲಿನ ವೈವಿಧ್ಯತೆ’ ಕುರಿತ ಒಂದು ಸುದ್ಧಿಗೋಷ್ಠಿಯಲ್ಲಿ ಗಾರ್ಸೆಟಿ ಮಾತನಾಡುತ್ತಿದ್ದರು.
1. ಗಾರ್ಸೆಸಿ ತಮ್ಮ ಮಾತನ್ನು ಮುಂದುವರೆಸುತ್ತಾ, ಕಳೆದ ಸೆಪ್ಟೆಂಬರ್‌ನಲ್ಲಿ ದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಭಾರತವು ಉಕ್ರೇನ್ ಕುರಿತು ಹೇಳಿಕೆ ನೀಡಿದ್ದರೂ ರಷ್ಯಾದ ಪರವಾಗಿ ನಿಂತಿತು. ಆದ್ದರಿಂದ ಇದು ರಷ್ಯಾಕ್ಕೆ ಮಾರಕವಾಗಿರಲಿಲ್ಲ. ನಾವು (ಅಮೆರಿಕಾ) ಯುರೋಪಿನ ಪರವಾಗಿರಬಹುದು. ಇದರಿಂದ ಚೀನಾಕ್ಕೆ ಮಾರಕವಾಯಿತು. ಇದೆಲ್ಲವೂ ಭಾರತ-ಅಮೆರಿಕ ಸಂಬಂಧಗಳ ವೈವಿಧ್ಯತೆಯನ್ನು ತೋರಿಸುತ್ತದೆ. ಇದು ಅತ್ಯಂತ ಪ್ರಾಮಾಣಿಕ ಸಂಬಂಧವಾಗಿದೆ.
2. ಗಾರ್ಸೆಟ್ಟಿ ಅವರು ಭಾರತ-ಅಮೇರಿಕಾ ಸಂಬಂಧಗಳನ್ನು ‘ಆಧುನಿಕ ಪ್ರೇಮ ಸಂಬಂಧ’ ಎಂದು ಬಣ್ಣಿಸಿದ್ದಾರೆ. ಅವರು, ಮೊದಲು ಜಟಿಲ ಸಂಬಂಧದಲ್ಲಿದ್ದ ನಾವು ಈಗ ‘ಪ್ರೇಮ ಸಂಬಂಧ’ ಇಡಲು ಪ್ರಯತ್ನಿಸುತ್ತಿದ್ದೇವೆ ಎಂದರು. ನಾವು ಪರಸ್ಪರರ ಅಭ್ಯಾಸಗಳನ್ನು ಅರ್ಥಮಾಡಿಕೊಳ್ಳುತ್ತಿದ್ದೇವೆ ಮತ್ತು ನಾವು ಈಗ ಒಟ್ಟಿಗೆ ವಾಸಿಸುತ್ತಿದ್ದೇವೆ ಎಂದು ಹೇಳಬಹುದು. ಯಾವುದೇ ಬಣದಿಂದ ದೂರವಿರುವುದೇ ತನ್ನ ನೀತಿ ಎಂದು ಭಾರತ ಸ್ಪಷ್ಟಪಡಿಸಿದೆ. ಅಂದರೆ ಅವರು ಯಾವುದೇ ಗುಂಪಿನ ಭಾಗವಾಗಲು ಇಚ್ಛೆ ಇಲ್ಲ. ಅವರಿಗೆ ಯಾರ ಸಹವಾಸವೂ ಬೇಕಾಗಿಲ್ಲ. ಭಾರತವು ಮದುವೆಯಾಗದೆ ಏಕಾಂಗಿಯಾಗಿರಲು ಬಯಸುತ್ತದೆ. ಭಾರತ ಮತ್ತು ಅಮೆರಿಕ ಜಗತ್ತಿನ ಎರಡು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿವೆ. ಇಬ್ಬರಲ್ಲೂ ದೋಷಗಳಿವೆ. ನಾವು ಒಪ್ಪಿಕೊಳ್ಳಬೇಕು.
ಆಗ ಪೆಟ್ರೋಲ್ ಕನಿಷ್ಠ 20 ರೂಪಾಯಿ ದುಬಾರಿಯಾಗುತ್ತಿತ್ತು ! – ವಿದೇಶಾಂಗ ಸಚಿವ
ಭಾರತವು, ನಾವು ಯಾರಿಂದ ತೈಲ ಖರೀದಿಸಬೇಕು ಮತ್ತು ಯಾರಿಂದ ಖರೀದಿಸಬಾರದು ಎಂಬುದು ನಮ್ಮ ನಿರ್ಧಾರ ಎಂದು ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ ಸ್ಪಷ್ಟಪಡಿಸಿತ್ತು. ನಾವು ಯಾರ ಒತ್ತಡಕ್ಕೂ ಒಳಗಾಗುವುದಿಲ್ಲ.
ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಇವರು ಮೇ 11ರಂದು ಅಮೃತಸರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ, ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳದಂತೆ ನಮ್ಮ ಮೇಲೆ ಒತ್ತಡ ಹೇರಲಾಗಿತ್ತು. ಸ್ವಲ್ಪ ಯೋಚಿಸಿ, ನಾವು ಒತ್ತಡಕ್ಕೆ ಮಣಿದು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿದ್ದರೆ, ಜನರಿಗೆ ಪೆಟ್ರೋಲ್ ಬೆಲೆ ಕನಿಷ್ಠ 20 ರೂಪಾಯಿಯಷ್ಟು ದುಬಾರಿ ಆಗಬಹುದಿತ್ತು ಎಂದು ಹೇಳಿದರು.
ಸಂಪಾದಕೀಯ ನಿಲುವುಇದ್ದಕ್ಕೆ ಹೇಳೋದು ಕಳ್ಳನಿಗೊಂದು ಪಿಳ್ಳೆ ನೆವ ಅಂತ ! 2022 ರಲ್ಲಿ ಭಾರತವನ್ನು ಪ್ರತ್ಯೇಕಿಸಲು, ಅಮೆರಿಕ ಮತ್ತು ಯುರೋಪಿಯನ್ ರಾಷ್ಟ್ರಗಳು ರಷ್ಯಾದಿಂದ ತೈಲವನ್ನು ಖರೀದಿಸದಂತೆ ಭಾರತದ ಮೇಲೆ ಒತ್ತಡ ಹೇರುತ್ತಿದ್ದವು. ಭಾರತ ಎಲ್ಲಾ ವಿರೋಧಗಳನ್ನು ಧಿಕ್ಕರಿಸಿ ಸಮರ್ಥವಾಗಿ ಏಕಾಂಗಿಯಾಗಿ ನಿಂತಿತು. ಈಗ ಭಾರತದ ಈ ದಿಟ್ಟತನದ ಹಿಂದೆ ಅಮೆರಿಕದ ಕೈವಾಡವಿದೆ ಎಂದು ಈಗ ಅಮೆರಿಕಾಗೆ ಹೇಳಲಿಕ್ಕೆ ಇದೆ. ಇಂತಹ ಕಪಟ ಅಮೆರಿಕಾಗೆ ಎಂದಿಗೂ ಭಾರತದ ಮಿತ್ರನಾಗಲಾರದು ! |