ISRO Tests Liquid Rocket Engine: ಲಿಕ್ವಿಡ್ ರಾಕೆಟ್ ಎಂಜಿನ್’ನ ಪರೀಕ್ಷೆ ಯಶಸ್ವಿಯಾಗಿ ನಡೆಸಿದ ಇಸ್ರೋ !

ಬೆಂಗಳೂರು – ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ‘ಡಿಟಿವ್ ಮ್ಯಾನುಫೆಕ್ಚರಿಂಗ್ ಟೆಕ್ನಾಲಾಜಿ’ಯ ಸಹಾಯದಿಂದ ತಯಾರಿಸಿದ ‘ಲಿಕ್ವಿಡ್ ರಾಕೆಟ್ ಎಂಜಿನ್’ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಇದನ್ನು ಸಾಮಾನ್ಯವಾಗಿ ‘3D ಪ್ರಿಂಟಿಂಗ್’ ಎಂದು ಕರೆಯಲಾಗುತ್ತದೆ.

‘ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್’ (PSLV) ನಾಲ್ಕನೇ ಹಂತದ ರಾಕೆಟ್ ಆಗಿದೆ. ಲಿಕ್ವಿಡ್ ರಾಕೆಟ್ ಎಂಜಿನ್ ಪಿ.ಎಸ್.ಎಲ್.ವಿ.ಯ ಮುಂದಿನ ಹಂತದ ಎಂಜಿನ್ ಆಗಿದೆ. 3ಡಿ ಪ್ರಿಂಟಿಂಗ್ ತಂತ್ರಜ್ಞಾನವು ಇಸ್ರೋಗೆ ಇಂಜಿನ್‌ನಲ್ಲಿನ ಭಾಗಗಳ ಸಂಖ್ಯೆಯನ್ನು 14 ರಿಂದ 1 ಕ್ಕೆ ಇಳಿಸಲು ಸಹಾಯ ಮಾಡಿತು. ಇದರಿಂದ, ಶೇ. 97 ರಷ್ಟು ಕಚ್ಚಾ ವಸ್ತು ಬಳಕೆ ಉಳಿಸಲಾಗಿದೆ. ಅಲ್ಲದೆ ಉತ್ಪಾದನೆಯ ಒಟ್ಟು ಸಮಯವನ್ನು ಶೇಕಡಾ 60 ರಷ್ಟು ಕಡಿಮೆಗೊಳಿಸಲಾಯಿತು.