ಸದ್ಯಕ್ಕೆ ಈ ಪ್ರಮಾಣ ಕೇವಲ 20 ಕೋಟಿ!
ನವದೆಹಲಿ – ನೇತ್ರ ಸಂಬಂಧಿ ಖಾಯಿಲೆಗಳ ಅಪಾಯಗಳ ಬಗ್ಗೆ ಇತ್ತೀಚೆಗೆ ಬಿಡುಗಡೆಯಾದ ಒಂದು ವರದಿಯಲ್ಲಿ ಆರೋಗ್ಯ ತಜ್ಞರು ಗಂಭೀರ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ತಜ್ಞರು ತಮ್ಮ ವರದಿಯಲ್ಲಿ ನಮ್ಮ ಜೀವನಶೈಲಿಯ ಗುಣಮಟ್ಟ ಕ್ಷೀಣಿಸುತ್ತಿರುವುದರಿಂದ, 2040 ರ ವೇಳೆಗೆ 30 ಕೋಟಿಗಿಂತಲೂ ಹೆಚ್ಚು ಜನರು ‘ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್’ ಅಪಾಯಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಈ ರೋಗ ದೃಷ್ಟಿ ಕಡಿಮೆಯಾಗುವ ಅಥವಾ ಕಣ್ಣಿಗೆ ಸಂಬಂಧಿಸಿದ ಗಂಭೀರ ಖಾಯಿಲೆಗಳಿಗೆ ಪ್ರಮುಖ ಕಾರಣವೆಂದು ಪರಿಗಣಿಸಲಾಗಿದೆ. ಈ ರೋಗವು 50 ವರ್ಷ ವಯಸ್ಸಿನ ನಂತರ ಸಂಭವಿಸುವ ಸಾಧ್ಯತೆಯಿದೆ ಅಥವಾ ಇದು ಅನುವಂಶೀಯ ಕಾರಣದಿಂದಲೂ ಬರಬಹುದು. ಪ್ರಸ್ತುತ, ವಿಶ್ವದಾದ್ಯಂತ 20 ಕೋಟಿಗೂ ಹೆಚ್ಚು ಜನರು ಈ ಸಮಸ್ಯೆಗೆ ಬಲಿಯಾಗಿದ್ದಾರೆ.
ನಿಮ್ಮ ಕಣ್ಣಿನಲ್ಲಿರುವ ರೆಟಿನಾದ (ಕಣ್ಣಿನ ಪ್ರಮುಖ ಅಂಗ) ಮಧ್ಯ ಭಾಗವು (‘ಮ್ಯಾಕುಲಾ’ ಎಂದು ಕರೆಯಲ್ಪಡುತ್ತದೆ) ಹಾನಿಗೊಳಗಾದಾಗ ಹೀಗೆ ಆಗುತ್ತದೆ. ನೇತ್ರತಜ್ಞ ಮಾರ್ಕೊ ಅಲೆಜಾಂಡ್ರೊ ಗೊನ್ಜಾಲೆಜ್ ಹೇಳುತ್ತಾರೆ, ‘ಈ ಸಮಸ್ಯೆಗೆ ಅನೇಕ ಅಂಶಗಳು ಕಾರಣವೆಂದು ಕಂಡುಬಂದಿದೆ. ಈ ಖಾಯಿಲೆಯ ಲಕ್ಷಣಗಳು ಮತ್ತು ಕಾರಣಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಇದನ್ನು ತಡೆಗಟ್ಟಲು ಬಾಲ್ಯದಿಂದಲೇ ಪ್ರಯತ್ನಿಸುವುದು ಬಹಳ ಮುಖ್ಯವೆಂದು ತಿಳಿಯಲಾಗಿದೆ.’
ಅನಾರೋಗ್ಯಕ್ಕೆ ಒಳಗಾಗದಿರಲು ಹೀಗೆ ಪ್ರಯತ್ನಿಸಿರಿ!
1. ಅಧಿಕ ಸಂಶೋಧಕರು ಹೀಗೆ ಹೇಳಿದರು, ಧೂಮಪಾನ, ರಕ್ತದೊತ್ತಡ ಅಥವಾ ಕೊಲೆಸ್ಟ್ರಾಲ್ ಸಮಸ್ಯೆಗಳು, ಅಧಿಕ ಸ್ಯಾಚುರೇಟೆಡ್ ಕೊಬ್ಬಿನ ಸೇವನೆ ಇದು ಪ್ರಮುಖವಾಗಿ ಚೀಜ಼್, ಬಟರ್, ಗೋಮಾಂಸ, ಪೇಸ್ಟ್ರೀ, ಕೊಬ್ಬರಿ ಎಣ್ಣೆ, ಚಾಕೊಲೇಟ್, ಐಸ್ ಕ್ರೀಮ್ ನಲ್ಲಿ ಅಧಿಕ ಇರುತ್ತದೆ.
2. ಈ ರೋಗಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಇದರ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬಹುದು.
3. ನಿಮಗೆ ಅಧಿಕ ರಕ್ತದೊತ್ತಡ ಇದ್ದರೆ ಜಾಗರೂಕರಾಗಿರಿ. ನಿಮ್ಮ ತೂಕವನ್ನು ನಿಯಂತ್ರಿಸಿರಿ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಿರಿ.
4. ದಿನನಿತ್ಯದ ಇಂತಹ ಅಭ್ಯಾಸಗಳು ಕಣ್ಣುಗಳನ್ನು ದೀರ್ಘಕಾಲದವರೆಗೆ ಆರೋಗ್ಯವಾಗಿಡಲು ಸಹಕಾರಿಯಾಗುತ್ತವೆ.
ಸಂಪಾದಕೀಯ ನಿಲುವುಧೂಮಪಾನ, ಅಧಿಕ ರಕ್ತದೊತ್ತಡ, ಸ್ಥೂಲಕಾಯದಿಂದ ಈ ರೋಗ ಬರುತ್ತದೆ! |