ದಾಭೋಲ್ಕರ್ ಹತ್ಯೆ ಪ್ರಕರಣದ ತೀರ್ಪು ನೋಡಿದರೆ ನ್ಯಾಯಾಲಯದ ಮೇಲೆ ಒಂದಿಷ್ಟು ಒತ್ತಡ ಇರುವಂತಿದೆ. 3 ಆರೋಪಿಗಳ ಬಿಡುಗಡೆ ನಾನು ಸ್ವಾಗತಿಸುತ್ತೇನೆ; ಏಕೆಂದರೆ ಈ ಪ್ರಕರಣದ ಚಾರ್ಜ್ ಶೀಟ್ ನೋಡಿದ್ದೇನೆ. ಈ ಪ್ರಕರಣದಲ್ಲಿ 5 ಆರೋಪಿಗಳನ್ನು ಭಾಗಿಯಾಗಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಈ ಪ್ರಕರಣದಲ್ಲಿ ಏನೇ ನಡೆದರೂ ನ್ಯಾಯಾಲಯದಲ್ಲಿ ಗೆಲುವು ನಿಶ್ಚಿತ. ‘ಧರ್ಮೋ ರಕ್ಷತಿ ರಕ್ಷಿತಃ’ ಎನ್ನುವಂತೆ ಈ ಇಬ್ಬರ ನಿರಪರಾಧಿತ್ವ ಹೈಕೋರ್ಟ್ ನಲ್ಲಿ ಸಾಬೀತಾಗಲಿದೆ ಎಂಬ ನಂಬಿಕೆ ಇದೆ. ನ್ಯಾಯ, ಸತ್ಯ ಮತ್ತು ಧರ್ಮ ಯಾವಾಗಲೂ ಮೇಲುಗೈ ಸಾಧಿಸುತ್ತವೆ. ನ್ಯಾಯಾಲಯದ ತೀರ್ಪು ಸಿಬಿಐಗೆ ಕಪಾಳಮೋಕ್ಷವಾಗಿದೆ.