ತೋರಿಕೆಯ ಪ್ರಗತಿಪರ ರಾಜಕಾರಣಿಗಳ ಎಂದಿನ ಗೋಳಾಟ !
ದಾಭೋಲಕರರವರ ಹತ್ಯೆಯ ಪ್ರಕರಣದ ತೀರ್ಪು ಬರಲು ಇಷ್ಟು ವರ್ಷ ತಗುಲಿದ್ದರಿಂದ ನಾವು ಅಸಮಾಧಾನಗೊಂಡಿದ್ದೇವೆ. ಕನಿಷ್ಠ ಏನಾದರೂ ತೀರ್ಪು ಬಂದಿದೆ. ದಾಭೋಲಕರ ರವರ ಆತ್ಮಕ್ಕೆ ಏನಾದರೂ ನ್ಯಾಯ ಸಿಗಬೇಕು. ಕೊಲೆಗಾರರಿಗೆ ಶಿಕ್ಷೆಯಾಗಿದ್ದರೂ ಮುಖ್ಯ ಸೂತ್ರಧಾರನ ಬಿಡುಗಡೆಯಾಗಿದೆ. ಅದಕ್ಕಾಗಿ ರಾಜ್ಯ ಸರಕಾರವು ಅಪಿಲ್ ಮಾಡಬೇಕು. (ಹಿಂದೂ ಭಯೋತ್ಪಾದನೆಯ ಆ ಕಟ್ಟುಕಥೆಯನ್ನು ಸಮಾಜದ ಮನಸ್ಸಿನಲ್ಲಿ ಬಿಂಬಿಸುವಲ್ಲಿ ಪವಾರರು ಮುಂಚೂಣಿಯಲ್ಲಿದ್ದರು. ನ್ಯಾಯಾಲಯದ ತೀರ್ಪಿನಿಂದ ಈ ಕಟ್ಟುಕಥೆಯ ನಾಶವಾಗಿದೆ. ಆದುದರಿಂದ ಪವಾರ ರವರು ಹಿಂದೂಗಳಲ್ಲಿ ಕ್ಷಮೆ ಕೇಳುವರೇ ? ಉತ್ತರ ನೀಡಿ ! – ಸಂಪಾದಕರು)
ಪುನಃ ಇನ್ನೊಮ್ಮೆ ವಿವೇಕದ ವಿಚಾರಧಾರೆಯನ್ನು ಮುನ್ನಡೆಸಬೇಕು (ಅಂತೆ) ! – ಜಿತೇಂದ್ರ ಆಹ್ವಾಡ, ಶರದ ಪವಾರ ಗುಂಪಿನ ನಾಯಕ
ಡಾ. ನರೇಂದ್ರ ದಾಬೋಲಕರ ರವರ ಹತ್ಯೆಯ ೧೧ ವರ್ಷಗಳ ನಂತರ ಬಂದಿರುವ ಈ ತೀರ್ಪಿಗೆ ಸ್ವಾಗತ ! ದಾಬೋಲಕರ ಕುಟುಂಬದವರು ಮತ್ತು ಅಂನಿಸದ ಎಲ್ಲ ಕಾರ್ಯಕರ್ತರು ಸಂಯಮದಿಂದ ನಡೆಸಿರುವ ಹೋರಾಟದ ಬಗ್ಗೆ ಅಭಿಮಾನವೆನಿಸುತ್ತದೆ. ಇಂದು ಸಂಪೂರ್ಣ ದೇಶ ಜಂಜಾಟ, ಸುಳ್ಳು ಹೇಳಿಕೆ ಮತ್ತು, ಧಾರ್ಮಿಕ ತೋರಿಕೆಯಿಂದ ಬೇಸತ್ತಿದ್ದು ಪುನಃ ಇನ್ನೊಮ್ಮೆ ವಿವೇಕ ವಿಚಾರಧಾರೆಯನ್ನು ಮುನ್ನಡೆಸುವ ಮಾರ್ಗದಲ್ಲಿದೆ. ಕೆಲವು ತಲೆಕೆಟ್ಟ ಜನರು ಡಾ.ದಾಭೋಲಕರ ರವರನ್ನು ಮುಗಿಸಿದರು; ಆದರೆ ಅವರಿಗೆ ಅವರ ವಿಚಾರವನ್ನು ಮುಗಿಸಲು ಸಾಧ್ಯವಾಗಲಿಲ್ಲ. ವಿವೇಕದ ಧ್ವನಿ ಗಟ್ಟಿಯಾಗಲಿ ! (ರೌಡಿಗಳಂತೆ ವರ್ತಿಸುವ ರಾಜಕಾರಣಿಗಳು ವಿವೇಕದ ಭಾಷೆಯನ್ನು ಉಪಯೋಗಿಸುವುದು ಅತ್ಯಂತ ಹಾಸ್ಯಾಸ್ಪದವಾಗಿದೆ ! – ಸಂಪಾದಕರು )
ಮಾಸ್ಟರ ಮೈಂಡ್ ಗೂ ಶಿಕ್ಷೆಯಾಗುವುದು ಅವಶ್ಯಕ (ಅಂತೆ) ! – ಶಾಸಕ ರೋಹಿತ ಪವಾರ, ಶರತ ಪವಾರ ಗುಂಪು (ಟ್ವಿಟರ್ ನಿಂದ ನೀಡಿರುವ ಪ್ರತಿಕ್ರಿಯೆ)
ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಸಂಸ್ಥಾಪಕ ಡಾ. ನರೇಂದ್ರ ದಾಬೋಲಕರ ರವರ ಹತ್ಯೆಯ ಪ್ರಕರಣದಲ್ಲಿ ಶರದ ಕಳಸಕರ ಮತ್ತು ಸಚಿನ ಅಂದುರೆ ಎಂಬ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದಕ್ಕಾಗಿ ನ್ಯಾಯಾಲಯಕ್ಕೆ ಧನ್ಯವಾದಗಳು ! ಆದರೆ ಕೆಲವು ಆರೋಪಿಗಳು ಇದರಿಂದ ನಿರಪರಾಧಿ ಎಂದು ಬಿಡುಗಡೆ ಹೊಂದಿದ್ದು ಅವರ ಮೇಲಿನ ಆರೋಪವನ್ನು ಸಾಬೀತಪಡಿಸುವಲ್ಲಿ ಸರಕಾರವು ವಿಫಲವಾಗಿದೆ, ಇದರ ಬಗ್ಗೆ ಬೇಸರವಿದೆ. ಇದರೊಂದಿಗೆ ಆರೋಪಿಗಳಿಗೆ ಶಿಕ್ಷೆಯಾಗುವುದೂ ಅವಶ್ಯಕವಾಗಿದೆ, ಆದರೆ ಈ ಪ್ರಕರಣದಲ್ಲಿನ ಮಾಸ್ಟರ್ ಮೈಂಡ್ ಮಾತ್ರ ಸಿಲುಕಿಲ್ಲ. ಅವರ ಮುಸುಕನ್ನು ತೆಗೆದು ಕಾನೂನಿನ ಪ್ರಕಾರ ಅವರಿಗೆ ಶಿಕ್ಷೆ ವಿಧಿಸುವುದು ಅವಶ್ಯಕವಾಗಿದೆ. (ದಾಬೊಲಕರ ಪ್ರಕರಣದ ಮಾಸ್ಟರ್ ಮೈಂಡ್ ಕಾಲದ ಸೆಳೆತದಲ್ಲಿ ಬೆಳಕಿಗೆ ಬರುವನು. ಆದರೆ ರಾಷ್ಟ್ರವಾದಿ ಕಾಂಗ್ರೆಸ್ಸಿನ ಕಾರ್ಯಕಾಲದಲ್ಲಿ ಅನೇಕ ಹಗರಣಗಳು ನಡೆದಿವೆ, ಅವುಗಳ ಮಾಸ್ಟರ್ ಮೈಂಡ್ ಯಾರು ? ಜನರು ಅದನ್ನು ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ ! – ಸಂಪಾದಕರು)
ತೀರ್ಪಿನ ಬಗ್ಗೆ ಇಂತಹದೊಂದು ಜಾತೀಯತೆಯ ಆಲಾಪ !ತೀರ್ಪಿನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ನಿರಪರಾಧಿಗಳ ಬಿಡುಗಡೆ ಮತ್ತು ಅಪರಾಧ ಸಾಬೀತಾಗಿರುವ ಬಗ್ಗೆ ಕೆಲವು ಗುಂಪುಗಳಲ್ಲಿ ಚರ್ಚೆ ನಡೆಯುತ್ತಿತ್ತು. ಇದರಲ್ಲಿ ನಿರಪರಾಧಿ ಎಂದು ಬಿಡುಗಡೆಯಾದವರು ಮೇಲ್ಜಾತಿಯವರಾಗಿದ್ದಾರೆ, ಹಾಗೂ ಅಪರಾಧಿಯೆಂದು ಸಾಬೀತಾದವರು ಬಹುಜನ ಸಮಾಜದವರಾಗಿದ್ದಾರೆ. ಬಹುಜನ ಸಮಾಜದಲ್ಲಿನ ವ್ಯಕ್ತಿಗಳನ್ನು ಉಪಯೋಗಿಸಲಾಗುತ್ತದೆ ಮತ್ತು ಅವರನ್ನು ಸಿಲುಕಿಸಲಾಗುತ್ತದೆ ಎಂಬ ಜಾತಿಯತೆಯ ಕುರಿತಾದ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಲಾಗಿದೆ . |