Dabholkar Murder Case Verdict : 3 ಜನರ ಖುಲಾಸೆ ಆಗಿರುವುದು ವಿಜಯವೇ ಆಗಿದೆ ! – ನ್ಯಾಯವಾದಿ ವಿರೇಂದ್ರ ಇಚಲಕರಂಜಿಕರ್, ಅಧ್ಯಕ್ಷರು, ಹಿಂದೂ ವಿಧಿಜ್ಞ ಪರಿಷತ್ತು

ಡಾ. ವೀರೇಂದ್ರ ಸಿಂಗ್ ತಾವಡೆ ಅವರನ್ನು ದೋಷಮುಕ್ತಗೊಳಿಸಲಾಗಿದೆ. ಅವರ ಮೇಲೆ ಮಾಸ್ಟರ್ ಮೈಂಡ್ ಎಂಬ ಮಹತ್ವದ ಆರೋಪವಿತ್ತು, ಅದನ್ನು ನ್ಯಾಯಾಲಯ ವಜಾಗೊಳಿಸಿದೆ. ಅವರ ಮೇಲೆ ‘ಭಯೋತ್ಪಾದಕ ಚಟುವಟಿಕೆ’ಗಳ ಆರೋಪ ಹೊರಿಸಿ ಅವರನ್ನು ಅಪರಾಧಿಗಳೆಂದು ಪರಿಗಣಿಸಲು ಸಿಬಿಐ ಪ್ರಯತ್ನಿಸಿತು. ನ್ಯಾಯಾಲಯ ಕೂಡ ಆ ಆರೋಪವನ್ನು ತಳ್ಳಿಹಾಕಿದೆ. ವಿಕ್ರಮ್ ಭಾವೆ ಅವರು ಆಪಾದಿತ ಕೊಲೆಗಾರರಿಗೆ ದಾರಿ ತೋರಿಸುವ ಆರೋಪವನ್ನು ಸಹ ನ್ಯಾಯಾಲಯವು ತಿರಸ್ಕರಿಸಿತು. ಸಂಜೀವ್ ಪುನಾಳೆಕರ್ ಅವರು ಈ ಪ್ರಕರಣದಲ್ಲಿ ವಕೀಲರಾಗಿ ಕಾರ್ಯನಿರ್ವಹಿಸಿದರು; ಆದರೆ ಅವರಿಗೂ ಶಿಕ್ಷೆಯಾಯಿತು. ಅವರ ವಿರುದ್ಧದ ಆರೋಪಗಳನ್ನು ನ್ಯಾಯಾಲಯ ಒಪ್ಪಿಕೊಳ್ಳಲಿಲ್ಲ, ಇದು ಒಂದು ರೀತಿಯ ಗೆಲುವೇ ಆಗಿದೆ ಎಂದು ನಾನು ನಂಬುತ್ತೇನೆ. ಇದರೊಂದಿಗೆ ಇಬ್ಬರಿಗೆ ಶಿಕ್ಷೆಯಾಗಿರುವುದು ನಮಗೆ ಅತೀವ ದುಃಖ ತಂದಿದೆ. ಈ ಶಿಕ್ಷೆಗೆ ಯಾವುದೇ ಕಾರಣ ಇರಲಿಲ್ಲ; ಏಕೆಂದರೆ ಬುದ್ಧಿಮಾಂದ್ಯದ ಅನಾರೋಗ್ಯ ಪೀಡಿತ ಸಾಕ್ಷಿದಾರನು 9 ವರ್ಷಗಳ ನಂತರ ನ್ಯಾಯಾಲಯದಲ್ಲಿ ಒಬ್ಬನಿಗೆ ಗುರುತಿಸುವುದು ಇದು ಸಂದೇಹಾಸ್ಪದಕ್ಕೆ ಮೀರಿದೆ ಎಂದು ಹೇಳಬಹುದು.

ಸುತ್ತಿಬಳಸಿ ತನ್ನ ಬುಡದಲ್ಲೇ ಬರುವ ಸಿಬಿಐ ತನಿಖೆ !

ಈ ಪ್ರಕರಣದಲ್ಲಿ 3 ಪ್ರಕರಣಗಳು ದಾಖಲಾಗಿತ್ತು. ಮೊದಲು ನಾಗೋರಿ ಮತ್ತು ಖಂಡೇಲ್ವಾಲ್‌ನಿಂದ ಬಂದೂಕುಗಳನ್ನು ತೆಗೆದುಕೊಳ್ಳಲಾಯಿತು, ನಂತರ ಅವುಗಳನ್ನು ಪಕ್ಕಕ್ಕೆ ಇಡಲಾಯಿತು. ಸಾರಂಗ್ ಅಕೋಲ್ಕರ್ ಮತ್ತು ವಿನಯ್ ಪವಾರ್ ಅವರು ಗುಂಡು ಹಾರಿಸಿದ್ದಾರೆ ಎಂದು ಆರೋಪಿಸಿ ಅಕೋಲ್ಕರ್ ಅವರ ಮನೆ ಮೇಲೆ ದಾಳಿ ನಡೆಸಿದರು. ಅವರಿಗೆ 5 ಲಕ್ಷ ರೂಪಾಯಿ ಬಹುಮಾನ ಇಡಲಾಗಿತ್ತು. ಇದೆಲ್ಲವನ್ನೂ ತಕ್ಷಣ ಪಕ್ಕಕ್ಕಿಡಲಾಯಿತು. ತನಿಖೆ ಎಂದಿಗೂ ಹೀಗೆ ಸುತ್ತಿಬಳಸಿ ಬರುವುದಿಲ್ಲ. ತನಿಖೆ ಅಂದರೆ ಮೊದಲ ಅಥವಾ ಎರಡನೆಯ ಆವೃತ್ತಿ ಇರಲ್ಲ, ಇದು ವೆಬ್‌ಸರಣಿಯಲ್ಲ. ಹೀಗಿರುವಾಗ ನಾವು ಸಿಬಿಐನ ಈ ರೀತಿಯ ಕ್ರಮ ತಪ್ಪು ಎನ್ನುತ್ತೇವೆ. 2018 ರಲ್ಲಿ ಸಿಬಿಐ ಮೂರನೇ ಸಿದ್ಧಾಂತವನ್ನು ಮಂಡಿಸಿತು. ಆ ಸಿದ್ಧಾಂತದ ಆಧಾರದ ಮೇಲೆ ಇಂದು ಈ ಶಿಕ್ಷೆಯಾಗಿದೆ. ಹಾಗಾದರೆ ಹಿಂದಿನ ಸಿದ್ಧಾಂತಗಳು ಮತ್ತು ಹಿಂದಿನ ಸಾಕ್ಷಿಗಳ ಆಧಾರದ ಮೇಲೆ ಜನರನ್ನು ತಪ್ಪಾಗಿ ಗುರುತಿಸುವುದು ಭಯಾನಕ ವಿಷಯವಾಗಿದೆ. ಈ ರೀತಿ ತನಿಖೆ ನಡೆಸಬಾರದು. ಇಬ್ಬರು ಸಾಕ್ಷಿಗಳು ‘ಕ್ರಾಸ್ ಎಕ್ಸಾಮಿನೇಷನ್’ ನಲ್ಲಿ ಅಲ್ಲ ‘ಮುಖ್ಯ ಪರೀಕ್ಷೆ’ಯಲ್ಲಿ ವಿಭಿನ್ನವಾಗಿ ಸಾಕ್ಷಿ ಹೇಳಿದರು. ಅಂತಹ ಸಂದರ್ಭಗಳಲ್ಲಿ, ನಾವು ದುಃಖದಿಂದ ಈ ತೀರ್ಪನ್ನು ಸ್ವೀಕರಿಸುತ್ತೇವೆ. ಬಹುಶಃ ಇದರ ವಿರುದ್ಧ ಶೀಘ್ರವೇ ಹೈಕೋರ್ಟ್ ಮೊರೆ ಹೋಗುತ್ತೇವೆ.

ಚಾರ್ಜ್ ಶೀಟ್ ನಮೂದಿಸಿದ ನಂತರವೂ 6 ವರ್ಷಗಳ ಕಾಲ ಸಿಬಿಐ ವಿಚಾರಣೆ ನಡೆಸಲಿಲ್ಲ !

ಭಾರತದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಸಿಬಿಐ ಚಾರ್ಜ್ ಶೀಟ್ ಸಲ್ಲಿಸಿ, ಆರೋಪಿಯನ್ನು ಹಿಡಿದು, ವಿಚಾರಣೆ ನಡೆಸಿ ಎಂದು ಆರೋಪಿಗಳ ಪರ ವಕೀಲರು ಹೇಳಿದ್ದಾರೆ. ಆಗ ಸಿಬಿಐ ಈ ಪ್ರಕರಣವನ್ನು ವಿಚಾರಣೆಗೆ ಒಳಪಡಿಸಲು ಬಯಸುವುದಿಲ್ಲ ಎಂದು ಹೇಳಿದೆ. ಹಾಗಾಗಿ ಹೈಕೋರ್ಟ್‌ನಲ್ಲಿ ತಡೆ ತೆಗೆದುಕೊಂಡರು. 2016 ರಿಂದ 2021 ರವರೆಗೆ ಯಾವುದೇ ಮೊಕದ್ದಮೆ ನಡೆಯಲಿಲ್ಲ. 2021 ರ ನಂತರ, ವಿಚಾರಣೆ ಪ್ರಾರಂಭವಾಯಿತು. ಜೂನ್ 10, 2016 ರಂದು ಡಾ. ವೀರೇಂದ್ರ ಸಿಂಗ್ ತಾವಡೆ ಇವರನ್ನು ಬಂಧಿಸಲಾಯಿತು. ಇಂದು ಮೇ 10, 2024 ರಂದು ಅವರನ್ನು ಖುಲಾಸೆಗೊಳಿಸಲಾಯಿತು. ಇಷ್ಟು ವರ್ಷ ಜೈಲಿನಲ್ಲಿ ಕಳೆದರು. ‘ಅವರ ನಷ್ಟಪರಿಹಾರ ಯಾರು ಕೊಡುವರು ?’ ಎಂಬುದನ್ನೂ ಸಮಾಜವೂ ವಿಚಾರಿಸಬೇಕು.

ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದು, ಇದು ಮುಂದಿನ ನಿಲುವು !

ಈ ಪ್ರಕರಣದಲ್ಲಿ ಇನ್ನೂ ಒಂದು ‘ತಿರುವು’ ಬರಬೇಕಿದೆ; ಏಕೆಂದರೆ ಮೂವರು ಮಾತ್ರ ಖುಲಾಸೆಗೊಂಡಿದ್ದಾರೆ. ಹಾಗಾಗಿ ಹೋರಾಟ ಇನ್ನೂ ಮುಗಿದಿಲ್ಲ. ಬಹಃಶ ಇದು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ತಿರುವು ತೆಗೆದುಕೊಳ್ಳಬಹುದು, ಆದರೂ 3 ಮಂದಿ ಖುಲಾಸೆಗೊಂಡಿರುವುದು ಸಣ್ಣ ವಿಷಯವಲ್ಲ. ನ್ಯಾಯಾಲಯದ ತೀರ್ಪನ್ನು ಅಧ್ಯಯನ ಮಾಡುವುದು ಮತ್ತು ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದು ನಮ್ಮ ಮುಂದಿನ ನಿಲುವಾಗಿದೆ !

ತಪ್ಪಿತಸ್ಥ ಆರೋಪಿಗಳ ತೀರ್ಪಿನ ವಿರುದ್ಧ ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ! – ವಕೀಲ ಪ್ರಕಾಶ ಸಾಳಸಿಂಗೀಕರ

ವಕೀಲ ಪ್ರಕಾಶ ಸಾಳಸಿಂಗೀಕರ

20 ಆಗಸ್ಟ್ 2013 ರಂದು ದಾಭೋಲಕರ ಇವರ ಹತ್ಯೆ ಮಾಡಲಾಗಿತ್ತು. ಅಂದಿನಿಂದ, ಕೆಲವು ಪ್ರಸಾರ ಮಾಧ್ಯಮಗಳು ಮತ್ತು ರಾಜಕೀಯ ಮುಖಂಡರು ತಕ್ಷಣವೇ ತೀರ್ಪು ನೀಡಿದರು. ಇದರಿಂದ, ತನಿಖಾಧಿಕಾರಿ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸಲು ಸಾಧ್ಯವಾಗಲಿಲ್ಲ. ಇಂದು ಶರದ ಕಳಸಕರ ಮತ್ತು ಸಚಿನ ಅಂದುರೆ ಇವರಿಬ್ಬರೂ ತಪ್ಪಿತಸ್ಥರು ಎಂದು ತಿಳಿಯಲಾಗಿದ್ದರೂ, ತೀರ್ಪಿನ ಪೂರ್ಣ ಪ್ರತಿ ಬಂದ ಬಳಿಕ ನಾವು ಇದರ ವಿರುದ್ಧ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವವರಿದ್ದೇವೆ.

ಈ ಪ್ರಕರಣದಲ್ಲಿ `ಟ್ರಾಯಲ’ ನಡೆಯಲು ಬಿಡಲಿಲ್ಲ. ಅಂದರೆ ಯಾರೂ ಆಗಲು ಬಿಡಲಿಲ್ಲ. ಈ `ರೋಜನಾಮಾ’ ಸಂಕೇತಸ್ಥಳ ನೋಡಿದರೆ, ಗಮನಕ್ಕೆ ಬರುವುದು. `ಸ್ಟೇ’ ಇಲ್ಲದಿರುವಾಗಲೂ ಅನೇಕ ವರ್ಷಗಳ ವರೆಗೆ ಈ ಪ್ರಕರಣ ಸ್ಥಗಿತಗೊಳಿಸಲಾಗಿತ್ತು. ಆರೋಪಿಗಳು ಯಾವಾಗಲೂ ಹೇಳುತ್ತಿದ್ದರು, ನಮ್ಮ ಪ್ರಕರಣ ನಡೆಯಬೇಕು. ಇತ್ತೀಚೆಗೆ 2 ತಿಂಗಳ ಮೊದಲೂ ಸರ್ವೋಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿತ್ತು. ಪ್ರಕರಣ ಮುಗಿಸಬಾರದು. ಉಚ್ಚ ನ್ಯಾಯಾಲಯದಿಂದಲೂ `ಮಾನಿಟರಿಂಗ’ ಸ್ಥಗಿತಗೊಳಿಸಲಾಗಿತ್ತು. ಆದರೆ ಪುನಃ ಅದನ್ನು ಪ್ರಶ್ನಿಸಲಾಗಿತ್ತು. `ಪ್ರಕರಣ `ಮುಗಿಯಬೇಕು’ ಎಂದು ಯಾರ ಇಚ್ಛೆಯೂ ಇರಲಿಲ್ಲ. ಸಾವಿರಾರು ಪುಟಗಳ ಚಾರ್ಜಶೀಟ ನ್ಯಾಯಾಲಯದಲ್ಲಿ ತರಲಾಯಿತು. ಆದರೆ ಅದರಲ್ಲಿರುವ ಅಂಶಗಳು ಆರೋಪಿಯ ವಿರುದ್ಧವಿರಲಿಲ್ಲ.ಇದರ ಮಾಹಿತಿಯಿರುವುದರಿಂದ ಪ್ರಕರಣ ಮುಗಿಸದೇ ಇರುವುದೇ ಒಂದು ಪರ್ಯಾಯವಾಗಿತ್ತು. ಇಂದು ನ್ಯಾಯಾಲಯವು 3 ಆರೋಪಿಗಳನ್ನು ನಿರ್ದೋಷಿಗಳೆಂದು ಖುಲಾಸೆಗೊಳಿಸಿದೆ.. ಇನ್ನಿಬ್ಬರು ಉಚ್ಚನ್ಯಾಯಾಲಯದಲ್ಲಿ ನಿರ್ದೋಷಿಗಳೆಂದು ಖುಲಾಸೆಗೊಳ್ಳುವರು’ ಎಂದು ನಮಗೆ ವಿಶ್ವಾಸವಿದೆ.

ಈ ಪ್ರಕರಣದಲ್ಲಿ ಆರೋಪಿಗಳ ಪರ ವಾದಿಸುತ್ತಿದ್ದ ನ್ಯಾಯವಾದಿಗಳನ್ನೇ (ನ್ಯಾಯವಾದಿ ಸಂಜೀವ ಪುನಾಳೇಕರ) ಆರೋಪಿಯನ್ನಾಗಿ ಮಾಡಿದರು. ಯಾವುದೇ ಪುರಾವೆ ಇಲ್ಲದಿರುವಾಗಲೂ ಅವರನ್ನು ಆರೋಪಿ ಮಾಡಲಾಯಿತು. ಯಾವುದೇ ಕಾರಣವಿಲ್ಲದೇ 42-43 ದಿನಗಳವರೆಗೆ ಅವರನ್ನು ಜೈಲಿನಲ್ಲಿ ಇರಬೇಕಾಯಿತು. ಅವರು ಅನೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ದಾಖಲಿಸಿದ್ದಾರೆ. ಅನೇಕ ಬಡವರಿಗೆ ಒಳ್ಳೆಯದಾಗಬೇಕು ಎಂದು ಸರಕಾರಿ ಅಥವಾ ಖಾಸಗಿ ದವಾಖಾನೆಗಳಲ್ಲಿ ಶೇ.10 ರಷ್ಟು ಮಂಚಗಳನ್ನು ಬಡವರಿಗಾಗಿ ಕಾಯ್ದಿರಿಸುವ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇಂತಹ ನ್ಯಾಯವಾದಿ ಸಂಜೀವ ಪುನಾಳೆಕರ ಇವರನ್ನು ಈ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗಿರುವುದು ವಿಷಾದನೀಯ. ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲದಿದ್ದರೂ, ಅವರಿಗೆ ಇಷ್ಟು ವರ್ಷಗಳ ಕಾಲ ತೊಂದರೆಯನ್ನು ಸಹಿಸಬೇಕಾಯಿತು. ನರಳಬೇಕಾಯಿತು. UAPA (ಕಾನೂನುಬಾಹಿರ ಕ್ರಮಗಳು (ನಿರ್ಬಂಧಿತ) ಕಾಯಿದೆ) ಅಡಿಯಲ್ಲಿ ‘ಅವರು ಆರೋಪಿಗಳು’,ಎಂದು ಅವರು ಕೇಳಿಸಿಕೊಳ್ಳಬೇಕಾಯಿತು. ಆದರೆ ಪುರಾವೆಗಳ ಕೊರತೆಯಿಂದ ನ್ಯಾಯಾಲಯವು ಅವರನ್ನು ನಿರ್ದೋಷಿಗಳೆಂದು ಬಿಡುಗಡೆ ಮಾಡಿತು.

ಶರದ ಕಳಸಕರ ಮತ್ತು ಸಚಿನ ಅಂದುರೆ ಅವರ ಬಂಧನ ತಪ್ಪು – ನ್ಯಾಯವಾದಿ ಸಂಜೀವ ಪುನಾಳೇಕರ

ನ್ಯಾಯವಾದಿ ಸಂಜೀವ ಪುನಾಳೇಕರ

ಈ ಪ್ರಕರಣದಲ್ಲಿ, ಮೊದಲ ಬಾರಿಗೆ, ಬೇರೆಯೇ ಜನರ ಮೇಲೆ ಹತ್ಯೆ ಮಾಡಿರುವ ಆರೋಪ ಹೊರಿಸಿ ಅವರನ್ನು ಬಂಧಿಸಲಾಯಿತು. ಬಳಿಕ ತನಿಖಾ ದಳ ಸಚಿನ ಅಂದುರೆ ಮತ್ತು ಶರದ ಕಳಸಕರ ಅವರ ಗುರುತಿನ ಪರೇಡ ನಡೆಸಲಿಲ್ಲ. ಮೊದಲ ಬಾರಿಗೆ ಯಾರ ಮೇಲೆ ಕೊಲೆಯ ಆರೋಪ ಹೊರಿಸಲಾಗಿದೆಯೋ, ಅವರ ಛಾಯಾಚಿತ್ರಗಳನ್ನು ಸಾಕ್ಷಿದಾರರು ಗುರುತಿಸಿದರು. ಆದರೆ ಎರಡನೇಯ ಬಾರಿ ಯಾರನ್ನು ಬಂಧಿಸಲಾಯಿತೋ, ಅವರ ಛಾಯಾಚಿತ್ರಗಳನ್ನು ಸಾಕ್ಷಿದಾರರು ಗುರುತಿಸಿದರೇ ? ಹೀಗಿರುವಾಗ ನೈಜ ಕೊಲೆಗಾರರು ಯಾರು ? ಆದ್ದರಿಂದ ಶರದ ಕಳಸಕರ ಮತ್ತು ಸಚಿನ ಅಂದುರೆ ಅವರ ಬಂಧನ ತಪ್ಪಾಗಿದೆ.

ನ್ಯಾಯವಾದಿ ಸಂಜೀವ್ ಪುನಾಲೇಕರ್ ಇವರ ಮೇಲೆ ಆರೋಪ ಮಾಡಿರುವುದರಿಂದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಪರಿಹಾರ ನೀಡಬೇಕು ! – ನ್ಯಾಯವಾದಿ ಸುವರ್ಣ ವತ್ಸ್-ಆವ್ಹಾಡ

ನ್ಯಾಯವಾದಿ ಸಂಜೀವ್ ಪುನಾಳೆಕರ್ ಅವರಂತಹ ಗೌರವಾನ್ವಿತ ನ್ಯಾಯವಾದಿಗೆ ಈ ಪ್ರಕರಣದಲ್ಲಿ ಆರೋಪಿಯಾಗಿ ಮಾಡಿರುವುದು ಭಯಾನಕ ಸಂಗತಿಯಾಗಿದೆ. ಸೇಡಿನ ಮನೋಭಾವದಿಂದ ಅವರ ಮೇಲೆ ಆರೋಪ ಹೊರಿಸಲಾಯಿತು, ಇದು ದೊಡ್ಡ ಅಂಶವಾಗಿದೆ. ಇದರಲ್ಲಿ ಅವರ ಮಾನಹಾನಿ ಆಯಿತು. ಅವರಿಗೆ ನಷ್ಟ ಪರಿಹಾರ ನೀಡಬೇಕು. ಅಂದಿನ ಸಿಬಿಐ ಅಧಿಕಾರಿ ಎಸ್.ಆರ್. ಸಿಂಗ ಇವರು ಇಡೀ ಘಟನೆಯ ಬಗ್ಗೆ ತನಿಖೆ ನಡೆಸಲು ಒಪ್ಪಿಕೊಂಡಿದ್ದಾರೆ. ನ್ಯಾಯವಾದಿ ಪುನಾಳೆಕರ್ ಇವರು ಕಳಸ್ಕರ್ ಅವರು ತಮ್ಮ ಕಚೇರಿಯಲ್ಲಿ ಭೇಟಿಯಾದರು. ಆ ನಿಟ್ಟಿನಲ್ಲಿ ಕಳಸ್ಕರ್ ಅವರ ಮೊಬೈಲ್ ಫೋನ್ ಇರುವ ಸ್ಥಳವನ್ನು ಸಿಬಿಐ ತನ್ನ ತನಿಖೆಯಲ್ಲಿ ಉಲ್ಲೇಖಿಸಿಲ್ಲ. ಲ್ಯಾಪ್‌ಟಾಪ್ ವಶಕ್ಕೆ ಪಡೆಯಲಾಯಿತು; ಆದರೆ ಅವುಗಳನ್ನು ಸೀಲ್ ಮಾಡಿಲ್ಲ. ವಶಪಡಿಸಿಕೊಂಡ ಲ್ಯಾಪ್‌ಟಾಪ್‌ಗಳನ್ನು ನ್ಯಾಯಾಲಯದ ದಾಖಲೆಯಲ್ಲಿ ತೋರಿಸಿಲ್ಲ ಇದೂ ಅವರು ಒಪ್ಪಿಕೊಂಡಿದ್ದಾರೆ. ಲ್ಯಾಪ್‌ಟಾಪ್‌ನಲ್ಲಿ ಕೆಲವು ಪ್ರಮುಖ ಸಾಕ್ಷ್ಯಗಳಿವೆ ಎಂದು ಸಿಬಿಐ ಹೇಳಿಕೊಂಡಿತ್ತು. ಲ್ಯಾಪ್‌ಟಾಪ್‌ನಲ್ಲಿ ಸಾಕ್ಷ್ಯವಿದೆ ಎಂದು ಪ್ರಮಾಣ ವಚನದ ಅಡಿಯಲ್ಲಿ ಹೇಳಿದರು; ಆದರೆ ವಾಸ್ತವದಲ್ಲಿ ಅಂತಹ ಯಾವುದೇ ಪುರಾವೆ ಕಂಡುಬಂದಿಲ್ಲ. ಲ್ಯಾಪ್‌ಟಾಪ್ ಅನ್ನು ಬೆದರಿಕೆ ಪತ್ರ ಎಂದು ವಶಪಡಿಸಿಕೊಳ್ಳಲಾಗಿದೆ, ಆದರೆ ಅದು ನಿಜವಾಗಿಯೂ ಆಮಂತ್ರಣ ಪತ್ರವಾಗಿತ್ತು. ಈ ಎಲ್ಲ ಅಂಶಗಳನ್ನು ನೋಡಿಕೊಂಡು ಮುಂದಿನ ಹೋರಾಟವನ್ನು ನ್ಯಾಯಾಲಯದಲ್ಲಿಯೇ ನೀಡುತ್ತೇವೆ.
ಇಂದಿನ ನಿರ್ಣಯದಿಂದ ಒಂದು ರೀತಿಯಲ್ಲಿ ನ್ಯಾಯ ಸಿಕ್ಕಿದಂತೆ ಆಗಿದೆ. ಇಬ್ಬರಿಗೆ ಶಿಕ್ಷೆಯಾಗಿರುವುದು ನಮಗೆ ಬೇಸರ ತಂದಿದೆ. ಸುಳ್ಳು ಸಾಕ್ಷ್ಯವನ್ನು ಸೃಷ್ಟಿಸಿದರು. ಅವರ ಗುರುತನ್ನು ಪರೇಡ್ ಮಾಡಿಲ್ಲ. ನಾವು ಹೈಕೋರ್ಟ್‌ಗೆ ಹೋಗುತ್ತೇವೆ. ಎಲ್ಲ ಸಾಕ್ಷ್ಯಾಧಾರಗಳನ್ನು ಹಾಜರುಪಡಿಸಿದಾಗ ಇಬ್ಬರೂ ಖುಲಾಸೆಗೊಳ್ಳುವ ವಿಶ್ವಾಸವಿದೆ.