ಪಾಕಿಸ್ತಾನದ ಪ್ರಧಾನಮಂತ್ರಿ ಶಾಹಬಾಜ ಶರೀಫ್ ಅವರ ಹೆಗ್ಗಳಿಕೆ
ಇಸ್ಲಾಮಾಬಾದ್ – ಪಾಕಿಸ್ತಾನವು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಅದು ಭಾರತದ ಅರ್ಥ ವ್ಯವಸ್ಥೆಯನ್ನು ಹಿಂದಿಕ್ಕಬಹುದು, ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಶಾಹಬಾಜ ಶರೀಫ್ ಅವರು ಇತ್ತೀಚಿಗೆ ಹೇಳಿಕೆ ನೀಡಿದರು. ಪಾಕಿಸ್ತಾನವು ಬಡತನದ ವಿರುದ್ಧ ಹೋರಾಡುತ್ತಿದೆ. ಸ್ವತಃ ದಿವಾಳಿಯಿಂದ ಬಚಾವ್ ಆಗಲು ಪಾಕ್ ಅಂತರಾಷ್ಟ್ರೀಯ ಹಣಕಾಸು ನಿಧಿಯನ್ನು (ಐಎಂಎಫ್ ಗೆ ) ಸತತ ಅವಲಂಬಿಸಿದೆ. ಹೀಗಿರುವಾಗ ಪಾಕಿಸ್ತಾನದ ಪ್ರಧಾನಮಂತ್ರಿ ಭಾರತದ ಜೊತೆಗೆ ಸ್ಪರ್ಧೆ ನಡೆಸುವ ಕನಸು ಕಾಣುತ್ತಿದ್ದಾರೆ.
ಶರೀಫ್ ಅವರ ಈ ಹೇಳಿಕೆಯ ನಂತರ ಪಾಕ್ ನಲ್ಲಿ ಅನೇಕ ಪ್ರತಿಕ್ರಿಯೆಗಳು ಹೊರಬಂದಿವೆ. ಪಾಕಿಸ್ತಾನದ ಇನ್ಫಾರ್ಮಶನ್ ಟೆಕ್ನಾಲಜಿ ಯೂನಿವರ್ಸಿಟಿ ಯಲ್ಲಿ ಅಧ್ಯಯನ ಮಾಡುವ ಅಬ್ದುಲ್ಲ ಎಂಬವರು ಮಾತನಾಡಿ, ಭಾರತದ ಜೊತೆಗೆ ಪಾಕಿಸ್ತಾನ ಸ್ಪರ್ಧೆ ಮಾಡಲು ಸಾಧ್ಯವೇ ಇಲ್ಲ. ಭಾರತದ ವಿಕಾಸಕ್ಕಾಗಿ ಅಲ್ಲಿಯ ಪ್ರಜಾಪ್ರಭುತ್ವ ಕಾರಣವಾಗಿದೆ. ಸ್ವಾತಂತ್ರ್ಯದ ನಂತರ ಭಾರತದಲ್ಲಿನ ನಾಯಕರು ಪ್ರಜಾಪ್ರಭುತ್ವವನ್ನು ಅಂಗೀಕರಿಸಿ ದೇಶದ ವಿಕಾಸಕ್ಕಾಗಿ ಕೆಲಸ ಮಾಡಿದ್ದಾರೆ. ಪಾಕಿಸ್ತಾನವು ಚಂದ್ರನ ಮೇಲೆ ತಲುಪುವುದಕ್ಕೆ ಅಭಿಯಾನ ರೂಪಿಸಿದೆ. ಅದಕ್ಕಾಗಿ ಪಾಕ್ ಗೆ ಚೀನಾ ಸಹಾಯ ಮಾಡುತ್ತಿದೆ. ಇನ್ನೊಂದೆಡೆ ಭಾರತವು ಚಂದ್ರನ ದಕ್ಷಿಣ ದ್ರುವದ ಮೇಲೆ ಉಪಗ್ರಹ ಇಳಿಸಿ ಜಗತ್ತಿಗೆ ಅದರ ಕ್ಷಮತೆ ಏನು ಎಂದು ತೋರಿಸಿದೆ. ಈ ಎಲ್ಲಾ ಸೂತ್ರಗಳನ್ನು ನೋಡಿದರೆ ಪಾಕಿಸ್ತಾನವು ವ್ಯರ್ಥ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ತೀಕ್ಷ್ಣವಾಗಿ ಹೇಳಿದರು.
ಸಂಪಾದಕೀಯ ನಿಲುವುಹಗಲುಗನಸು ಕಾಣುವ ಪಾಕಿಸ್ತಾನದ ಈ ಹೇಳಿಕೆಯ ಬಗ್ಗೆ ಯಾರು ವಿಶ್ವಾಸ ಇಡುವರು ? |