Russia Claims US Interference in Indian Elections: ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ಅಸಮತೋಲನಗೊಳಿಸುವುದು ಅಮೇರಿಕಾ ದೇಶದ ಉದ್ದೇಶ!

  • ಅಮೇರಿಕಾ ಮೇಲೆ ರಷ್ಯಾದ ಆರೋಪ!

  • ಗುರುಪತವಂತ ಸಿಂಗ್ ಪನ್ನು ಹತ್ಯೆಯ ಸಂಚಿನಲ್ಲಿ ಭಾರತದ ಕೈವಾಡವಿರುವ ಬಗ್ಗೆ ಅಮೇರಿಕಾ ಬಳಿ ಯಾವುದೇ ಪುರಾವೆಗಳಿಲ್ಲ.

  • ಒಂದು ದೇಶವೆಂದು ಅಮೇರಿಕಾ ಭಾರತವನ್ನು ಗೌರವಿಸುತ್ತಿಲ್ಲ!

ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರ ಮರಿಯಾ ಝಾಖಾರೋವಾ

ಮಾಸ್ಕೋ (ರಷ್ಯಾ) – ಭಾರತದ ಸಾರ್ವತ್ರಿಕ ಚುನಾವಣೆಯನ್ನು ಅಸಮತೋಲನಗೊಳಿಸುವುದೇ ಅಮೇರಿಕಾದ ಉದ್ದೇಶವಾಗಿದೆ ಎಂದು ರಷ್ಯಾ ಅಮೇರಿಕಾ ವಿರುದ್ಧ ಗಂಭೀರ ಆರೋಪ ಮಾಡಿದೆ. ಅಮೇರಿಕಾವನ್ನು ದೂಷಿಸುತ್ತಾ ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಝಾಖಾರೋವಾ ಮಾತನಾಡಿ, ಅಮೇರಿಕಾ ಭಾರತದ ಮೇಲೆ ನಿರಂತರವಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಅದಕ್ಕೆ ಭಾರತದ ರಾಷ್ಟ್ರೀಯ ಮನಃಸ್ಥಿತಿ ಮತ್ತು ಇತಿಹಾಸದ ತಿಳುವಳಿಕೆಯಿಲ್ಲ. ಅದಕ್ಕಾಗಿಯೇ ಅಮೇರಿಕಾ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಆಧಾರ ರಹಿತ ಆರೋಪಗಳನ್ನು ಮಾಡುತ್ತಲೇ ಇರುತ್ತದೆಯೆಂದು ಹೇಳಿದರು

ಝಾಖಾರೋವಾ ತಮ್ಮ ಮಾತನ್ನು ಮುಂದುವರೆಸಿ,

1. ಅಮೇರಿಕಾ ಖಲಿಸ್ತಾನಿ ಭಯೋತ್ಪಾದಕ ಗುರುಪತ್‌ವಂತ್ ಸಿಂಗ್ ಪನ್ನು ಹತ್ಯೆ ಕಥಿತ ಸಂಚಿನಲ್ಲಿ ಭಾರತದ ಕೈವಾಡವಿದೆ ಎಂದು ಆಧಾರ ರಹಿತ ಆರೋಪ ಮಾಡುತ್ತಿದೆ. ಪನ್ನು ಹೆಸರಿನ ವ್ಯಕ್ತಿಯ ಹತ್ಯೆಯಲ್ಲಿ ಭಾರತೀಯ ನಾಗರಿಕರ ಸಹಭಾಗವಿರುವ ವಿಷಯದಲ್ಲಿ ಯಾವುದೇ ವಿಶ್ವಾಸಾರ್ಹ ಮಾಹಿತಿ ಅಥವಾ ಪುರಾವೆಗಳನ್ನು ಪ್ರಸ್ತುತಪಡಿಸಲಾಗಿಲ್ಲ. ಪುರಾವೆಗಳ ಕೊರತೆಯಿಂದ ಈ ವಿಷಯದ ಮೇಲಿನ (ಭಾರತ ವಿರೋಧಿ) ಹೇಳಿಕೆಗಳು ಅಸ್ವೀಕಾರಾರ್ಹವಾಗಿದೆ !

2. ವಾಷಿಂಗ್ಟನ್‌ನ ಕ್ರಮವು ಭಾರತದ ಆಂತರಿಕ ವಿಷಯದಲ್ಲಿ ಮೂಗು ತೂರಿಸುವುದಾಗಿದೆ. ಒಂದು ದೇಶವೆಂದು ಅಮೇರಿಕಾ ಭಾರತವನ್ನು ಗೌರವಿಸುತ್ತಿಲ್ಲ.

3. ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ವ್ಯವಹಾರಗಳಲ್ಲಿ, ವಾಷಿಂಗ್ಟನ್‌ಗಿಂತ ಹೆಚ್ಚು ಶಕ್ತಿಶಾಲಿ ಸರ್ವಾಧಿಕಾರಿಯನ್ನು ಕಲ್ಪಿಸಿಕೊಳ್ಳುವುದೂ ಕಷ್ಟವಾಗಿದೆ.