ಭಾರತೀಯ ಯುವಕರನ್ನು ವಂಚಿಸಿ ರಷ್ಯಾ ಪರ ಯುದ್ಧ ಮಾಡಿಸಿದ ಪ್ರಕರಣ; ಇನ್ನೂ ಇಬ್ಬರ ಬಂಧನ !

ದೇಶದ ೭ ನಗರಗಳಲ್ಲಿನ ೧೦ ಸ್ಥಳಗಳಲ್ಲಿ ಕೇಂದ್ರ ತನಿಖಾ ದಳದಿಂದ ದಾಳಿ

ನವದೆಹಲಿ – ವಿದೇಶದಲ್ಲಿ ಉದ್ಯೋಗ ಕೊಡಿಸುವ ಹೆಸರಿನಲ್ಲಿ ಕೆಲವು ಯುವಕರನ್ನು ವಂಚಿಸಿ ಅವರನ್ನು ರಷ್ಯಾಗೆ ಕರೆದುಕೊಂಡು ಹೋಗಿ ಉಕ್ರೇನ್ ನ ವಿರುದ್ಧದ ಯುದ್ಧದಲ್ಲಿ ಸಹಭಾಗಿ ಆಗುವುದಕ್ಕೆ ಅನಿವಾರ್ಯಗೊಳಿಸಲಾಗಿದೆ ಎಂಬುದನ್ನು ಮಾರ್ಚನಲ್ಲಿ ಕೇಂದ್ರ ತನಿಖಾ ದಳ ಬಹಿರಂಗಪಡಿಸಿತ್ತು. ಈ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿತ್ತು. ಇದೀಗ ಅರುಣ್ ಮತ್ತು ಯೇಸುದಾಸ ಎಂಬವರನ್ನು ಬಂಧಿಸಲಾಗಿದೆ. ಈ ಇಬ್ಬರೂ ಕೂಡ ಕೇರಳದ ತಿರುವನಂತಪುರಂ ನ ನಿವಾಸಿಗಳಾಗಿದ್ದಾರೆ.

ವಂಚನೆ ಹೇಗೆ ಮಾಡಲಾಗುತ್ತಿತ್ತು !

ಕಳೆದ ತಿಂಗಳು ಕೇಂದ್ರ ತನಿಖಾ ದಳವು ಮುಂಬಯಿಯ ನಿಖಿಲ್ ಜಾಬಿ ಬೇಸನ್ ಅಂಥನಿ ಮೈಕಲ್ ಎಂಬವನನ್ನು ಬಂಧಿಸಿತ್ತು . ಮೈಕಲ್ ರಷ್ಯಾದಲ್ಲಿ ಟ್ರಾನ್ಸ್ಲೇಟರ್ ಕೆಲಸ ಮಾಡುತ್ತಿದ್ದನು ಮತ್ತು ಭಾರತೀಯರನ್ನು ರಷ್ಯಾಗೆ ಕಳುಹಿಸುವ ತಂಡದಲ್ಲಿನ ಓರ್ವ ಪ್ರಮುಖ ಸದಸ್ಯನಾಗಿದ್ದನು. ಮೈಕಲ್ ದುಬೈಯಲ್ಲಿ ಕಾರ್ಯನಿರತವಾಗಿರುವ ಫೈಸಲ್ ಬಾಬಾಗೆ ಸಹಾಯ ಮಾಡುತ್ತಿದ್ದನು. ಚೆನ್ನೈನಲ್ಲಿ ನ ಜನರ ವೀಸಾ ಗೆ ಸಂಬಂಧಿಸಿದ ಕೆಲಸ ಮತ್ತು ವಿಮಾನಗಳ ಟಿಕೆಟ್ ತೆಗೆಸುವ ಕೆಲಸ ಕೂಡ ಇವನೇ ಮಾಡುತ್ತಿದ್ದನು. ಈಗ ಬಂಧಿಸಿರುವ ಅರುಣ್ ಮತ್ತು ಯೇಸುದಾಸ್ ಕೇರಳ ಮತ್ತು ತಮಿಳುನಾಡಿನಲ್ಲಿನ ವಿದ್ಯಾರ್ಥಿಗಳನ್ನು ರಷಿಯನ್ ಸೈನ್ಯದಲ್ಲಿ ಭರ್ತಿ ಮಾಡುವ ಕೆಲಸ ಮಾಡುತ್ತಿದ್ದರು.

ಖಾಸಗಿ ವೀಸಾ ಕಂಪನಿಯ ಬೇರೆ ಬೇರೆ ವಿಡಿಯೋ ಪ್ರಸಾರಗೊಳಿಸಿ ಈ ಯುವಕರನ್ನು ಸಂಪರ್ಕಿಸುತ್ತಿದ್ದನು ಮತ್ತು ಅವರಿಗೆ ವಿದೇಶದಲ್ಲಿ ಬೇರೆ ಬೇರೆ ರೀತಿಯ ಉದ್ಯೋಗಗಳಿವೆ ಎಂದು ಹೇಳಿ ನಂಬಿಸುತ್ತಿದ್ದನು. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಕೇಂದ್ರ ತನಿಖಾ ತಂಡದಿಂದ ದೆಹಲಿ, ಅಂಬಾಲಾ, ಚಂಡಿಗಡ್, ಮುಂಬಯಿ, ಚೆನ್ನೈ, ಮಧುರೈ ಮತ್ತು ತಿರುವನಂತಪುರಂ ಈ ೭ ನಗರದಲ್ಲಿನ ೧೦ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.