‘ಭಾರತದ ಪೂರ್ವ ಭಾಗದ ಜನರು ಚೀನಿಗಳಂತೆ ಹಾಗೂ ದಕ್ಷಿಣದ ಜನರು ಆಫ್ರಿಕನರಂತೆ ಕಾಣುತ್ತಾರೆ’ ! – ಸ್ಯಾಮ್ ಪಿಟ್ರೋಡ

ಇಂಡಿಯನ್ ಓವರ್ಸೀಜ್ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿಟ್ರೋಡ ಅವರಿಂದ ಭಾರತದ ಕುರಿತು ವರ್ಣದ್ವೇಷಿ ಹೇಳಿಕೆ !

ನವದೆಹಲಿ – ಇಂಡಿಯನ್ ಓವರ್ಸೀಜ್ ಕಾಂಗ್ರೆಸ್ಸಿನ ಅಧ್ಯಕ್ಷ ಸ್ಯಾಮ್ ಪಿಟ್ರೋಡ ಅವರು ಪರಂಪರೆಯ ಕುರಿತು ನೀಡಿರುವ ವಿವಾದಿತ ಹೇಳಿಕೆಯ ನಂತರ ಭಾರತದ ವಿವಿಧತೆಯ ಬಗ್ಗೆ ಅವಮಾನಕಾರಿ ಹೇಳಿಕೆ ನೀಡಿದ್ದಾರೆ. ಪಿಟ್ರೋಡ ಅವರು, ಭಾರತದ ಪೂರ್ವ ಭಾಗದ ಜನರು ಚೀನಿಗಳ ಹಾಗೆ ಕಾಣುತ್ತಾರೆ ಮತ್ತು ದಕ್ಷಿಣ ಭಾಗದ ಜನರು ಆಫ್ರಿಕನರ ಹಾಗೆ ಕಾಣುತ್ತಾರೆ ಎಂದು ಹೇಳಿದ್ದಾರೆ. ಪಿಟ್ರೋಡ ಅವರು ‘ದ ಸ್ಟೇಟ್ಸ್ ಮ್ಯಾನ್” ಇಂಗ್ಲೀಷ್ ಸಮಾಚಾರ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಭಾರತದ ವಿವಿಧತೆಯ ಬಗ್ಗೆ ಮಾತನಾಡುವಾಗ ಈ ಹೇಳಿಕೆ ನೀಡಿದ್ದಾರೆ. ಪ್ರತಿಯೊಬ್ಬರೂ ಭಾರತದಲ್ಲಿ ಅಲ್ಪಸ್ವಲ್ಪ ಹೊಂದಾಣಿಕೆಗಳನ್ನು ಮಾಡಿಕೊಳ್ಳುತ್ತಾರೆ. ಪಿಟ್ರೋಡ ಅವರು ಈ ಹಿಂದೆ ಕೂಡ ಇದೇ ರೀತಿಯ ಅನೇಕ ವಿವಾದಿತ ಹೇಳಿಕೆಗಳನ್ನು ನೀಡಿದ್ದರು .

ಪಿಟ್ರೋಡ ಅವರು ಮಾಡಿರುವ ಹೋಲಿಕೆ ತಪ್ಪಾಗಿದ್ದು ಸ್ವೀಕಾರಾರ್ಹವಲ್ಲ ! – ಕಾಂಗ್ರೆಸ್

ಸ್ಯಾಮ್ ಪಿಟ್ರೋಡ ಅವರ ಹೇಳಿಕೆ ಪ್ರಸಾರವಾದ ನಂತರ ಕೆಲವೇ ಸಮಯದಲ್ಲಿ ಕಾಂಗ್ರೆಸ್ ಅದರಿಂದ ಅಂತರ ಕಾಯ್ದುಕೊಂಡಿದೆ. ಪಿಟ್ರೋಡ ಅವರು ಭಾರತದ ವಿವಿಧತೆಯ ಬಗ್ಗೆ ನೀಡಿರುವ ಹೇಳಿಕೆ ಮಾನ್ಯವಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಕಾಂಗ್ರೆಸ್ಸಿನ ನಾಯಕ ಜಯರಾಮ್ ರಮೇಶ್ ಅವರು, ಭಾರತೀಯ ಜನರ ಬಗ್ಗೆ ಸ್ಯಾಮ್ ಪಿಟ್ರೋಡ ಅವರು ಮಾಡಿರುವ ಹೋಲಿಕೆ ತಪ್ಪಾಗಿದೆ ಮತ್ತು ಸ್ವೀಕಾರಾರ್ಹವಲ್ಲ ಎಂದರು. (ಇಷ್ಟು ಹೇಳಿ ಕಾಂಗ್ರೆಸ್ಸಿನ ನಾಯಕರು ಸುಮ್ಮನಾಗುವುದು ಸರಿಯಲ್ಲ. ಇಂತಹವರ ವಿರುದ್ಧ ಪಕ್ಷ ಏನು ಕ್ರಮ ಕೈಗೊಳ್ಳುವುದು ? – ಸಂಪಾದಕರು)

ಭಾರತೀಯರ ತುಲನೆ ಚೀನಾ ಆಫ್ರಿಕನರ ಜೊತೆಗೆ ಮಾಡುವುದು ಅಸಮಾಧಾನಕಾರಕ ! – ನರೇಂದ್ರ ಮೋದಿ

ಸ್ಯಾಮ್ ಪಿಟ್ರೋಡ ಅವರ ಈ ಹೇಳಿಕೆ ಬಹಿರಂಗವಾದಾಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತೆಲಂಗಾಣದಲ್ಲಿನ ವರಂಗಲ್ ನಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಪಿಟ್ರೋಡ ಅವರು ಭಾರತೀಯರ ತುಲನೆ ಚೀನಾ ಆಫ್ರಿಕನರ ಜೊತೆಗೆ ಮಾಡಿರುವುದರಿಂದ ಅವರು ಆಕ್ರೋಶಗೊಂಡರು. ರಾಜಕುಮಾರನ ತತ್ವಜ್ಞಾನಿ(ರಾಹುಲ್ ಗಾಂಧಿ ಅವರ ಮಾರ್ಗದರ್ಶಕವಾಗಿರುವ ಸ್ಯಾಮ್ ಪಿಟ್ರೋಡ) ವರ್ಣಗಳ ಆಧಾರದಲ್ಲಿ ದೇಶವಾಸಿಯರ ಅವಮಾನ ಮಾಡಿದ್ದಾರೆ. ರಾಜಕುಮಾರರು ಇದಕ್ಕೆ ಉತ್ತರ ನೀಡಬೇಕಾಗುವುದು ಎಂದು ಮೋದಿ ಹೇಳಿದರು.

ನನ್ನ ದೇಶದಲ್ಲಿನ ಜನರ ಗುಣವನ್ನು ಅವರ ಚರ್ಮದ ಬಣ್ಣದಿಂದ ನಿಶ್ಚಯಿಸಲು ಸಾಧ್ಯವೇ? ಜನರ ಚರ್ಮದ ಬಣ್ಣದ ವಿಷಯ ಹಿಡಿದು ಆಟ ಆಡುವ ಅಧಿಕಾರ ಇವರಿಗೆ ನೀಡಿದವರು ಯಾರು? ಸಂವಿಧಾನವನ್ನೇ ತಲೆಯ ಮೇಲೆ ಹೊತ್ತು ಕುಣಿಯುವ ಇಂತಹ ಜನರು ನನ್ನ ದೇಶದ ಅವಮಾನ ಮಾಡುತ್ತಿದ್ದಾರೆ ಎಂದು ಪ್ರಧಾನಿ ಕಿಡಿ ಕಾರಿದರು.

ಸಂಪಾದಕೀಯ ನಿಲುವು

ಕಾಂಗ್ರೆಸ್ಸಿನ ನೀತಿ ಮತ್ತು ದಿಶೆಯನ್ನು ನಿಶ್ಚಯಿಸುವ ಸಮಿತಿಯಲ್ಲಿ ಸ್ಯಾಮ್ ಪಿಟ್ರೋಡ ಅವರೂ ಒಬ್ಬರು. ಇಂತಹವರ ಮಾನಸಿಕತೆ ವರ್ಣದ್ವೇಷಿ ಮತ್ತು ಸಂಕುಚಿತವಾಗಿದ್ದರೆ ಇನ್ನು ಉಳಿದವರ ಕುರಿತು ಯೋಚಿಸದೆ ಇರುವುದೇ ಒಳ್ಳೆಯದು.