|
ಸುಳ್ಯ – ಇಲ್ಲಿನ ಒಂದು ಏರ್ಟೆಲ್ ಶೋರೂಮ್ ನಲ್ಲಿ ಓರ್ವ ಹಿಂದೂ ಯುವತಿ ಆಕೆಯ ಮೊಬೈಲ್ ರೀಚಾರ್ಜ್ ಮಾಡಿಸುವುದಕ್ಕಾಗಿ ಹೋಗಿದ್ದಳು. ಆ ಸಮಯದಲ್ಲಿ ಅಲ್ಲಿಯ ಕಾಮುಕ ಮುಸಲ್ಮಾನನು ಆಕೆಯ ಛಾಯಾಚಿತ್ರಗಳನ್ನು ಸೆರೆ ಹಿಡಿದನು. ಅದಕ್ಕೆ ಯುವತಿಯು ತೀವ್ರ ಆಕ್ಷೇಪ ವ್ಯಕ್ತಪಡಿಸಿದಳು. ಇದರ ವಿರುದ್ಧ ಆಕೆಯ ಕುಟುಂಬದವರು ಆ ವ್ಯಕ್ತಿಯನ್ನು ಬಂಧಿಸುವಂತೆ ಪೊಲೀಸರಿಗೆ ದೂರು ನೀಡಿದರು.
೧. ಈ ಘಟನೆ ಸುಳ್ಯದ ಗಾಂಧಿನಗರದ್ದಾಗಿದೆ. ಕಾಮುಕ ಮುಸಲ್ಮಾನನು ಛಾಯಾಚಿತ್ರಗಳನ್ನು ಸೆರೆ ಹಿಡಿದಿದ್ದಕ್ಕೆ ಯುವತಿಯು ಆಕ್ಷೇಪ ವ್ಯಕ್ತಪಡಿಸುತ್ತಾ ಅವನಿಂದ ಮೊಬೈಲ್ ಕಸಿದುಕೊಂಡು ಎಲ್ಲಾ ಛಾಯಾಚಿತ್ರಗಳನ್ನು ಡಿಲೀಟ್ ಮಾಡಿದಳು.
೨. ಮನೆಯಲ್ಲಿ ಈ ಪ್ರಕರಣದ ಮಾಹಿತಿ ನೀಡಿದ ನಂತರ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು ಮತ್ತು ಯುವಕನನ್ನು ವಶಕ್ಕೆ ಪಡೆದು ಅವನ ವಿಚಾರಣೆ ನಡೆಸಲು ಅವರಿಗೆ ಒತ್ತಾಯಿಸಿದರು.
೩. ಘಟನೆಯ ಮಾಹಿತಿ ದೊರೆಯುತ್ತಲೆ ಹಿಂದೂ ಸಂಘಟನೆಯ ಕಾರ್ಯಕರ್ತರು ಪೊಲೀಸ್ ಠಾಣೆಯಲ್ಲಿ ಸೇರಿದರು. ಅವರೂ ಕೂಡ ಈ ಪ್ರಕರಣದ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲು ಆಗ್ರಹಿಸಿದರು .
ಸಂಪಾದಕೀಯ ನಿಲುವುಇಂತಹ ಕಾಮುಕರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ! |