Delhi Adulterated Spices : ದೆಹಲಿಯಲ್ಲಿ ನಕಲಿ ಭಾರತೀಯ ಮಸಾಲೆ ಪದಾರ್ಥ ತಯಾರಿಸುವ ಸಂಸ್ಥೆಗಳ ಮೇಲೆ ಪೊಲೀಸರ ದಾಳಿ !

15 ಟನ್ ಕಲಬೆರಕೆ ಮಸಾಲೆ ಪದಾರ್ಥಗಳ ಜಪ್ತಿ

ನವ ದೆಹಲಿ – ದೆಹಲಿ ಪೊಲೀಸರು ನಗರದ ಕರಾವಲ ನಗರದಲ್ಲಿ ನಕಲಿ ಮಸಾಲೆ ಪದಾರ್ಥ ಉತ್ಪಾದಿಸುವ ಸಂಸ್ಥೆಗಳ ಮೇಲೆ ದಾಳಿ ನಡೆಸಿದರು. ಆ ಸಮಯದಲ್ಲಿ ಮಸಾಲೆ ಉತ್ಪಾದಿಸುವ 2 ಉತ್ಪಾದಕರು ಮತ್ತು 1 ಮಸಾಲೆ ಸರಬರಾಜುದಾರರನ್ನು ಬಂಧಿಸಲಾಯಿತು. ಈ ದಾಳಿಯಲ್ಲಿ 15 ಕ್ವಿಂಟಲಗಳಷ್ಟು ಕಲಬೆರಕೆಯುಕ್ತ ಭಾರತೀಯ ಮಸಾಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

1. ದೆಹಲಿ ಪೊಲೀಸರ ಅಪರಾಧ ವಿಭಾಗದ ಸೈಬರ್ ಸೆಲ್ ಈಶಾನ್ಯ ದೆಹಲಿಯ ಕೆಲವು ಉತ್ಪಾದಕರು ಕಲಬೆರಕೆ ಭಾರತೀಯ ಮಸಾಲೆಗಳ ಉತ್ಪಾದನೆ ಮತ್ತು ಮಾರಾಟ ಮಾಡುತ್ತಿರುವ ಮಾಹಿತಿ ಸಿಕ್ಕಿತ್ತು.

2. ಪೋಲೀಸ್ ದಳವು ನಕಲಿ ಭಾರತೀಯ ಮಸಾಲೆ ಉತ್ಪಾದನೆ ಮಾಡುತ್ತಿದ್ದ ಎರಡು ಸಂಸ್ಥೆಗಳ ಮೇಲೆ ದಾಳಿ ನಡೆಸಿತು. ಮೊದಲ ದಾಳಿಯಲ್ಲಿ ಆರೋಪಿಗಳಾದ ದಿಲೀಪ ಸಿಂಗ ಮತ್ತು ಖುರ್ಷಿದ ಮಲಿಕ ಅವರನ್ನು ಬಂಧಿಸಲಾಗಿದೆ.

3. ಈ ದಾಳಿಯಲ್ಲಿ ಕಲಬೆರಕೆ ಅರಿಶಿನ ಪುಡಿ, ಗರಂ ಮಸಾಲಾ ಪುಡಿ, ಆಮಚುರ ಪುಡಿ ಸೇರಿದಂತೆ ಇತರೆ ಕಚ್ಚಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

4. ಕರಾವಲನಗರದಲ್ಲಿ ಮತ್ತೊಂದು ಸಂಸ್ಥೆಯ ಮೇಲೆ ದಾಳಿ ನಡೆಸಿದಾಗ, ಸರ್ಫರಾಜನನ್ನು ಬಂಧಿಸಲಾಗಿದ್ದು, ಆತ ಕಲಬೆರಕೆಯುಕ್ತ ಮಸಾಲೆಯ ಉತ್ಪಾದನೆಯಲ್ಲಿ ಸಹಭಾಗಿಯಾಗಿದ್ದ. (ಯಾವಾಗಲೂ ಅಲ್ಪಸಂಖ್ಯಾತ ಮುಸ್ಲಿಮರು ಅಪರಾಧಗಳಲ್ಲಿ ಮಾತ್ರ ಬಹುಸಂಖ್ಯಾತರಿರುತ್ತಾರೆ, ಇದನ್ನು ನೆನಪಿನಲ್ಲಿಡಬೇಕು ! – ಸಂಪಾದಕರು)

ಸಂಪಾದಕೀಯ ನಿಲುವು

ಇಷ್ಟು ದೊಡ್ಡ ಪ್ರಮಾಣದಲ್ಲಿ ಕಲಬೆರಕೆ ಮಸಾಲೆ ಪದಾರ್ಥಗಳನ್ನು ತಯಾರಿಸಲಾಗುತ್ತಿರುವಾಗ ಆಹಾರ ಮತ್ತು ಔಷಧ ಇಲಾಖೆ ನಿದ್ದೆ ಮಾಡುತ್ತಿತ್ತೇ ?