|
ಗೋರಖಪುರ (ಉತ್ತರಪ್ರದೇಶ) – ಆಝಮಗಡ ಜಿಲ್ಲೆಯಲ್ಲಿನ ನಿವಾಸಿ ೨೦ ವರ್ಷದ ಯುವತಿಯ ಮೇಲೆ ಸಾಮೂಹಿಕ ಬಲಾತ್ಕಾರ ಆಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಸಹಜನವಾ ಪೊಲೀಸ ಠಾಣೆ ಮತ್ತು ಅಪರಾಧಿ ಶಾಖೆಯ ತಂಡದಿಂದ ಸಂತ ಕಬೀರ ನಗರ ಜಿಲ್ಲೆಯಲ್ಲಿನ ನಿವಾಸಿ ತಾಹಿರ್ ಅಲಿ ಇವನನ್ನು ಬಂಧಿಸಿದ್ದಾರೆ. ಬಲಗಾಲಿಗೆ ಗುಂಡು ತಾಗಿರುವುದರಿಂದ ಸ್ಥಳಿಯ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಪೊಲೀಸ ಅಧಿಕಾರಿ ಜಿತೇಂದ್ರ ಕುಮಾರ ಶ್ರೀವಾಸ್ತವ ಇವರು, ಆಝಮಗಡದಲ್ಲಿನ ಜೆಯಾನಪುರ ಪ್ರದೇಶದಲ್ಲಿ ವಾಸಿಸುವ ಸಂತ್ರಸ್ತೆ ಮೇ ೨ ರಂದು ಬೆಳಿಗ್ಗೆ ಸಿಟ್ಟಲ್ಲಿ ಮನೆಯಿಂದ ಹೊರಗೆ ಹೋಗಿದ್ದಳು. ದಾರಿಯಲ್ಲಿ ಹುಡುಗಿಗೆ ತಾಹಿರ್ ಅಲಿ ಭೇಟಿಯಾದನು. ಉದ್ಯೋಗ ಕೊಡಿಸುವ ನೆಪದಲ್ಲಿ ತಾಹಿರನು ಹುಡುಗಿಯನ್ನು ಬಸ್ಸಿನಲ್ಲಿ ಗೋರಖಪುರಗೆ ಕರೆದುಕೊಂಡು ಬಂದನು. ರಾತ್ರಿಯ ಸಮಯದಲ್ಲಿ ಆಕೆಗೆ ಮಾದಕ ಔಷಧಿ ಕುಡಿಸಿ ಅವನು ಮತ್ತು ಅವನ ಸ್ನೇಹಿತರು ಆಕೆಯನ್ನು ಹತ್ತಿರದ ಕಾಡಿಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದರು. ಮರುದಿನ ಬೆಳಿಗ್ಗೆ ಸಂತ್ರಸ್ತೆ ಹತ್ತಿರದ ಗ್ರಾಮಕ್ಕೆ ಹೋಗಿ ಜನರಿಗೆ ಘಟನೆಯ ಮಾಹಿತಿ ನೀಡಿದಳು. ಈ ಪ್ರಕರಣದಲ್ಲಿ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಯ ಹುಡುಕಾಟ ಆರಂಭಿಸಿದರು.
ತಾಹಿರ್ ಅಲಿ ಸಹಜನವಾ ಪರಿಸರದಲ್ಲಿ ಇರುವುದು ತಿಳಿದ ನಂತರ ಪೊಲೀಸರು ಅವನನ್ನು ಸುತ್ತುವರೆದರು ಆಗ ತಾಹಿರನು ಅವರ ಮೇಲೆ ಗುಂಡಿನ ದಾಳಿ ನಡೆಸಿ ಅಲ್ಲಿಂದ ಓಡಲಾರಂಭಿಸಿದನು. ಪ್ರತ್ಯುತ್ತರವೆಂದು ಪೊಲೀಸರು ಹಾರಿಸಿರುವ ಗುಂಡು ಅವನ ಬಲಗಾಲಿಗೆ ತಾಗಿತು. ಅದರ ನಂತರ ಪೊಲೀಸರು ಅವನನ್ನು ಬಂಧಿಸಿದರು. ಉಳಿದ ಬಲತ್ಕಾರಿಗಳನ್ನು ಹುಡುಕುತ್ತಿದ್ದಾರೆ.
ಸಂಪಾದಕೀಯ ನಿಲುವುದೇಶದಲ್ಲಿರುವ ಅಲ್ಪಸಂಖ್ಯಾತರು ಅಪರಾಧದಲ್ಲಿ ಮಾತ್ರ ಬಹುಸಂಖ್ಯಾತರು ! ಸಮಾನ ನಾಗರಿಕ ಕಾನೂನಿಗೆ ವಿರೋಧ ವ್ಯಕ್ತಪಡಿಸುವ ಜನರಲ್ಲಿ ಯಾರಾದರೂ ಇಂತಹವರಿಗೆ ಶರಿಯತ್ ಕಾನೂನಿನ ಪ್ರಕಾರ ಸೊಂಟದವರೆಗೆ ಹುಗಿದು ಕಲ್ಲಿನಿಂದ ಹೊಡೆದು ಸಾಯಿಸುವ ಬೇಡಿಕೆ ಸಲ್ಲಿಸಿದರೆ ಅದಕ್ಕೆ ಆಶ್ಚರ್ಯ ಪಡಬಾರದು ! |