ನಾನು ಪುಣೆಯ ಸಂಸದನಾದ ನಂತರ ಟಿಪ್ಪು ಸುಲ್ತಾನಿನ ಸ್ಮಾರಕ ನಿರ್ಮಾಣ ಮಾಡುವೆ ! – ಅನಿಸ ಸುಂಡಕೆ

ಎಂ.ಐ.ಎಂ.ನ ಅಭ್ಯರ್ಥಿ ಅನಿಸ ಸುಂಡಕೆ ಇವರ ವಿವಾದಿತ ಹೇಳಿಕೆ !

ಅನಿಸ ಸುಂಡಕೆ

ಪುಣೆ – ‘ನಾನು ಪುಣೆಯ ಸಂಸದನಾದ ನಂತರ ಟಿಪ್ಪು ಸುಲ್ತಾನಿನ ಕಾರ್ಯ ಗಮನಿಸಿ ಅವರ ಭವ್ಯ ಸ್ಮಾರಕ ನಿರ್ಮಾಣ ಮಾಡುವೆ, ಎಂದು ಪುಣೆ ಲೋಕಸಭಾ ಮತದಾರ ಕ್ಷೇತ್ರದಲ್ಲಿ ಎಂ.ಐ.ಎಂ.ನ ಅಭ್ಯರ್ಥಿ ಅನಿಸ ಸುಂಡಕೆ ಇವರು ಘೋಷಿಸಿದರು. ಸುಂಡಕೆ ಮಾತು ಮುಂದುವರಿಸಿ, ”ಪುಣೆ ನಗರದಲ್ಲಿ ನಾಗರಿಕರಿಗೆ ಸಾರಿಗೆ ಸಮಸ್ಯೆ, ನೀರಿನ ಸಮಸ್ಯೆ, ನಿರುದ್ಯೋಗ ಜೊತೆಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಾನು ಪುಣೆ ನಗರದ ಸಂಸದನಾದ ನಂತರ ಇಲ್ಲಿಯ ನಾಗರಿಕರಿಗೆ ಎಲ್ಲಾ ಸಮಸ್ಯೆಗಳಿಂದ ಮುಕ್ತಗೊಳಿಸುವೆ ದೇಶದ ವಿವಿಧ ಮಹಾನ ವ್ಯಕ್ತಿಗಳ ಸ್ಮಾರಕಗಳು ಇವೆ. ಈ ಸ್ಮಾರಕಗಳ ಮುಖಾಂತರ ಹೊಸ ಪೀಳಿಗೆಗೆ ಅನೇಕ ಸ್ಮಾರಕಗಳು ಪ್ರೇರಣೆ ನೀಡುತ್ತವೆ. ಆದ್ದರಿಂದ ನಾನು ಪುಣೆಯ ಸಂಸದನಾದ ನಂತರ ಟಿಪ್ಪು ಸುಲ್ತಾನಿನ ಕಾರ್ಯ ಗಮನಿಸಿ ಭವ್ಯ ಸ್ಮಾರಕ ನಿರ್ಮಾಣ ಮಾಡುವೆ ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಛತ್ರಪತಿ ಶಿವಾಜಿ ಮಹಾರಾಜರ ಮಹಾರಾಷ್ಟ್ರದಲ್ಲಿ ಮತ್ತು ಅದು ಕೂಡ ಪುಣೆಯಲ್ಲಿ ಈ ರೀತಿಯ ಹೇಳಿಕೆ ನೀಡುವ ಧೈರ್ಯ ಮಾಡುವುದು ಎಂದರೆ ಹಿಂದೂಗಳಿಗೆ ಲಜ್ಜಾಸ್ಪಾದ !
  • ಲಕ್ಷಾಂತರ ಹಿಂದೂಗಳನ್ನು ಮತಾಂತರಗೊಳಿಸಿರುವ, ಸಾವಿರಾರು ದೇವಸ್ಥಾನಗಳನ್ನು ಧ್ವಂಸ ಮಾಡಿರುವ ಮತ್ತು ಅಸಂಖ್ಯಾತ ಹಿಂದುಗಳ ಮಾನ ಹಾಳು ಮಾಡಿರುವ ಕ್ರೂರ ಟಿಪ್ಪು ಸುಲ್ತಾನಿನ ಸ್ಮಾರಕ ಮಹಾರಾಷ್ಟ್ರದಲ್ಲಿ ನಿರ್ಮಾಣ ಮಾಡುವ ಬಗ್ಗೆ ಮಾತನಾಡುವುದು ಖೇದಕರ ! ಪೊಲೀಸರು ಈ ರೀತಿಯ ಪ್ರವೃತ್ತಿ ಇರುವವರ ಮೇಲೆ ಸಮಯದಲ್ಲಿಯೇ ಅಂಕುಶ ಇರಬೇಕು. ಹಿಂದುಗಳು ಈಗಲಾದರೂ ಎದ್ದೇಳುವರೇ ?
  • ಕ್ರೂರಿ ಟಿಪ್ಪು ಸುಲ್ತಾನಿನ ಸ್ಮಾರಕ ನಿರ್ಮಾಣ ಮಾಡುವವರು ನಾಳೆ ಅವನ ಹಾಗೆ ವರ್ತಿಸಲು ಆರಂಭಿಸಿದರೆ ಆಶ್ಚರ್ಯವೇನು !