ಜಾರ್ಖಂಡಿನ ಕಾಂಗ್ರೆಸ್ಸಿನ ಸಚಿವ ಅಲಮಗಿರ ಇವರ ಸಚಿವಾಲಯದ ಸಿಬ್ಬಂದಿಯ ಮನೆಯಲ್ಲಿ ೩೦ ಕೋಟಿ ರೂಪಾಯಿ ಪತ್ತೆ !

  • ಆಲಮ ಇವರ ಗ್ರಾಮವಿಕಾಸ ಸಚಿವಾಲಯದ ನಿವಿದ ಅನುದಾನದ ಹಗರಣ ಬಹಿರಂಗ !

  • ಮೊದಲು ಮುಖ್ಯ ಇಂಜಿನಿಯರ್ ಬಂಧನ, ತಮ್ಮದೇ ಸಚಿವಾಲಯದ ಸಿಬ್ಬಂದಿಯ ಮನೆಯಲ್ಲಿ ಕೋಟ್ಯಾಂತರ ರೂಪಾಯಿ !

ರಾಂಚಿ (ಜಾರ್ಖಂಡ್) – ಜಾರ್ಖಂಡದ ಗ್ರಾಮೀಣ ವಿಕಾಸ ಸಚಿವಾಲಯದಲ್ಲಿ ನಿವಿದ ಅನುದಾನ ಹಗರಣ ಪ್ರಕರಣದಲ್ಲಿ ಈಡಿ ಇಂದ ಕ್ರಮ ಕೈಗೊಳ್ಳಲಾಗಿದೆ. ಗ್ರಾಮಿಣ ವಿಕಾಸ ಸಚಿವ ಆಲಮಗಿರಿ ಆಲಮ ಇವರ ಕಾರ್ಯದರ್ಶಿ ಸಂಜೀವ ಲಾಲ್ ಇವರ ಸಿಬ್ಬಂದಿಯ ಮನೆಯ ಮೇಲೆ ನಡೆಸಿರುವ ದಾಳಿಯಲ್ಲಿ ಈಡಿಯಿಂದ ೩೦ ಕೋಟಿ ರೂಪಾಯಿ ನಗದು ಕೈ ಸೇರಿದೆ. ಇದಲ್ಲದೆ ಬೃಹತ್ ಪ್ರಮಾಣದ ಆಭರಣಗಳು ಕೂಡ ದೊರೆತಿವೆ ಎಂದು ಹೇಳಲಾಗಿದೆ. ಈಡಿ ಒಟ್ಟು ೬ ಸ್ಥಳದಲ್ಲಿ ದಾಳಿ ನಡೆಸಿದೆ.

ರಾಜ್ಯದ ಅಮಾನತುಕೊಂಡಿರುವ ಮುಖ್ಯ ಇಂಜಿನಿಯರ್ ವೀರೇಂದ್ರ ರಾಮ ಮತ್ತು ಅವರ ಆಪ್ತರ ಮನೆಯ ಮೇಲೆ ಕೂಡ ಈಡಿ ಕ್ರಮ ಕೈಗೊಳ್ಳುತ್ತಿದೆ. ಕೆಲವು ಯೋಜನೆಯಲ್ಲಿ ಕಾರ್ಯರೂಪಕ್ಕೆ ತರುವಲ್ಲಿ ಆನಿಯಮಿತತೆ ಕಂಡು ಬಂದಿದೆ ಮತ್ತು ಹಣದ ಅವ್ಯವಹಾರ ಆಗಿದೆ ಎಂದು ಸಂಶಯ ದೃಢಪಟ್ಟ ನಂತರ ಈಡಿಯಿಂದ ಕಳೆದ ವರ್ಷ ಫೆಬ್ರುವರಿಯಲ್ಲಿ ವೀರೇಂದ್ರ ರಾಮ ಇವರನ್ನು ಬಂಧಿಸಲಾಗಿತ್ತು. ಈಗ ಹೊಸದಾಗಿ ನಡೆದಿರುವ ದಾಳಿಯಿಂದ ಆಲಮಗಿರಿ ಆಲಮ ಇವರನ್ನು ಬಂದಿಸಲಾಗಬಹುದೆಂದು ಹೇಳಲಾಗುತ್ತಿದೆ.

೭೦ ವರ್ಷದ ಆಲಮಗಿರಿ ಆಲಮ ಇವರ ಮೇಲಿನ ಸಂದೇಹ ದೃಢವಾಗುತ್ತಿದ್ದು ಅದು ರಾಜ್ಯದಲ್ಲಿನ ಪಾಕುರದ ಕಾಂಗ್ರೆಸ್ಸಿನ ೪ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಈಗ ಅವರು ಗ್ರಾಮೀಣ ವಿಕಾಸ ಸಚಿವರಾಗಿದ್ದಾರೆ. ಅವರು ಈ ಪ್ರಕರಣದಲ್ಲಿ, ನನ್ನ ಕಾರ್ಯದರ್ಶಿ ಸಂಜೀವ ಲಾಲ ಇವರು ಈ ಹಿಂದೆ ಕೂಡ ಬೇರೆ ೨ – ೩ ಸಚಿವರ ಕಾರ್ಯದರ್ಶಿಯಾಗಿದ್ದು ಅವರ ಸಿಬ್ಬಂದಿಯ ಮನೆಯಲ್ಲಿ ಇಷ್ಟೊಂದು ಹಣ ದೊರೆತಿರುವುದರ ಬಗ್ಗೆ ನನಗೆ ಏನೂ ತಿಳಿದಿಲ್ಲ ಎಂದು ಹೇಳಿದ್ದಾರೆ.

೫ ವರ್ಷದ ಹಿಂದಿನ ಪ್ರಕರಣ !

ಈ ಪ್ರಕರಣ ಮೂಲತಃ ೨೦೧೯ ರಲ್ಲಿ ಆರಂಭವಾಗಿದೆ, ಯಾವಾಗ ಸುರೇಶ್ ಪ್ರಸಾದ ವರ್ಮಾ ಎಂಬ ಗ್ರಾಮೀಣ ವಿಕಾಸ ಸಚಿವಾಲಯದ ಓರ್ವ ಕಿರಿಯ ಇಂಜಿನಿಯರ್ ಗೆ ೧೦ ಸಾವಿರ ರೂಪಾಯಿ ಲಂಚ ಕೇಳಿರುವುದರಿಂದ ಅವರನ್ನು ಬಂಧಿಸಲಾಗಿತ್ತು. ಆಗ ಅವರ ಮನೆಯಿಂದ ೨ ಕೋಟಿ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿತ್ತು. ಅದರ ನಂತರ ಕಳೆದ ವರ್ಷ ಫೆಬ್ರುವರಿ ತಿಂಗಳಲ್ಲಿ ಕೂಡ ಈಡಿಯಿಂದ ಮುಖ್ಯ ಇಂಜಿನಿಯರ್ ವೀರೇಂದ್ರ ರಾಮ ಇವರ ೨೪ ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಇದರಲ್ಲಿ ದೊರೆತಿರುವ ದಾಖಲೆಯ ಆಧಾರದಲ್ಲಿ ಅವರ ವಿಚಾರಣೆ ಆರಂಭವಾಯಿತು ಮತ್ತು ನಂತರ ಅವರನ್ನು ಬಂಧಿಸಲಾಯಿತು. ಈ ಮುಖ್ಯ ಇಂಜಿನಿಯರನ ಪ್ರದೇಶದಿಂದ ೩೦ ಲಕ್ಷ ರೂಪಾಯಿ ಅಲ್ಲದೆ ಒಂದೂವರೆ ಕೋಟಿ ರೂಪಾಯಿಯ ಆಭರಣಗಳು ವಶಪಡಿಸಿಕೊಳ್ಳಲಾಗಿದೆ. ಹಾಗೂ ಈಡಿ ಇಂದ ೧೦೦ ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಸಂಪತ್ತಿ ಪತ್ತೆ ಮಾಡಿತ್ತು.

ಸಂಪಾದಕೀಯ ನಿಲುವು

ಭ್ರಷ್ಟಾಚಾರಿ ಕಾಂಗ್ರೆಸ್ ! ಈಗ ಇಂತಹ ಸಚಿವರನ್ನು ದಂಡಿಸಿ ಅವರ ಎಲ್ಲಾ ಸಂಪತ್ತಿ ವಶಪಡಿಸಿಕೊಳ್ಳಬೇಕು ಮತ್ತು ಅವರನ್ನು ಜೀವಾವಧಿ ಶಿಕ್ಷೆ ನೀಡಬೇಕು !