ನವ ದೆಹಲಿ – ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸಿದೆ. ಭಾರತವು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಪಡೆಯಲು ಬಲವನ್ನು ಬಳಸಬೇಕಾಗಿಲ್ಲ; ಏಕೆಂದರೆ ಅಲ್ಲಿನ ಜನರೇ ಭಾರತದ ಭಾಗವಾಗಲು ಬಯಸುತ್ತಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ ನೀಡಿದ್ದಾರೆ.
Rajnath Singh On POK: पाकव्याप्त काश्मीरचे लोक स्वत: भारताचा भाग बनू इच्छितात ! – संरक्षणमंत्री राजनाथ सिंह https://t.co/EIoAl04qo9
— Sanatan Prabhat (@SanatanPrabhat) May 5, 2024
ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಾಜನಾಥ್ ಸಿಂಗ್ ಅವರು,
1. ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸಿದ್ದು, ಶೀಘ್ರದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿದೆ; ಆದರೆ ಅದಕ್ಕೆ ಅವರು ಯಾವುದೇ ಗಡುವು ನೀಡಿಲ್ಲ.
2. “ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸುತ್ತಿರುವ ರೀತಿಯಲ್ಲಿ, AFSPA (ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ) ಅಗತ್ಯವಿಲ್ಲದ ಸಮಯ ಬರುತ್ತದೆ ಎಂದು ನಾನು ಭಾವಿಸುತ್ತೇನೆ. ಇದು ನನ್ನ ಅಭಿಪ್ರಾಯವಾಗಿದ್ದು, ಗೃಹ ಸಚಿವಾಲಯ ಈ ಬಗ್ಗೆ ತೀರ್ಮಾನಿಸಬೇಕಿದೆ.
3. ಮೇ 2020 ರಿಂದ ಭಾರತ ಮತ್ತು ಚೀನಾ ಸೇನೆಗಳ ನಡುವೆ ಘರ್ಷಣೆಗಳು ನಡೆಯುತ್ತಿವೆ. ಎರಡು ದೇಶಗಳ ನಡುವಿನ ಗಡಿ ವಿವಾದ ಇನ್ನೂ ಸಂಪೂರ್ಣವಾಗಿ ಬಗೆಹರಿದಿಲ್ಲ; ಆದರೆ, ಹಲವು ವಿವಾದಾತ್ಮಕ ವಿಚಾರಗಳಲ್ಲಿ ಎರಡೂ ಕಡೆಯವರು ಹಿಂದೆ ಸರಿದಿದ್ದಾರೆ ಎಂದು ಹೇಳಿದರು.