Canada legitimized separatist forces : ಕೆನಡಾವು ‘ಸ್ವಾತಂತ್ರ್ಯ’ ದ ಹೆಸರಿನಲ್ಲಿ ಪ್ರತ್ಯೇಕತಾವಾದಿ ಶಕ್ತಿಗಳನ್ನು ಕಾನೂನು ಬದ್ಧಗೊಳಿಸಿದೆ ! – ವಿದೇಶಾಂಗ ಸಚಿವ ಜೈ ಶಂಕರ

ನಿಜ್ಜರ ಹತ್ಯೆಯ ಪ್ರಕರಣದಲ್ಲಿ ಮೂವರು ಭಾರತೀಯರನ್ನು ಬಂಧಿಸಿದ ಪ್ರಕರಣ

ನವದೆಹಲಿ – ಕೆನಡಾ ಭಾರತದ ಮೇಲೆ ಆರೋಪ ಹೊರೆಸುವುದು ಅದರ ರಾಜಕೀಯ ಅನಿವಾರ್ಯತೆ ಆಗಿದೆ. ಕೆನಡಾದಲ್ಲಿ ಚುನಾವಣೆ ನಡೆಯುತ್ತಿದ್ದು ಮತ ರಾಜಕಾರಣ ನಡೆಯುತ್ತಿದೆ. ನಮ್ಮ ಎಲ್ಲಕ್ಕಿಂತ ದೊಡ್ಡ ಸಮಸ್ಯೆ ಇಂದು ಕೆನಡಾದಲ್ಲಿದೆ ; ಕಾರಣ ಅಲ್ಲಿಯ ಅಧಿಕಾರದಲ್ಲಿರುವ ಪಕ್ಷ ಮತ್ತು ಇತರ ರಾಜಕೀಯ ಪಕ್ಷಗಳು ಪ್ರತ್ಯೇಕತಾವಾದ, ಭಯೋತ್ಪಾದನೆ ಮತ್ತು ಹಿಂಸಾಚಾರದಲ್ಲಿ ತೊಡಗಿರುವ ಶಕ್ತಿಗಳ ಸಮರ್ಥನೆ ಮಾಡುತ್ತಿವೆ. ಸ್ವಾತಂತ್ರ್ಯದ ಹೆಸರಿನಡಿಯಲ್ಲಿ ಇಂತಹ ಶಕ್ತಿಗಳಿಗೆ ಕಾನೂನ ಬದ್ಧತೆಯ ರೂಪ ನೀಡುತ್ತಿದ್ದಾರೆ. ಈ ಬಗ್ಗೆ ನಾವು ಅವರಿಗೆ ಏನಾದರೂ ಕೇಳಿದರೆ, ಆಗ ಅವರು ನಮ್ಮದು ಪ್ರಜಾಪ್ರಭುತ್ವದ ದೇಶವಾಗಿದೆ ಎಂದು ಉತ್ತರ ನೀಡುತ್ತಾರೆ, ಎಂದು ಭಾರತದ ವಿದೇಶಾಂಗ ಸಚಿವರಾದ ಡಾ. ಎಸ್ ಜೈ ಶಂಕರ ಅವರು ಖಾರವಾಗಿಯೇ ಪ್ರತಿಕ್ರಿಯೆ ನೀಡಿದರು. ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ ಅವನ ಹತ್ಯೆಯ ಪ್ರಕರಣದಲ್ಲಿ ಕೆನಡಾ ಮೂವರು ಭಾರತೀಯರನ್ನು ಭಂದಿಸಿರುವುದ ಕುರಿತು ಜೈಶಂಕರ ಅವರ ನಿಲುವು ಮಂಡಿಸಿದರು. ಕೆನಡಾದ ಸಿಬಿಸಿ ವಾರ್ತಾವಾಹಿನಿ ನೀಡಿರುವ ಮಾಹಿತಿಯ ಪ್ರಕಾರ ಬಂಧನಗೊಂಡ ಮೂವರು ಕುಖ್ಯಾತ ರೌಡಿ ಲಾರೆನ್ಸ್ ಬಿಸ್ನೋಯಿ ಗುಂಪಿಗೆ ಸೇರಿದವರಾಗಿದ್ದಾರೆ.

ಜೈ ಶಂಕರ ಅವರು ಕೆನಡಾ ಮೇಲೆ ಅನೇಕ ಗಂಭೀರ ಆರೋಪ ಕೂಡ ಮಾಡಿದ್ದಾರೆ. ಜೈ ಶಂಕರ ಮಾತು :

೧. ಅನೇಕ ಬಾರಿ ಹೇಳಿದರೂ ಸಂಘಟಿತ ಅಪರಾಧಿ ಗುಂಪಿಗೆ ಕೆನಡಾದಿಂದ ಆಶ್ರಯ !

ಕೆನಡಾ ಬಂಧಿಸಿರುವ ಭಾರತೀಯರ ಮಾಹಿತಿ ಇಲ್ಲಿಯವರೆಗೆ ನಮಗೆ ನೀಡಿಲ್ಲ . ನಾವು ಅದನ್ನು ಕಾಯುತ್ತಿದ್ದೇವೆ. ಬಂಧನವಾಗಿರುವವರು ಶಂಕಿತ ಗುಂಪಿನ ಜೊತೆಗೆ ಸಂಬಂಧ ಇರುವುದಾಗಿ ತಿಳಿದಿದೆ. ಭಾರತವು ಅನೇಕ ಬಾರಿ ಹೇಳಿದರೂ ಪಂಜಾಬ ರಾಜ್ಯದಲ್ಲಿನ ಸಂಘಟಿತ ಅಪರಾಧಿ ಗುಂಪಿಗೆ ಕೆನಡಾ ಆಶ್ರಯ ನೀಡಿದೆ.

೨. ಕೆನಡಾದ ಪೊಲೀಸ್ ವ್ಯವಸ್ಥೆ ನಮಗೆ ಯಾವುದೇ ರೀತಿಯ ಸಹಕಾರ ನೀಡುತ್ತಿಲ್ಲ.

ನಿಜ್ಜರನ ಹತ್ಯೆಯ ಕುರಿತು ಏನೆಲ್ಲಾ ನಡೆಯುತ್ತಿದೆ, ಅದು ಕೆನಡಾದ ಆಂತರಿಕ ರಾಜಕಾರಣದಿಂದ ನಡೆಯುತ್ತಿದ್ದು ಭಾರತಕ್ಕೆ ಯಾವುದೇ ಸಂಬಂಧವಿಲ್ಲ. ಈ ಹತ್ಯೆಗೆ ಸಂಬಂಧಿಸಿ ಭಾರತದ ವಿರುದ್ಧ ಕೆನಡಾ ಬಳಿ ಯಾವುದೇ ಸಾಕ್ಷಿ ಇಲ್ಲ. ಅಲ್ಲಿಯ ಪೊಲೀಸ್ ವ್ಯವಸ್ಥೆ ನಮಗೆ ಯಾವುದೇ ಸಹಕಾರ ನೀಡುತ್ತಿಲ್ಲ.

೩ . ಕೆನಡಾದ ಖಲಿಸ್ತಾನಿ ಸಮರ್ಥಕ ಮತ ಪೆಟ್ಟಿಗೆ ರಾಜಕಾರಣ

ಕೆನಡಾದಲ್ಲಿ ಖಲಿಸ್ತಾನಿ ಸಮರ್ಥಕರಾಗಿರುವ ಕೆಲವರು ಸ್ವತಃ ರಾಜಕೀಯ ಮಟ್ಟದಲ್ಲಿ ಸಂಘಟಿತರಾಗಿದ್ದಾರೆ ಮತ್ತು ಅದಕ್ಕೆ ಒಂದು ಪ್ರಭಾವಶಾಲಿ ರಾಜಕೀಯ ಒತ್ತಡ ಹೇರುವ ಗುಂಪಿನ ರೂಪ ಪ್ರಾಪ್ತವಾಗಿದೆ. ಇಲ್ಲಿನ ಆಡಳಿತ ಪಕ್ಷಕ್ಕೆ ಆವಶ್ಯಕ ಸಂಸದರು ಇಲ್ಲದಿರುವುದರಿಂದ ಅವರಿಗೆ ಇಂತಹ ಕೆಲವು ಪಕ್ಷಗಳ ಮತ್ತು ನಾಯಕರ ಸಮರ್ಥನೆ ಅನಿವಾರ್ಯವಾಗಿದೆ. ಮತ ಪೆಟ್ಟಿಗೆಯ ಇಂತಹ ರಾಜಕಾರಣದ ದೊಡ್ಡ ಸಮಸ್ಯೆ ಇಂದಿನವರಿಗೆ ಅಮೇರಿಕಾದಲ್ಲಿ ನಿರ್ಮಾಣವಾಗಲಿಲ್ಲ ಆದರೆ ಕೆನಡಾದಲ್ಲಿ ನಿರ್ಮಾಣವಾಗಿದೆ.

೪. ನ್ಯೂಟನ್ ಸಿದ್ದಾಂತದ ಪ್ರಕಾರ ಪ್ರತಿಕ್ರಿಯೆ ನೀಡಲಾಗುವುದು !

ಕೆನಡಾ ಇದೊಂದನ್ನು ತಿಳಿದುಕೊಳ್ಳಬೇಕು, ಇಂದಿನ ಜಗತ್ತು ಏಕಮುಖವಾಗಿ ನಡೆಯುವುದಿಲ್ಲ. ಕ್ರಿಯೆ ನಡೆದರೆ ನ್ಯೂಟನಿನ ಸಿದ್ಧಾಂತದಂತೆ ರಾಜಕಾರಣದಲ್ಲಿಯೂ ಕೂಡ ಪ್ರತಿಕ್ರಿಯೆ ನೀಡಲಾಗುವುದು.

೫. ಶಂಕಿತರಿಗೆ ಸ್ಥಾನ ನೀಡಿ್ದರೆ ನಮ್ಮ ಸಂಬಂಧದ ಮೇಲೆ ಪರಿಣಾಮ ಬೀರುವುದು !

ಕೆನಡಾ ದೇಶವು ಪಂಜಾಬದಲ್ಲಿನ ಸಂಘಟಿತ ಅನೇಕ ಅಪರಾಧಿ ಗುಂಪನ್ನು ಸ್ವಾಗತಿಸಿದೆ. ಇವರು ಭಾರತದ ಅಪರಾಧಿಗಳಾಗಿದ್ದಾರೆಂದು ಅನೇಕ ಬಾರಿ ಕೆನಡಾಗೆ ತಿಳಿ ಹೇಳಿದ್ದೇವೆ, ಆದರೂ ನೀವು ಅವರಿಗೆ ವೀಸಾ ನೀಡುತ್ತಿದ್ದೀರಾ. ಅದರಲ್ಲಿನ ಅನೇಕ ಜನರು ನಕಲಿ ದಾಖಲೆಗಳನ್ನು ಸೃಷ್ಟಿಸಿ ನಿಮ್ಮ ಬಳಿ ಬಂದಿದ್ದಾರೆ, ಆದರೂ ನೀವು ಅವರಿಗೆ ಸ್ಥಾನ ನೀಡಿದ್ದೀರಾ. ನಿಮ್ಮ ರಾಜಕೀಯ ಉದ್ದೇಶಕ್ಕಾಗಿ ಬಂದಿರುವ ಇಂತಹ ಶಂಕಿತರಿಗೆ ನೀವು ಸ್ಥಾನ ನೀಡಿದರೆ ನಮ್ಮ ಸಂಬಂಧದ ಮೇಲೆ ಕೂಡ ಪರಿಣಾಮ ಉಂಟಾಗುವುದು. ಭಾರತದಿಂದ ಇಲ್ಲಿಯವರೆಗೆ ೨೫ ಜನರ ಪ್ರತ್ಯಾರ್ಪಣೆಯ ಮಾಹಿತಿ ನೀಡಿದರು ಕೂಡ ಕೆನಡಾ ಅವರನ್ನು ಭಾರತಕ್ಕೆ ಒಪ್ಪಿಸಲಿಲ್ಲ. ಇದರಲ್ಲಿ ಅನೇಕ ಜನರು ಖಲಿಸ್ತಾನಿ ಸಮರ್ಥಕರಾಗಿದ್ದಾರೆ ಎಂದು ಜೈಶಂಕರ ಸ್ಪಷ್ಟಪಡಿಸಿದರು.