ಅಡುಗೆ ತಯಾರಿಸುವ ಮಹಿಳೆಗೆ ಹಲವು ಬಾರಿ ಹೇಳಿದರೂ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿಲ್ಲ ಎಂಬ ಆರೋಪ !
ಬರೇಲಿ (ಉತ್ತರ ಪ್ರದೇಶ) – ಜಿಲ್ಲೆಯ ಬಿಥರಿ ಚೈನಪುರ ಗ್ರಾಮದಲ್ಲಿರುವ ಕಸ್ತೂರಬಾ ಶಾಲೆಯಲ್ಲಿ ನೀಡಿದ ಆಹಾರದಿಂದ (ಲಾಪ್ಶಿ) ಸೇವಿಸಿ 14 ವಿದ್ಯಾರ್ಥಿಗಳ ಆರೋಗ್ಯ ಹದಗೆಟ್ಟಿದೆ. ಅಸ್ವಸ್ಥ ಮಕ್ಕಳನ್ನು ತಕ್ಷಣವೇ ಬಿಥರಿ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಮಕ್ಕಳಿಗೆ ಆಹಾರದಿಂದ ವಿಷಬಾಧೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಸ್ವಸ್ಥರಾದ ವಿದ್ಯಾರ್ಥಿಗಳು ಮಾತನಾಡಿ, ನಮಗೆ ಹಲವು ದಿನಗಳಿಂದ ಹಾಳಾದ ಆಹಾರ ಸಿಗುತ್ತಿದೆ ಎಂದು ತಿಳಿಸಿದರು.
ಮೇ 1 ರಂದು ಸಂಜೆ ವಿದ್ಯಾರ್ಥಿಗಳಿಗೆ ನೀಡಿದ ಆಹಾರದಲ್ಲಿ ಅರ್ಧಂಬರ್ಧ ಬೆಂದ ಚಪಾತಿ , ಅನ್ನ ಪತ್ತೆಯಾಗಿದೆ. ತದನಂತರ ಮೇ 2ರ ಬೆಳಗ್ಗೆ ನೀಡಿದ ಆಹಾರ(ಲಾಪ್ಶಿ) ಚೆನ್ನಾಗಿರಲಿಲ್ಲ. ಅದನ್ನು ತಿಂದ ಮಕ್ಕಳು ಅಸ್ವಸ್ಥರಾದರು. ಈ ಬಗ್ಗೆ ವಾರ್ಡನ್ ಅನಿತಾ ಮಾತನಾಡಿ, ಅಡುಗೆ ಮಾಡುವ ಮಹಿಳೆಯು ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುವುದಿಲ್ಲ. ಆಕೆಗೆ ಹಲವು ಬಾರಿ ಹೇಳಲಾಗಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವು
|