ಒಂದೇ ಹೆಸರಿನ ಅಭ್ಯರ್ಥಿಗಳನ್ನು ಒಂದೇ ಚುನಾವಣಾ ಕ್ಷೇತ್ರದಿಂದ ಸ್ಪರ್ಧಿಸುವುದನ್ನು ನಿಷೇಧಿಸಲು ಸಾಧ್ಯವಿಲ್ಲ ! – ಸರ್ವೋಚ್ಚ ನ್ಯಾಯಾಲಯ

ನವದೆಹಲಿ – ಚುನಾವಣೆಯಲ್ಲಿ ಒಂದೇ ಹೆಸರಿರುವ ಅಭ್ಯರ್ಥಿಗಳನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ. ನ್ಯಾಯಾಲಯವು, ‘ಒಬ್ಬರ ಹೆಸರು ರಾಹುಲ್ ಗಾಂಧಿ ಅಥವಾ ಲಾಲು ಪ್ರಸಾದ್ ಯಾದವ್ ಆಗಿದ್ದು ಮತ್ತು ಅದೇ ಕ್ಷೇತ್ರದಲ್ಲಿ ಅದೇ ಹೆಸರಿನ ಇತರ ಅಭ್ಯರ್ಥಿಗಳಿದ್ದರೆ, ಅವರನ್ನು ಚುನಾವಣೆಗೆ ಸ್ಪರ್ಧಿಸದಂತೆ ತಡೆಯಲು ಸಾಧ್ಯವಿಲ್ಲ’ ಎಂದು ಹೇಳಿದೆ.

1. ಜನಪ್ರಿಯ ಕ್ಷೇತ್ರಗಳಲ್ಲಿ ನಿಂತಿರುವ ಅಭ್ಯರ್ಥಿಯ ಹೆಸರಿನಲ್ಲಿ ಬೇರೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಹಳೆಯ ತಂತ್ರವಾಗಿದೆ. ಇದರಿಂದ ಮತದಾರರ ಮನದಲ್ಲಿ ಗೊಂದಲ ಸೃಷ್ಟಿಯಾಗುವುದು. ಒಂದೇ ರೀತಿಯ ಹೆಸರುಗಳಿಂದ ಜನರು ತಪ್ಪು ಅಭ್ಯರ್ಥಿಗೆ ಮತ ಹಾಕುತ್ತಾರೆ ಮತ್ತು ಯೋಗ್ಯ ಅಭ್ಯರ್ಥಿಗೆ ಹಾನಿ ಉಂಟಾಗುತ್ತದೆ. ಪ್ರತಿಸ್ಪರ್ಧಿ ರಾಜಕೀಯ ಪಕ್ಷಗಳು ಉದ್ದೇಶಪೂರ್ವಕವಾಗಿ ಇಂತಹ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತವೆ. ಅದಕ್ಕೆ ಪ್ರತಿಯಾಗಿ ನಾಮನಿರ್ದೇಶಿತ ಅಭ್ಯರ್ಥಿಯು ಹಣ, ಸರಕು ಮತ್ತು ಇತರ ಅನೇಕ ಪ್ರಯೋಜನಗಳನ್ನು ಪಡೆಯುತ್ತಾನೆ ಎಂದು ಅರ್ಜಿದಾರ ಸಾಬು ಸ್ಟೀಫನ್ ಅರ್ಜಿಯಲ್ಲಿ ತಿಳಿಸಿದ್ದಾರೆ.

2. ಈ ಬಗ್ಗೆ ನ್ಯಾಯಾಲಯವು, ಮಕ್ಕಳ ಹೆಸರನ್ನು ಅವರ ಪೋಷಕರು ಇಡುತ್ತಾರೆ. ಒಬ್ಬರ ಪೋಷಕರು ಮಗುವಿನ ಹೆಸರನ್ನು ಬೇರೆಯವರ ಹೆಸರಾಗಿ ಇಟ್ಟಿದ್ದರೆ, ಅವರನ್ನು ಚುನಾವಣೆಗೆ ಸ್ಪರ್ಧಿಸದಂತೆ ತಡೆಯುವುದು ಹೇಗೆ ? ಇದರಿಂದ ಅವರ ಹಕ್ಕುಗಳ ಮೇಲೆ ಪರಿಣಾಮ ಬೀರುವುದಿಲ್ಲವೇ ? ಎಂದು ಹೇಳಿದೆ.